ಒಂದು ದಿನದ ಮೇಲುಕೋಟೆ ಪ್ರವಾಸಕ್ಕೆ ಹೋಗಿ ಬನ್ನಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 09 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೇಲುಕೋಟೆಯಲ್ಲಿ ಜರುಗುವ ವೈರಮುಡಿ ಉತ್ಸವಕ್ಕಾಗಿ ಒಂದು ದಿನದ ಪ್ರವಾಸವನ್ನು ಮಾರ್ಚ್ 19ರಂದು ಆಯೋಜಿಸಿದೆ.

ಬೆಂಗಳೂರಿನ ಬಾದಾಮಿ ಹೌಸ್‍ನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗುವ ವ್ಯವಸ್ಥೆ ಮಾಡಲಾಗಿದೆ. ಹವಾ ನಿಯಂತ್ರಿತವಲ್ಲದ ಬಸ್ಸಿನಲ್ಲಿ ಪ್ರಯಾಣಿಸಲು 550 ರೂ. ಮತ್ತು ಹವಾನಿಯಂತ್ರಿತ ಬಸ್ಸಿನ ಪ್ರಯಾಣ ದರ 650 ರೂ. ಎಂದು ನಿಗದಿಪಡಿಸಲಾಗಿದೆ. [ಮೇಲುಕೋಟೆಗೆ ಕೇಳಿದ್ದು 500 ಕೋಟಿ ರು ಸಿಕ್ಕಿದ್ದು 20 ಕೋಟಿ]

kstdc

ಜೋಗ ಜಲಪಾತದಲ್ಲಿ ನೀರನ್ನು ಬಿಡುತ್ತಿರುವುದರಿಂದ ಸಿಗಂದೂರು, ಜೋಗ ಜಲಪಾತ ಪ್ರವಾಸವನ್ನು ಪ್ರತಿ ಶುಕ್ರವಾರ, ಶನಿವಾರದಂದು ಆಯೋಜಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. [ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ]

ನಿಗಮದಲ್ಲಿ ಪ್ರವಾಸ ಹಾಗೂ ವಸತಿ ಕಾಯ್ದಿರಿಸುವ ವ್ಯವಸ್ಥೆಯೂ ಇದೆ. ಹೆಚ್ಚಿನ ಮಾಹಿತಿಗೆ www.karnatakaholidays.net ವೆಬ್ ಸೈಟ್‌ಗೆ ಭೇಟಿ ನೀಡಬಹುದು ಅಥವ ಬೆಂಗಳೂರು ಮಹಾನಗರಪಾಲಿಕೆ ಮುಂಭಾಗದಲ್ಲಿರುವ ಬಾದಾಮಿ ಹೌಸ್‌ನಲ್ಲಿನ ಕಚೇರಿಗೆ ಭೇಟಿ ನೀಡಬಹುದಾಗಿದೆ. ದೂರವಾಣಿ ಸಂಖ್ಯೆ 43344334, 22275869, 8970650070.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka tourism development corporation (KSTDC) organized one day tour to the famous Vairmudi Festival at Melukote, Mandya district for the convenience of pilgrims on March 19th 2016 by super deluxe bus. For further details visit www.karnatakaholidays.net website.
Please Wait while comments are loading...