ಕೆಎಸ್ ಆರ್ ಟಿಸಿ ಪ್ರಯಾಣ ದರ ಶೇ. 10 ಇಳಿಕೆ

ಬೆಂಗಳೂರು, ಜು. 05: ಕೊನೆಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಾಗರಿಕರಿಗೆ ಸಿಹಿ ಸುದ್ದಿಯನ್ನು ನೀಡಿದೆ ಆದರೆ ಸಿಮೀತ ಅವಧಿಗೆ ಮಾತ್ರ! ನಿಗಮ ಪ್ರತಿಷ್ಠಿತ ಸಾರಿಗೆ ವಾಹನಗಳ ಪ್ರಯಾಣ ದರವನ್ನು ಶೇ.10ರಷ್ಟು ಕಡಿತಗೊಳಿಸಿದೆ.

ಆದರೆ ಶನಿವಾರ ಹಾಗೂ ಭಾನುವಾರ ಸಂಚರಿಸುವ ಪ್ರಯಾಣಿಕರಿಗೆ ಈ ದರ ಅನ್ವಯವಾಗುವುದಿಲ್ಲ. ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಪ್ರಯಾಣಿಸುವ ಪ್ರಯಾಣಿಕರಿಗೆ ರಿಯಾಯಿತಿ ಸಿಗಲಿದೆ.[ಪೀಣ್ಯದಿಂದ ಕಣ್ಣೂರು, ಕಲ್ಲಿಕೋಟೆಗೆ ರಾಜಹಂಸ ಸೇವೆ]

ksrtc

ರಾಜಹಂಸ, ವೈಭವ, ಐರಾವತ, ಐರಾವತ ಮಲ್ಟಿ ಆಕ್ಸೆಲ್, ಎಸಿ ಸ್ಲೀಪರ್, ನಾನ್ ಎಸಿ ಸೀಪರ್, ಬ್ಲಿಸ್, ಸುಪೀರಿಯಾ ವಾಹನಗಳಿಗೆ ಹೊಸ ದರ ಅನ್ವಯವಾಗಲಿದೆ. ಜುಲೈ 1ರಿಂದ ಈ ಕಡಿತದ ದರ ಜಾರಿಯಾಗಿದ್ದು, ಸೆಪ್ಟೆಂಬರ್ ಕೊನೆವರೆಗೆ ರಿಯಾಯಿತಿ ಸಿಗಲಿದೆ. ಈ ಸಮಯದಲ್ಲಿ ಜನರ ಓಡಾಟ ಕಡಿಮೆ ಇದ್ದು ಗ್ರಾಹಕರನ್ನು ಸೆಳೇಯಲು ಹೊಸ ಕ್ರಮ ಅನಿಸರಿಸಲಾಗಿದೆ.[ಐರಾವತ ಡೈಮಂಡ್ ಕ್ಲಾಸ್ ಬಸ್ ವಿಶೇಷತೆಗಳು]

ಎಲ್ಲ ಹೊಸ ರಿಯಾಯಿತಿ ಮಾಹಿತಿಯನ್ನು ಕೆಎಎಸ್ ಆರ್ ಟಿಸಿ ವೆಬ್ ತಾಣದಲ್ಲೂ ವೀಕ್ಷಣೆ ಮಾಡಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+