KSRTC: ರಾಜ್ಯಾದ್ಯಂತ 300 ಎಲೆಕ್ಟ್ರಿಕ್ ಬಸ್‌ಗಳ ಪರಿಚಯ: ಜೂನ್‌ಗೆ ಎಷ್ಟು, ಎಲ್ಲೆಲ್ಲಿ ಕಾರ್ಯಾಚರಣೆ?
ಮಂಗಳೂರು, ಮಾರ್ಚ್ 23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿಸುವಲ್ಲಿ ನಿರತವಾಗಿದೆ. ಕರ್ನಾಟಕ ರಾಜ್ಯದ್ಯಂತ 300 ಇವಿ ಬಸ್ ರಸ್ತೆಗೆ ಇಳಿಸಲು ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಇಷ್ಟು ವರ್ಷಗಳ ಶ್ರಮದ ಫಲವಾಗಿ ಮುಂದಿನ ಜೂನ್ ತಿಂಗಳಲ್ಲಿ ಒಂದಷ್ಟು ಪರಿಸರ ಸ್ನೇಹಿ KSRTC ಬಸ್‌ಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ.
ಹೌದು, ಒಟ್ಟು ವೆಚ್ಚ ಒಪ್ಪಂದ (GCC) ಅಡಿಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮವು ರಾಜ್ಯಾದ್ಯಂತ 300 ಇವಿ ಬಸ್ ಪರಿಚಯಲು ಮುಂದಾಗಿದೆ. ಆದರೆ ಎಲ್ಲ ಕಡೆಗಳಲ್ಲಿ ಒಂದೆ ವೇಳೆಗೆ ಎಲ್ ಬಸ್‌ಗಳು ರಸ್ತೆಗೆ ಇಳಿಯುವುದು ಅನುಮಾನ. ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೂ ಜಾಗ ಗುರುತಿಸಲಾಗಿದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಹತ್ತಾರು ಎಲೆಕ್ಟ್ರಿಕ್ ಸಾರಿಗೆ ಬಸ್‌ಗಳು ಒಡಾಡುವ ದಿನಗಳು ದೂರವಿಲ್ಲ.

2025ರಲ್ಲಿ ಪರಿಸರ ಸ್ನೇಹಿ ಬಸ್‌ಗಳು ರಸ್ತೆಗೆ
2024ರಲ್ಲಿ ಜೂನ್ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಸೇವೆ ನೀಡಬೇಕಿದ್ದ KSRTC ಇವಿ ಬಸ್‌ಗಳು ಕಾರಣಾಂತರಳಿಂದ ತಡವಾಗಿದೆ. ಇದೀಗ ಮುಂದಿನ ಜೂನ್ 2025ರಲ್ಲಿ ಪರಿಸರ ಸ್ನೇಹಿ ಬಸ್‌ಗಳು ರಸ್ತೆಗೆ ಇಳಿಯುವುದು ಬಹುತೇಕ ಖಚಿತವಾಗಿದೆ. ಸಂಚಾರ ಮಾರ್ಗದ ವೇಳಾಪಟ್ಟಿ ನೀಡಿದಲ್ಲಿ, ಕರಾವಳಿಗೆ ನಿಗಮವು ಇವಿ ಬಸ್‌ಗಳನ್ನು ಕೊಡುಗೆಯಾಗಿ ನೀಡಲು ಸಿದ್ದವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ 45 ವಿದ್ಯುತ್ ಬಸ್‌ಗಳು ಹಾಗೂ ಪುತ್ತೂರು ಸಾರಿಗೆ ಘಟಕಕ್ಕೆ 40 ಬಸ್‌ಗಳು ಸಿಗಲಿವೆ. ಮಂಗಳೂರಿಗೆ ವಿದ್ಯುತ್ ಬಸ್‌ಗಳ ಆಗಮನ ಖಚಿತವಾಗಿದೆ. ಪುತ್ತೂರು ವಿಭಾಗಕ್ಕೆ ಎಷ್ಟು ಎಂಬುದು ಫೈನಲ್ ಆಗಬೇಕಿದೆ. ಈ ಇವಿ ಬಸ್‌ಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದು ಆರಂಭಿಕ (ಟೆಂಡರ್) ಹಂತದಲ್ಲಿದೆ. ಸದ್ಯ ಕೆಎಸ್‌ಆರ್‌ಟಿಸಿ ಕರಾವಳಿ ಬಸ್ ಮಾರ್ಗಗಳ ಪಟ್ಟಿ ಕೇಳಿದೆ. ಅದನ್ನು ನೀಡಿ ಬಿಟ್ಟರೆ ಮುಂದಿನ ಮೂರೇ ತಿಂಗಳಲ್ಲಿ ಕರವಳಿಯ ಮಂಗಳೂರು, ಉಡುಪಿಯಲ್ಲಿ ಇವಿ ಬಸ್‌ಗಳು ಪ್ರಯಾಣಿಸುತ್ತವೆ ಎಂದು ಘಟಕದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಲಿರುವ ಒಟ್ಟು 300 ವಿದ್ಯುತ್ ಬಸ್‌ಗಳಲ್ಲಿ ವಿವಿಧ ಕೆಎಸ್‌ಆರ್‌ಟಿಸಿ ವಿಭಾಗ, ಘಟಕಗಳಿಗೆ ಹಂಚಿಕೆ ಮಾಡಲಾಗಿದೆ.
ಮೂರು ಚಾರ್ಜಿಂಗ್ ಕೇಂದ್ರಗಳನ್ನು ಉದ್ದೇಶಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಹೆಚ್ಚಿನ ಉತ್ತೇಜ ನೀಡಲಾಗುತ್ತಿದೆ. ಇದೇ ಭಾಗದಲ್ಲಿಯೇ ಮೂರು ಚಾರ್ಜಿಂಗ್ ಕೇಂದ್ರ ತಲೆಎತ್ತಲಿವೆ. ಕುಂಟಿಕಾನ, ಮಂಗಳೂರು ಬಸ್ ನಿಲ್ದಾಣ ಮತ್ತು ಉಡುಪಿ ಬಸ್ ನಿಲ್ದಾಣದಲ್ಲಿ ಸ್ಥಾಪನೆಯಾಗುವ ಸಾದ್ಯತೆ ಇದೆ.
ಈ ಮಾರ್ಗದಲ್ಲಿ ವಿದ್ಯುತ್ ಬಸ್‌ಗಳು ಹೆಚ್ಚು ಲಭ್ಯ
ಕರಾವಳಿ ಭಾಗದ ಧರ್ಮಸ್ಥಳ- ಮಂಗಳೂರು ಮಾರ್ಗದಲ್ಲಿ ಬಸ್‌ಗಳು ಆಗಾಗ ಕೆಟ್ಟು ನಿಲ್ಲುತ್ತಿವೆ. ಹೀಗಾಗಿ ಸಾರಿಗೆ ನಿಗಮದ ಅಧಿಕಾರಿಗಳು ದೋಷಪೂರಿತ ಬಸ್‌ಗಳನ್ನು ಬಿಟ್ಟು ಇವಿ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಓಡಿಸಲು ತಿರ್ಮಾನಿಸಿದ್ದಾರೆ. ಧರ್ಮಸ್ಥಳ-ಮಂಗಳೂರು-ಪುತ್ತೂರು ವ್ಯಾಪ್ತಿಯಲ್ಲಿ ಹೆಚ್ಚು ವಿದ್ಯುತ್ ಬಸ್ ಸೇವೆಗೆ ನಿಯೋಜನೆಗೊಳ್ಳಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪೂರ್ಣ ಚಾರ್ಜ್ ಮಾಡಿದರೆ 300 ಕಿ.ಮೀ ಪ್ರಯಾಣ
ಇನ್ನೂ ಮಂಗಳೂರು ಘಟಕಕ್ಕೆ ಸಿಗುವ ಇವಿ ಬಸ್‌ಗಳು ಹೆಚ್ಚಾಗಿ ಮಂಗಳೂರು-ಕಾಸರಗೋಡು, ಉಡುಪಿ-ಮಂಗಳೂರು-ಮಣಿಪಾಲ್ ಹಾಗೂ ಬೈಂದೂರು- ಭಟ್ಕಳ, ಮಂಗಳೂರು, ಬೆಳ್ತಂಗಡಿ, ಉಡುಪಿ, ಹೊನ್ನಾವರ ಸೇರಿದಂತೆ ಮುಂದಾದ ಮಾರ್ಗಗಳಲ್ಲಿ ಓಡಾಡಲಿವೆ. ಒಂದು ಬಸ್ ಪೂರ್ಣ ಚಾರ್ಜ್ ಆದರೆ ಅಂದಾಜು 300 ಕಿ.ಮೀ. ಓಡಾಡುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಬೆಂಗಳೂರಿನಂತಹ ದೂರು ನಗರಗಳಿಗೆ ಇವಿ ಬಸ್‌ಗಳು ಬಾರದೇ, ಸದ್ಯಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚಾರ ಸೇವೆ ನೀಡಲಿವೆ. ಬಸ್ ಸೇವೆ ಆರಂಭಿಸುವ ಹೊತ್ತಿಗೆ ಬಸ್ ಚಾರ್ಜಿಂಗ್ ಸ್ಟೇಷನ್ ಸಹ ಸ್ಥಾಪನೆ ಮಾಡುವ ಜವಾಬ್ದಾರಿ KSRTC ನಿಗಮದ ಅಧಿಕಾರಿಗಳ ಮೇಲಿದೆ.












Click it and Unblock the Notifications