ಪರಿಷತ್ ಚುನಾವಣೆ: ಅಭ್ಯರ್ಥಿ ಹಿಂದಕ್ಕೆ, ಲಕ್ಷ್ಮಣ ಸವದಿ ಹಾದಿ ಸುಗಮ

ಬೆಂಗಳೂರು, ಫೆಬ್ರವರಿ 15: ವಿಧಾನಪರಿಷತ್ ಚುನಾವಣೆ ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಅವರು ಕಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದು, ಡಿಸಿಎಂ ಲಕ್ಷ್ಮಣ ಸವದಿ ಹಾದಿ ಸುಗಮವಾಗಿದೆ.

ಚುನಾವಣೆಯಲ್ಲಿ ಸೋತರೂ ಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರು ನಿಯಮಗಳ ಅನುಸಾರ ಮಂತ್ರಿಯಾದ ಆರು ತಿಂಗಳ ಒಳಗಾಗಿ ಚುನಾವಣೆ ಗೆಲ್ಲಲೇ ಬೇಕಾಗಿತ್ತು. ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಘೋಷಣೆಯಾದ ಚುನಾವಣೆಗೆ ನಾಮಪತ್ರ ಸಲ್ಲಿದ್ದರು.

ವಿಧಾನಪರಿಷತ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಆಗುವ ಕನಸು ಕಾಣುತ್ತಿದ್ದ ಲಕ್ಷ್ಮಣ ಸವದಿ ವಿರುದ್ಧವಾಗಿ ಅನಿಲ್ ಕುಮಾರ್ ಅವರು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದರು. ಇದು ಲಕ್ಷ್ಮಣ ಸವದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

Legislative Assembly Election: Candidate Took Nomination Back

ಸೋತರೂ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡ ಲಕ್ಷ್ಮಣ ಸವದಿ ಮೇಲೆ ಈಗಾಗಲೇ ಬಿಜೆಪಿ ಒಳಗೆ ಕೆಲವರು ಅಸಮಾಧಾನ ಹೊಂದಿದ್ದರು. ಚುನಾವಣೆ ನಡೆದರೆ ನಮ್ಮವರೇ ನನ್ನನ್ನು ಸೋಲಿಸುವ ಸಾಧ್ಯತೆ ಇದೆ ಎಂದು ಅರಿತ ಲಕ್ಷ್ಮಣ ಸವದಿ ಅನಿಲ್ ಕುಮಾರ್ ಅವರು ನಾಮಪತ್ರ ಹಿಂಪಡೆಯುವಂತೆ ಮಾಡಲು ಸತತ ಪ್ರಯತ್ನ ಮಾಡಿದ್ದರು.

ಸ್ವಾಮೀಜಿಗಳು, ಕೆಲವು ಹಿರಿಯ ನಾಯಕರುಗಳಿಂದ ಹೇಳಿಸಿದ ಬಳಿಕ ಈಗ ಅನಿಲ್ ಕುಮಾರ್ ಅವರು ನಾಮಪತ್ರ ಹಿಂಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಆ ಮೂಲಕ ಲಕ್ಷ್ಮಣ ಸವದಿ ಹಾದಿ ಸುಗಮವಾಗಿದೆ.

ಪೂರ್ವನಿಗದಿಯಂತೆ ಫೆಬ್ರವರಿ 17 ರಂದು ವಿಧಾನಪರಿಷತ್‌ಗೆ ಚುನಾವಣೆ ನಡೆಯಬೇಕಿತ್ತು. ಆದರೆ ಅನಿಲ್ ಕುಮಾರ್ ಅವರು ನಾಮಪತ್ರ ಹಿಂಪಡೆದರೆ ಮತದಾನ ನಡೆಯದೇ ಲಕ್ಷ್ಮಣ ಸವದಿ ಅವರನ್ನು ವಿಜೇತರೆಂದು ಘೋಷಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+