KSRTC Award: ಪ್ರತಿಷ್ಠಿತ 5 ರಾಷ್ಟ್ರೀಯ 1 ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಿಗಮ ಭಾಜನ
ಬೆಂಗಳೂರು, ಮಾರ್ಚ್ 14: ಪ್ರಯಾಣಿಕರಿಗೆ ವಿಶೇಷ ಪ್ರಯಾಣದ ಅನುಭವ ನೀಡಲು ಹೊಸ ಹೊಸ ಬಸ್‌ಗಳನ್ನು ಪರಿಚಯಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.
ತನ್ನ ವಿಶಿಷ್ಟ ಸೇವೆಗಳ ಮೂಲಕವೇ ರಾಜ್ಯಾಧ್ಯಂತ ಮನೆ ಮಾತಾಗಿರುವ, ಎಲ್ಲ ವಿಧದ ಪ್ರಯಾಣಿಕರಿಗೆ ಅಚ್ಚುಮೆಚ್ಚಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ಈಗಾಗಲೇ ಹತ್ತಾರು ಪ್ರಶಸ್ತಿಗಳನ್ನು ಪಡೆದಿದೆ.

ಹೊಸದಾಗಿ 06 ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಪಾತ್ರವಾಗುವ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಈ ಪ್ರಶಸ್ತಿಗಳನ್ನು ಇದೇ ತಿಂಗಳು ಬೇರೆ ಬೇರೆ ರಾಜ್ಯಗಳಲ್ಲಿ ಪಡೆಯಲಿದೆ. ಈ ಸಂತಸವನ್ನು ನಿಗಮವು ಹಂಚಿಕೊಂಡಿದೆ. ಹಾಗಾದರೆ ಯಾವೆಲ್ಲ ಪ್ರಶಸ್ತಿಗಳು ಸಿಕ್ಕಿವೆ ಎಂಬ ಮಾಹಿತಿ ಇಲ್ಲಿದೆ.
* ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ ಪಂಜಾಬ್ ನಾಯಕತ್ವ ಪ್ರಶಸ್ತಿ KSRTC ಗೆ ಲಭಿಸಿದೆ. ಇದನ್ನು ನಿಗಮದ ಮುಖ್ಯಸ್ಥರು ಇದೇ ತಿಂಗಳ ಮಾರ್ಚ್ 15ರಂದಿ ಚಂಢೀಗಡ್ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವೀಕರಿಸಲಿದ್ದಾರೆ.

* ಅತ್ಯುತ್ತಮ ಗ್ರಾಹಕ ಸೇವಾ ಉಪಕ್ರಮಕ್ಕಾಗಿ 'ಉದ್ದಿಮೆಯ ಸ್ಟಾರ್ ಆಪ್ ಎಕ್ಸಲೆನ್ಸ್' ಪ್ರಶಸ್ತಿಯನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇದೇ ತಿಂಗಳ ಮಾರ್ಚ್ 21ರಂದು ನೀಡಿ ಗೌರವಿಸಲಾಗುವುದು.
* ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸತತ ವಿನೂತನ ಉಪಕ್ರಮಗಳ ಜಾರಿಗಾಗಿ ನಿಗಮಕ್ಕೆ 'ರಾಷ್ಟ್ರೀಯ ಅತ್ಯುತ್ತಮ ಉದ್ಯೋಗ ಬ್ರ್ಯಾಂಡ್ ಪ್ರಶಸ್ತಿ' ನೀಡಲಾಗುತ್ತಿದೆ. ಇದು ಸಹ ಮಾರ್ಚ್ 21ರಂದು ದೆಹಲಿಯಲ್ಲಿ ಸ್ವೀಕರಿಸಲಾಗುವುದು.
* ಮಾನವ ಸಂಪನ್ಮೂಲ ಉಪಕ್ರಮ ಸಾಧನೆಗಾಗಿ 'ಗೌರ್ವನೆನ್ಸ್ ನೌ 10ನೇ ಸಾರ್ವಜನಿಕ ಉದ್ದಿಮೆಗಳ ಪ್ರಶಸ್ತಿ' ಯನ್ನು ಮಾರ್ಚ್ 22ರಂದು ದೆಹಲಿಯಲ್ಲಿ ನಿಗಮವು ಪಡೆಯಲಿದೆ.
* ಅದೇ ರೀತಿ 'ಈಶಾನ್ಯ ಭಾರತ ನಾಯಕತ್ವ ಪ್ರಶಸ್ತಿ'ಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (KSRTC) ಅತ್ಯುತ್ತಮ ವಿನೂತನ ವಾಹನ ಸಮೂಹ ನಿರ್ವಹಣೆಗೆ ದೊರೆಯಲಿದೆ. ಇದನ್ನು ಅಸ್ಸಾಂ ರಾಜ್ಯದ ಗುವಾಹಟಿ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಿದೆ.
* ದಕ್ಷಿಣ ಆಫ್ರಿಕಾ ನಾಯಕತ್ವ ಪ್ರಶಸ್ತಿಯು ನಿಗಮಕ್ಕೆ ಅತ್ಯುತ್ತಮ ಉಪಕ್ರಮ ವರ್ಗದಡಿ *ಬಸ್ ಬ್ರಾಂಡ್ ನಿರ್ವಹಣೆ ಗಾಗಿ ಲಭಿಸಿರುತ್ತದೆ.
ಸಾರಿಗೆ ಇಲಾಖೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಕ್ಟಿವ್ ಆಗಿದೆ. ನಿಗಮದಡಿ ಕಾರ್ಯನಿರ್ವಹಣೆಗೆ. ಪಲ್ಲಕ್ಕಿ, ಅಶ್ವಮೇಧ, ಅಂಬಾರಿ ಉತ್ಸವ ನಂತಹ ಮಲ್ಟಿ ಆಕ್ಸೆಲ್ ಬಸ್‌ಗಳನ್ನು ಪರಿಚಯಿಸಿದೆ. ಆದಷ್ಟು ಶೀಘ್ರವೇ ನಿಗಮ ವ್ಯಾಪ್ತಿಯಲ್ಲಿ 500 ಎಲೆಕ್ಟ್ರಿಕ್ ಬಸ್ ಸೇರಿದಂತೆ ಒಟ್ಟು 2000 ಬಸ್‌ಗಳನ್ನು ಪರಿಚಯಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿತ್ತು.












Click it and Unblock the Notifications