ಜೂನ್ 22ರಿಂದ ಕೆಎಸ್ಆರ್‌ಟಿಸಿ ಅಂತರ್ ರಾಜ್ಯ ಬಸ್ ಸಂಚಾರ
ಬೆಂಗಳೂರು, ಜೂನ್ 21; ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಸೋಮವಾರದಿಂದ ಆರಂಭವಾಗಿದೆ. ಅಂತರ ರಾಜ್ಯ ಬಸ್ ಸಂಚಾರವನ್ನು ಜೂನ್ 22ರಿಂದ ಆರಂಭಿಸಲಾಗುತ್ತದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಕುರಿತು ಮಾಹಿತಿ ನೀಡಿದೆ. ಕೋವಿಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಅಂತರ ರಾಜ್ಯ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಪ್ರಸ್ತುತ ಲಾಕ್‌ಡೌನ್ ಸಡಿಲಗೊಂಡಿರುವ ಹಿನ್ನಲೆಯಲ್ಲಿ ದಿನಾಂಕ 22/6/2021ರಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಆಯಾ ರಾಜ್ಯಗಳ ಕೋವಿಡ್ ಮಾರ್ಗಸೂಚಿ ಅನ್ವಯ ಬಸ್ ಓಡಿಸಲಾಗುತ್ತದೆ.
— KSRTC (@KSRTC_Journeys) June 21, 2021

ಪ್ರಯಾಣಿಕರ ದಟ್ಟಣೆ, ಅವಶ್ಯಕತೆಗೆ ಅನುಗುಣವಾಗಿ ಶೇ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ ಸಂಚಾರವನ್ನು ಆರಂಭಿಸಲಾಗುತ್ತದೆ. ಆಂಧ್ರ ಪ್ರದೇಶಕ್ಕೆ ಬೆಳಗ್ಗೆ 6ರಿಂದ ಸಾಯಂಕಾಲ 6 ಗಂಟೆಯೊಳಗೆ ತಲುಪುವಂತೆ ಬಸ್ ಸಂಚಾರ ನಡೆಸಲಿದೆ.
ಅಂತರ ರಾಜ್ಯ ಬಸ್‌ಗಳಲ್ಲಿ ಪ್ರಯಾಣಿಸುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಿಗಮದ ಬಸ್‌ಗಳಲ್ಲಿ ಸಂಚಾರ ನಡೆಸುವಾಗ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಪ್ರಯಾಣಿಕರು ksrtc.karnataka.gov.in/ www.ksrtc.in ವೆಬ್ ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.












Click it and Unblock the Notifications