ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ರೇವಣ್ಣನ ಪರ ಸಮರ್ಥನೆಗಿಳಿದ ಕುಮಾರಸ್ವಾಮಿ
Recommended Video

ಬೆಂಗಳೂರು, ಆಗಸ್ಟ್ 20: ಪರಿಹಾರ ಶಿಬಿರಕ್ಕೆ ಭೇಟಿ ಕೊಟ್ಟು ನಿರಾಶ್ರಿತರಿಗೆ ಬಿಸ್ಕೆಟ್ ಪ್ಯಾಕೆಟ್ ಎಸೆದ ಸಚಿವ ರೇವಣ್ಣ ಅವರ ವರ್ತನೆಯ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನವನ್ನು ಸಿಎಂ ಕುಮಾರಸ್ವಾಮಿ ಮಾಡಿದ್ದಾರೆ.
ರೇವಣ್ಣ ಅವರ ವರ್ತನೆ ಬಗ್ಗೆ ಕೆಟ್ಟ ಅರ್ಥ ಕಲ್ಪಿಸುವುದು ಬೇಡ ಎಂದಿರುವ ಅವರು, ರೇವಣ್ಣ ಅವರು ಕಳೆದ ನಾಲ್ಕೈದು ದಿನಗಳಿಂದಲೂ ನಿರಾಶ್ರಿತರಿಗೆ ಹಾಲು, ಆಹಾರ, ಬಟ್ಟೆ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸದಲ್ಲಿ ನಿರತರಾಗಿದ್ದಾರೆ ಒಂದು ಶಿಬಿರದಲ್ಲಿ ಮಾತ್ರ ಜನಜಂಗುಳಿಯಿಂದ ಹೀಗಾಗಿದೆ ಎಂದಿದ್ದಾರೆ.
ರೇವಣ್ಣ ಅವರು, ದರ್ಪದಿಂದ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ನಿರಾಶ್ರಿತರ ಶಿಬಿರದ ಜನರ ಕಡೆಗೆ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ರೇವಣ್ಣ ಬಿಸ್ಕೆಟ್ ಎಸೆದಿದ್ದು ತಪ್ಪು ಎಂದು ಕುಮಾರಸ್ವಾಮಿ ಒಪ್ಪಿಕೊಂಡರಾದರೂ, ಜನ-ಜಂಗುಳಿ ಹೆಚ್ಚಿಗಿದ್ದ ಕಾರಣ ಆ ರೀತಿಯ ಅಚಾತುರ್ಯ ಆಗಿದೆ, ಅವರು ಮಾನವೀಯತೆಯಿಂದಲೇ ಕೊಡಗು ಜನರಿಗೆ ಸಹಾಯ ಮಾಡುತ್ತಿದ್ದಾರೆ, ವಿಷಯವನ್ನು ದೊಡ್ಡದು ಮಾಡುವುದು ಬೇಡ ಎಂದಿದ್ದಾರೆ.
ರೇವಣ್ಣ ಅವರು ನಿರಾಶ್ರಿತರ ಬಗ್ಗೆ ಕಳಕಳಿ ಹೊಂದಿದ್ದಾರೆ, ಅವರು ಬೇಜವಾಬ್ದಾರಿಯಿಂದ ಕೆಲಸ ಮಾಡುವುದಿಲ್ಲ, ಒಂದು ಅಚಾತುರ್ಯವನ್ನು ವಿಜೃಂಭಿಸುವುದು ಸರಿಯಲ್ಲ ಎಂದು ಅವರು ಮನವಿ ಮಾಡಿದ್ದಾರೆ.











Click it and Unblock the Notifications