Ganiga Ravi: 'ತಮಿಳು ನಟರನ್ನು ನೋಡಿ ಕಲಿರಿ' - ಸ್ಯಾಂಡಲ್‌ವುಡ್ ಕಲಾವಿದರಿಗೆ ತಿವಿದ ಗಣಿಗ ರವಿ
ಕಾಂಗ್ರೆಸ್ ಶಾಸಕ ರವಿ ಗಣಿಗ ಡಿಸಿಎಂ ಡಿಕೆ ಶಿವಕುಮಾರ್ ಅವರ ನಟ್ಟು ಬೋಲ್ಟು ಹೇಳಿಕೆ ಪರ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮ ನೆಲ, ಜಲ, ಭಾಷೆ ವಿಚಾರದಲ್ಲಿ ನಾವೆಲ್ಲಾ ಒಗ್ಗಾಟಾಗಿ ನಿಲ್ಲಬೇಕು. ಆದರೆ ಕಲಾವಿದರು ನಮ್ಮ ಜಲ ವಿಚಾರದಲ್ಲಿ ಭಾಗಿಯಾಗಿಲ್ಲ ಎಂದು ರವಿ ಗಣಿಗ ಆಕ್ರೋಶ ಹೊರಹಾಕಿದ್ದಾರೆ.
'ಮೇಕೆದಾಟು ಹೋರಾಟದಲ್ಲಿ ಸಿನಿಮಾ ಕಲಾವಿದರು ಭಾಗಿಯಾಗಿಲ್ಲ. ಮೇಕೆದಾಟು ಹೋರಾಟದಿಂದ ನಮ್ಮ ಕಾಂಗ್ರೆಸ್ ಕಚೇರಿಗೆ ಮಾತ್ರ ನೀರು ಬರುವುದಿಲ್ಲ. ಬೆಂಗಳೂರಿಗರಿಗೆ ನೀರು ಕೊಡಲು, ಈ ರಾಜ್ಯದ ಜನರಿಗೆ ನೀರು ಕೊಡಲು ಮೇಕೆದಾಟು ಹೋರಾಟ ಮಾಡಿದ್ದು. ಈ ಹೋರಾಟವನ್ನು ಕಾಂಗ್ರೆಸ್ ಪಕ್ಷವೇ ಮಾಡಲಿ, ಬಿಜೆಪಿ ಪಕ್ಷವೇ ಮಾಡಲಿ ಅಥವಾ ಜೆಡಿಎಸ್ ಪಕ್ಷವೇ ಮಾಡಲಿ ಸಿನಿಮಾ ನಟರು ಭಾಗವಹಿಸಬೇಕಾಗಿತ್ತು. ಆದರೆ ಭಾಗವಹಿಸಿಲ್ಲ' ಎಂದು ಕಿಡಿ ಕಾರಿದ್ದಾರೆ.

'ತಮಿಳು ನಟರನ್ನು ನೋಡಿ ಕಲಿರಿ'
'ತಮಿಳುನಾಡಿನ ನಟರನ್ನು ನೋಡಿ ಕಲಿರಿ. ಅಲ್ಲಿ ಯಾವ ಪಕ್ಷದವರು ಕರೆ ಕೊಟ್ಟರೂ ಕೂಡ ಅಲ್ಲಿನ ಖ್ಯಾತ ನಟ ರಜನಿಕಾಂತ್ ಅವರು ಸೇರಿದಂತೆ ಅಲ್ಲಿನ ಎಲ್ಲಾ ನಟರು ಭಾಗವಹಿಸುತ್ತಾರೆ. ಲಿಂಗ ಸಿನಿಮಾ ರೀಲೀಸ್ ಆದಾಗ ಇಲ್ಲಿ ತೊಂದರೆ ಆಗುತ್ತದೆ ಎಂದು ರಜಿನಿಕಾಂತ್ ಅವರು ಕ್ಷಮೆ ಕೇಳಿದರು. ನಾನು ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ರಜನಿಕಾಂತ ಕೇಳಲಿಲ್ವಾ? ತಮಿಳುನಾಡಿನ ನಟರನ್ನು ನೋಡಿ ನೆಲ, ಜಲ, ಭಾಷೆಯ ವಿಚಾರದಲ್ಲಿ ಒಗ್ಗಟ್ಟಾಗಿ ನಿಲ್ಲುತ್ತಾರೆ' ಎಂದು ಆಕ್ರೋಶ ಹೊರ ಹಾಕಿದರು.
ಕಲಾವಿದರ ಮನೆಗಳಿಗೆ ನೀರು ಬಂದ್ ಮಾಡೋಣ್ವಾ?
'ಮೇಕೆಡಾಟು ಹೋರಾಟದಿಂದ ಕಾಂಗ್ರೆಸ್ ಪಕ್ಷದ ಕಚೇರಿಗೆ ಮಾತ್ರ ನೀರು ಬರುವುದಿಲ್ಲ. ಕನ್ನಡಿಗರಿಗೆ, ಕರ್ನಾಟಕಕ್ಕೆ, ಬೆಂಗಳೂರಿಗೆ ನೀರು ತರಲು ಮಾಡಿದ ಹೋರಾಟ ಅದು. ಬೆಂಗಳೂರಿನಲ್ಲಿ ಈ ಕಲಾವಿದರು ನೀರು ಕುಡಿಯಲ್ವಾ? ಚಿತ್ರ ನಟರ ಮನೆ ಇರುವುದು ಎಲ್ಲಿ? ಬೆಂಗಳೂರಿನಲ್ಲಿ ತಾನೇ ಅವರೆಲ್ಲಾ ವಾಸ ಆಗಿರೋದು? ಇವರು ಹೋರಾಟದಲ್ಲಿ ಭಾಗಿ ಆಗಿಲ್ಲ ಎಂದು ನಾವು ನಲ್ಲಿ ಪೈಪ್ ಕಟ್ ಮಾಡಿಸೋಣ್ವಾ?' ಎಂದು ಕಲಾವಿದರ ವಿರುದ್ಧ ಗಣಿಗ ರವಿ ಕಿಡಿ ಕಾರಿದ್ದಾರೆ.
ಜೊತೆಗೆ ಮತ್ತಷ್ಟು ಖಾರವಾಗಿ ನುಡಿದ ರವಿ ಅವರು, 'ಇದು ರವಿಕುಮಾರ್‌ದು ಹೋರಾಟ ಅಲ್ಲ. ಇದು ಕನ್ನಡಿಗರ ಧ್ವನಿ. ಕನ್ನಡಿಗರ ಧ್ವನಿಯನ್ನು ನಾನು ಮಾತನಾಡುತ್ತಿದ್ದೇನೆ. ಕನ್ನಡದ ನೆಲ, ಜಲ, ಭಾಷೆ ರಕ್ಷಣೆಯ ವಿಚಾರದಲ್ಲಿ ಎಲ್ಲಾರು ಒಗ್ಗಾಟಾಗಿ ಇರಬೇಕು. ಆದರೆ ಕಲಾವಿದರು ಮೇಕೆದಾಟು ಹೋರಾಟದಲ್ಲಿ ಇರಲಿಲ್ಲ. ಅವರಿಗೆ ನೀರು ಬೇಡ್ವಾ? ಅವರ ಮನೆ ನೀರಿನ ನಲ್ಲಿ ಬಂದ್ ಮಾಡೋಣ್ವಾ?' ಎಂದು ಪ್ರಶ್ನೆ ಮಾಡಿದ್ದಾರೆ.

ನೆಲ, ಜಲ, ಭಾಷೆ ಹೋರಾಟದಲ್ಲಿ ಕಲಾವಿದರು ಗೈರು
'ನಾವು ರಾಜಕೀಯ ಹೋರಾಟದಲ್ಲಿ ಕಲಾವಿದರನ್ನು ಭಾಗಿಯಾಗಿ ಎಂದು ಕರೆ ಕೊಟ್ಟಿಲ್ಲ. ಕೇಂದ್ರದ ವಿರುದ್ಧ ಪೆಟ್ರೋಲ್ ವಿಚಾರವಾಗಿ ಹೋರಾಟ ಮಾಡಿದಾಗ ನಾವು ಕಲಾವಿದರು ಬಂದು ಭಾಗಿಯಾಗಿ ಎಂದು ಕರೆದಿಲ್ಲ. ಈ ನೆಲ, ಜಲ, ಭಾಷೆಯ ವಿಚಾರದಲ್ಲಿ ಹೋರಾಟ ಮಾಡುವಾಗ ಕಲಾವಿದರು ಇರಬೇಕಿತ್ತು. ಯಾಕೆ ಇರಲಿಲ್ಲ' ಎಂದು ರವಿ ಪ್ರಶ್ನೆ ಮಾಡಿದ್ದಾರೆ.
ಡಿಕೆ ಶಿವಕುಮಾರ್ ನಟ್ಟು ಬೋಲ್ಟು ಹೇಳಿಕೆ
ಬೆಂಗಳೂರಿನಲ್ಲಿ ಫಿಲ್ಮ ಫೆಸ್ಟಿವಲ್ ಉದ್ಘಾಟನೆಯಾದ ದಿನ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 'ಫಿಲ್ಮ ಫೆಸ್ಟಿವಲ್ ಸಿನಿಮಾ ರಂಗದ ಏಳಿಗೆಯ ಪ್ರತೀಕ. ಇದರಲ್ಲಿ ಭಾಗಿಯಾಗದೇ ಇರುವುದು ಸರಿಯಲ್ಲ. ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಅವರ ಸಿನಿಮಾಗಳನ್ನು ಥಿಯೇಟರ್‌ಗೆ ಬರದಂತೆ ತಡೆಯುವುದು ನಮಗೆ ಗೊತ್ತಿಲ್ಲಾ? ಅವರ ನಟ್ಟು ಬೋಲ್ಟ್ ಟೈಟ್ ಮಾಡುವುದು ನಮಗೆ ಬರಲ್ವಾ? ನಮಗೂ ಎಲ್ಲಾ ಗೊತ್ತಿದೆ' ಎಂದು ಕಲಾವಿದರಿಗೆ ಬಿಸಿ ಮುಟ್ಟಿಸಿದ್ದರು.
ಇದೇ ವಿಚಾರ ಈಗ ವಿಪಕ್ಷಗಳ ದಾಳಿಗೆ ಅಸ್ತ್ರವಾಗಿದ್ದು ಸ್ಯಾಂಡಲ್‌ವುಡ್ ನಿರ್ಮಾಪಕರು, ನಿರ್ದೇಶಕರು ತಿರುಗಿ ಬಿದ್ದಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಹೇಳಿಕೆಯ ವಿರುದ್ಧ ವಿಪಕ್ಷಗಳ ಹಾಗೂ ಕಲಾವಿದರು ಧ್ವನಿ ಎತ್ತಿದ್ದಾರೆ.
-
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ತಮಿಳುನಾಡು ಚುನಾವಣೆ 2026: ಟಿವಿಎಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications