KSRTC; ಬಸ್‌ಗಳ ಬಾಡಿಗೆ ದರ ಪರಿಷ್ಕರಣೆ, ಹೊಸ ದರ ಪಟ್ಟಿ
ಬೆಂಗಳೂರು, ಜುಲೈ 28; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬಸ್‌ಗಳ ಬಾಡಿಗೆ ದರಗಳನ್ನು ಪರಿಷ್ಕರಣೆ ಮಾಡಿದೆ. ಬಸ್‌ಗಳ ಪ್ರಯಾಣ ದರವನ್ನು ಕಿ. ಮೀ.ಗೆ 2 ರೂ. ನಿಂದ 5 ರೂ. ತನಕ ಏರಿಕೆ ಮಾಡಲಾಗಿದೆ. ಬಸ್ ಬಾಡಿಗೆಗೆ ಪಡೆಯುವ ಮುನ್ನ ಹೊಸ ದರವನ್ನು ತಿಳಿಯಿರಿ.
ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ದರವು ಜಾರಿಗೆ ಬರಲಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಆದರೆ ಈ ಹಿಂದೆಯೇ ಬಾಡಿಗೆ ಬುಕ್ ಮಾಡಿದ ಒಪ್ಪಂದಗಳಿಗೆ ಹಿಂದಿನ ದರವೇ ಇರಲಿದೆ ಎಂದು ನಿಗಮ ಸ್ಪಷ್ಟನೆಯನ್ನು ನೀಡಿದೆ.

ಪ್ರವಾಸ, ಮದುವೆ ಹಾಗೂ ಇನ್ನಿತರ ಉದ್ದೇಶಗಳಿಗೆ ಸಾಂದರ್ಭಿಕ ಒಪ್ಪಂದದ ಮೇರೆಗೆ ಬಸ್‌ಗಳನ್ನು ಕೆಎಸ್ಆರ್‌ಟಿಸಿ ನೀಡುತ್ತದೆ. ಈ ಬಸ್‌ಗಳ ಬಾಡಿಗೆ ದರವನ್ನು ಏರಿಕೆ ಮಾಡಲಾಗಿದೆ. ಈ ಮೊದಲು ಕನಿಷ್ಠ 300 ಕಿ. ಮೀ. ಪ್ರಯಾಣ ನಿಗದಿ ಮಾಡಲಾಗಿತ್ತು, ಈಗ ಅದನ್ನು 350ಕ್ಕೆ ಪರಿಷ್ಕರಣೆ ಮಾಡಲಾಗಿದೆ.
ವಾರದ ಎಲ್ಲಾ ದಿನ ಏಕರೂಪ ದರ; ಕೆಎಸ್ಆರ್‌ಟಿಸಿ ಈ ಹಿಂದೆ ವಾರದ ದಿನಗಳು ಮತ್ತು ವಾರಾಂತ್ಯಕ್ಕೆ ಪ್ರತ್ಯೇಕ ಬಾಡಿಗೆ ದರವನ್ನು ನಿಗದಿ ಮಾಡಿತ್ತು. ಆದರೆ ಪರಿಷ್ಕೃತ ಆದೇಶದ ಪ್ರಕಾರ ವಾರದ ಎಲ್ಲಾ ದಿನಗಳಿಗೆ ಏಕರೂಪದ ಬಾಡಿಗೆ ನಿಗದಿ ಮಾಡಲಾಗಿದೆ.
ಅಲ್ಲದೇ ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ವಾಹನಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ಪ್ರಯಾಣ ದರ, ಯಾವ ಬಸ್‌ಗೆ ಎಷ್ಟು? ಎಂಬ ಮಾಹಿತಿಯನ್ನು ಕೆಎಸ್ಆರ್‌ಟಿಸಿ ನೀಡಿದೆ.
ಕರ್ನಾಟಕ ಸಾರಿಗೆ ಬಸ್‌ನ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ. ಆಗಿದೆ. ರಾಜ್ಯದೊಳಗೆ ಪ್ರತಿ ಕಿ. ಮೀ. ಬಾಡಿಗೆ ದರ 47 ರೂ. ಮತ್ತು ಹೊರ ರಾಜ್ಯಕ್ಕೆ 50 ರೂ. ಆಗಿದೆ.
ರಾಜಹಂಸ ಎಕ್ಸಿಕ್ಯುಟಿವ್ ಕ್ಲಾಸ್ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ.. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 48 ರೂ. ಮತ್ತು ಹೊರ ರಾಜ್ಯದಲ್ಲಿ 53 ರೂ. ಗಳು.
ರಾಜಹಂಸ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ. ಎಂದು ಪ್ರಕಟಣೆ ಹೇಳಿದೆ. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 51 ರೂ. ಮತ್ತು ಹೊರ ರಾಜ್ಯದಲ್ಲಿ 55 ರೂ. ಗಳು ಆಗಿದೆ.
ರಾಜಹಂಸ (12 ಮೀ. ಚಾಸಿಸ್) ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ. ಆಗಿದೆ. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 53 ರೂ. ಮತ್ತು ಹೊರ ರಾಜ್ಯದಲ್ಲಿ 57 ರೂ. ಗಳು.
ಮೈಸೂರು ನಗರ ಸಾರಿಗೆ ಸೆಮಿ ಲೋ ಪ್ಲೋರ್ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 300 ಕಿ. ಮೀ.. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 40 ರೂ. ಗಳು.
ಮಿಡಿ ಬಸ್ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 300 ಕಿ. ಮೀ.. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 40 ರೂ.ಗಳಾಗಿವೆ.
ನಾನ್ ಎಸಿ ಸ್ಲೀಪರ್ ಬಸ್ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 400 ಕಿ. ಮೀ.. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 55 ರೂ. ಮತ್ತು ಹೊರ ರಾಜ್ಯದಲ್ಲಿ 60 ರೂ. ಗಳು.
-
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ












Click it and Unblock the Notifications