KSRTC: ವಾರಾಂತ್ಯ ರಜೆ ಹಿನ್ನೆಲೆ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ
KSRTC: ರಾಜ್ಯದ ಜೀವನಾಡಿ ಸಾರಿಗೆಗಳಲ್ಲಿ ಒಂದಾಗಿರುವ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ಬಸ್‌ಗಳ ಸೇವೆಯನ್ನೂ ಒದಗಿಸುತ್ತಲಿರುತ್ತದೆ. ಅದರಲ್ಲೂ, ಹಬ್ಬಗಳ-ಹರಿದಿನಗಳ ಸಮಯಗಳಲ್ಲಿ ದಟ್ಟಣೆ ನಿಯಂತ್ರಿಸಲು ಇಂತಹ ಕ್ರಮ ತೆಗೆದುಕೊಳ್ಳುತ್ತಿರುತ್ತದೆ. ಇದೀಗ ವಾರಾಂತ್ಯ ರಜೆಗೆಂದು ಇಂದಿನಿಂದ ಅಂದರೆ, ಜನವರಿ 23ರಿಂದ ಬೆಂಗಳೂರಿನಿಂದ ರಾಜ್ಯದ ಹಲವು ಭಾಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ. ಹಾಗಾದ್ರೆ ಈ ಸೇವೆ ಎಲ್ಲಿಯವರೆಗೂ ಇರಲಿದೆ ಹಾಗೂ ಯಾವೆಲ್ಲಾ ಮಾರ್ಗಗಳಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೌದು.. 'ಕಡುನಾಡ ರಥ' ಅಂತಲೇ ಕರೆಸಿಕೊಳ್ಳುವ ಕೆಎಸ್‌ಆರ್‌ಟಿಸಿ ರಾಜ್ಯದ ಜೀವನಾಡಿ ಸಾರಿಗೆಗಳಲ್ಲಿ ಒಂದಾಗಿದೆ. ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ಬೇಡಿಕೆ ಮೇರೆಗೆ ಇದರ ಹೆಚ್ಚುವರಿ ಸೇವೆಯನ್ನು ನೀಡಲಾಗುತ್ತದೆ. ಅದರಲ್ಲೂ ವಾರಾಂತ್ಯ ಹಾಗೂ ಸುದೀರ್ಘ ರಜೆ ವೇಳೆ ತುಂಬಾ ಜನರು ಬೆಂಗಳೂರಿನಿಂದ ತಮ್ಮ ಊರುಗಳತ್ತ ಪ್ರಯಾಣ ಮಾಡುತ್ತಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸತ್ತಲೇ ಬಂದಿದೆ.

ಹೆಚ್ಚುವರಿ ಬಸ್‌ಗಳ ಸೇವೆ: ಹಾಗೆಯೇ ಇದೀಗ ವಾರಾಂತ್ಯ ರಜೆ ಹಾಗೂ ಗಣರಾಜ್ಯೋತ್ಸವ ಇರುವ ಹಿನ್ನೆಲೆ ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಜನವರಿ 23ರಿಂದ ಜನವರಿ 25ರ ವರೆಗೂ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಹಾಗಾದ್ರೆ ಸಮಯ, ಹಾಗೂ ಬಸ್‌ಗಳನ್ನು ಎಲ್ಲಿ ಹತ್ತಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಮಯ, ಮಾರ್ಗಗಳ ವಿವರ: ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ದಿಂದ ಜನವರಿ 23ರಂದು ರಾತ್ರಿ 8 ಗಂಟೆ ನಂತರ ಹಾಸನ, ಅರಕಲಗೂಡು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ತುರುವೇಕೆರೆ, ತುಮಕೂರು, ಹೊಸದುರ್ಗ, ಪಾವಗಡ, ಚಿತ್ರದುರ್ಗ, ಚಳ್ಳಕೆರೆ, ಹೊಸಪೇಟೆ, ಬಳ್ಳಾರಿ ರಾಯಚೂರು, ಧರ್ಮಸ್ಥಳ, ಗದಗ, ಹಾವೇರಿ, ಹುಬ್ಬಳ್ಳಿಗೆ 265 ಬಸ್, ಜನವರಿ 24ರಿಂದ 500 ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.
ಅಷ್ಟೇ ಅಲ್ಲದೆ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಜನವರಿ 23, 24 ಹಾಗೂ 25ರಂದು 180 ಬಸ್‌ಗಳು ಓಡಲಿವೆ ಎಂದು ತಿಳಿಸಿದೆ. ಹೀಗೆ ವಿಶೇಸ ಸಂದರ್ಭಗಳಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ಸೇವೆಯನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಜನಸ್ನೇಹಿ ಸಾರಿಗೆ ಅಂತಲೂ ಗುರುತಿಸಿಕೊಂಡಿದೆ.
ಹೀಗೆ ಯಾವಗೆಲ್ಲಾ ಹಬ್ಬ-ಹರಿದಿನಗಳು, ವಿಶೇಷ ಸಂದರ್ಭಗಳಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ಸೇವೆ, ಹೊಸ ಮಾರ್ಗಗಳಿಗೆ ಬಸ್ ಸೇವೆಯನ್ನೂ ಒದಗಿಸುತ್ತಲೇ ಬಂದಿದೆ. ಅಷ್ಟೇ ಅಲ್ಲದೆ, ಕೈಗೆಟಕುವ ದರದಲ್ಲಿ ಟೂಪ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಿದೆ.
ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ: ಇನ್ನೂ ದಾವಣಗೆರೆ ವಿದ್ಯುತ್ ಚಾಲಿತ ಸುಮಾರು 50 ರಿಂದ 100 ಹೊಸ ಎಲೆಕ್ಟ್ರಿಕ್ ಬಸ್ಸುಗಳು ಬರಲಿದ್ದು, ಇವುಗಳನ್ನು ನಗರ ಮತ್ತು ಹರಿಹರದ ನಡುವಿನ ಸಂಚಾರಕ್ಕೆ ಬಳಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಲ್ಲಿ ಮಾಹಿತಿ ನೀಡಿದರು.ನಗರದಲ್ಲಿ ಪ್ರೀಪೇಯ್ಡ್ ಆಟೋ ರಿಕ್ಷಾ ವ್ಯವಸ್ಥೆ ಯಶಸ್ವಿ ಆಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನು ನಾಲ್ಕು ಕಡೆಗಳಲ್ಲಿ ಇಂತಹ ನಿಲ್ದಾಣಗಳನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಟೋ ರಿಕ್ಷಾಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ತುಂಬುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್‍ಐಆರ್ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿ ದ್ವಿಚಕ್ರ ವಾಹನ ಸವಾರರು ಮತ್ತು ಎಲೆಕ್ಟ್ರಿಕ್ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಅವರು ಹೇಳಿದರು.












Click it and Unblock the Notifications