SWR: ಸಕಲೇಶಪುರದಲ್ಲಿ ರೈಲು ಪ್ರಯಾಣಿಕರ ಪರದಾಟ: ನಿಲ್ದಾಣದಲ್ಲೇ ಊಟ-ತಿಂಡಿ ವ್ಯವಸ್ಥೆ, ರೈಲುಗಳು ಸಂಚಾರ ರದ್ದು

ಬೆಂಗಳೂರು: ಸಕಲೇಶಪುರ ವ್ಯಾಪ್ತಿಯ ಯಡಕುಮಾರ-ಶ್ರೀವಾಗಿಲು ಮಧ್ಯದ ಹಳಿಗಳ ಮೇಲೆ ನಿರಂತರ ಮಳೆಗೆ ಗುಡ್ ಕುಸಿದ ಪರಿಣಾಮ ರೈಲು ಸಂಚರಕ್ಕೆ ಅಡಚಣೆ ಉಂಟಾಗಿದೆ. ಕರಾವಳಿ ಹಾಗೂ ಬೆಂಗಳೂರು ಸಂಪರ್ಕಿಸುವ ವಿವಿಧ ರೈಲುಗಳ ಸಂಚಾರ ರದ್ದಾಗಿದೆ. ಇತ್ತ ಪ್ರಯಾಣಿಕರು ನಿಲ್ದಾಣದಲ್ಲೇ ಪರದಾಡಿದ್ದು, ಅವರಿಗೆ ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಕಾನ್‌ಸ್ಟೇಬಲ್‌ ಪರೀಕ್ಷೆಗೆ ಬೆಂಗಳೂರಿನತ್ತ ಬರುತ್ತಿದ್ದ ವಿದ್ಯಾರ್ಥಿಗಳು ಪರದಾಡಿದ್ದು ಕಂಡು ಬಂತು.

ಎರಡು ನಿಲ್ದಾಣಗಳ ನಡುವೆ ಗುಡ್ಡ‌ ಕುಸಿದ ಪರಿಣಾಮ ಅದನ್ನು ತೆರವು ಮಾಡಿ ಮೊದಲಿನಂತೆ ರೈಲುಗಳ ಸಂಚಾರಕ್ಕೆ ಪುನರ್ ಸ್ಥಾಪನೆ ಕಾರ್ಯ ಕೈಗೊಳ್ಳಲಾಗಿದೆ. ಇದೇ ವೇಳೇ ಬೆಂಗಳೂರು - ಕಾರವಾರ ಪಂಚಂಗಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ (16595) ತೆರಳುತ್ತಿದ್ದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಸಂಚಾರ ಅಸ್ತವ್ಯಸ್ತವಾದ ಕಾರಣ ನೂರಾರು ಪ್ರಯಾಣಿಕರು ಸಕಲೇಶರಪುರ ನಿಲ್ದಾಣದಲ್ಲಿ ಸಿಲುಕಿದರು. ಅವರಿಗೆ ನಿಲ್ದಾಣದಲ್ಲಿ ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ.

Landslide on Track

ಈ ಕುರಿತು ನೈಋತ್ಯ ರೈಲ್ವೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಪ್ರಯಾಣಿಕರಿಗೆ ಅಗತ್ಯ ವ್ಯವಸ್ಥೆ ಮಾಡಿದ್ದು, ಆದ ತೊಂದರೆಗೆ ಸಹಕರಿಸಿದ ಪ್ರಯಾಣಿಕರ ತಾಳ್ಮೆ ಶ್ಲಾಘನೀಯ ಎಂದು ಹೇಳಿದೆ. ಪುನಃಸ್ಥಾಪನೆ ಕಾರ್ಯ ಮುಗಿಯುತ್ತಿದ್ದಂತೆ ಎಂದಿನಂತೆ ರಲು ಸಂಚಾರ ಶುರುವಾಗಲಿದೆ ಎಂದು ರೈಲ್ವೆ ಭರವಸೆ ನೀಡಿದೆ.

ಪೊಲೀಸ್ ಪರೀಕ್ಷಾ ವಿದ್ಯಾರ್ಥಿಗಳ ಪರದಾಟ

ಇನ್ನೂ ಆಗಸ್ಟ್ 2ರಂದು ಬೆಂಗಳೂರಿನಲ್ಲಿ ನಿಗದಿ ಆಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆಂದು ಕರಾವಳಿ ಭಾಗದ ಪ್ರಯಾಣಿಕರು ಆಗಮಿಸುತ್ತಿದ್ದರು. ಈ ವೇಳೆ ರೈಲು ಅಡಚಣೆಯಿಂದ ಅವರು ತೊಂದರೆ ಅನುಭವಿಸಿದರು. ನಡುರಾತ್ರಿ ಪರ್ಯಾಯ ಸಂಚಾರಕ್ಕೆ ಅವಕಾಶ ಸಿಗದೇ ವಿದ್ಯಾರ್ಥಿಗಳು/ಉದ್ಯೋಗಾಕಾಂಕ್ಷಿಗಳು ಪರದಾಡಿದರು.

ವಿವಿಧ ರೈಲುಗಳ ಸಂಚಾರ ರದ್ದು

ಹಳಿ ಮೇಲೆ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು -ಮುರಡೇಶ್ವರ ಎಕ್ಸ್‌ಪ್ರೆಸ್ ರೈಲು ಹಾಗೂ ಬೆಂಗಳೂರು ಕೋಝಿಕೋಡ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೂ ರದ್ದಾದ ರೈಲುಗಳನ್ನು ಪರ್ಯಾಯ ಮಾರ್ಗದಲ್ಲಿ ಓಡಿಸಲಾಗುತ್ತದೆ. ಇದರಿಂದ ಹಾಲಿ ಮಾರ್ಗದಲ್ಲಿನ ನಿಲ್ದಾಣಗಳಲ್ಲಿ ನಿಲುಗಡೆ ರದ್ದಾಗಿದೆ. ತೀವ್ರ ಮಳೆ, ಗಾಳಿ ಪರಿಣಾಮ ಕೇವಲ ಒಂದು ಮಾರ್ಗ ಅಲ್ಲದೇ ಇಡೀ ರಾಜ್ಯದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಸದ್ಯ ಸೋಮವಾರದ ಹೊತ್ತಿಗೆ ಹಾಸನ-ಮಂಗಳೂರು ಮಾರ್ಗದಲ್ಲಿ ಎಂದಿನಂತೆ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+