ವಿದ್ಯಾರ್ಥಿ ಬಸ್ ಪಾಸ್‌ ಅವಧಿ ವಿಸ್ತರಿಸಿದ ಕೆಎಸ್ಆರ್‌ಟಿಸಿ

ಬೆಂಗಳೂರು, ಜೂನ್ 04 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳ ಬಸ್ ಪಾಸ್‌ಗಳ ಅವಧಿಯನ್ನು ವಿಸ್ತರಣೆ ಮಾಡಿದೆ. ವಿದ್ಯಾರ್ಥಿಗಳು ಜೂನ್ 30ರ ತನಕ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ.

ಈಗಾಗಲೇ ಶಾಲಾ-ಕಾಲೇಜುಗಳು ಆರಂಭವಾಗಿವೆ. 2018-19ರಲ್ಲಿ ವಿತರಣೆಯಾದ ಬಸ್ ಪಾಸುಗಳಲ್ಲಿ ವಿದ್ಯಾರ್ಥಿಗಳು ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಜೂನ್ 30ರ ತನಕ ಉಚಿತವಾಗಿ ಪ್ರಯಾಣ ಮಾಡಬಹುದು.

KSRTC extended student bus pass validity till June 30

ಬಸ್‌ನಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಬೋಧನ ರಶೀದಿ ಶುಲ್ಕ ಅಥವ ಶಾಲಾ/ಕಾಲೇಜಿನ ಗುರುತಿನ ಚೀಟಿಯನ್ನು ತೋರಿಸಬೇಕು ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

2019-20 ನೇ ಸಾಲಿನ ಬಸ್ ಪಾಸುಗಳ ವಿತರಣೆ ಕುರಿತು ಶೀಘ್ರದಲ್ಲಿಯೇ ಕೆಎಸ್ಆರ್‌ಟಿಸಿ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ಹೊಸ ಪಾಸು ಪಡೆಯುವ ತನಕ ಹಳೆಯ ಪಾಸ್‌ನಲ್ಲಿಯೇ ಸಂಚಾರ ನಡೆಸಬಹುದು.

ಬಿಎಂಟಿಸಿ ಸಹ ವಿಸ್ತರಣೆ ಮಾಡಿತ್ತು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹ ವಿದ್ಯಾರ್ಥಿ ಬಸ್ ಪಾಸುಗಳ ಅವಧಿಯನ್ನು ಜೂನ್ 20ರ ತನಕ ವಿಸ್ತರಣೆ ಮಾಡಿತ್ತು. ಕಳೆದ ವರ್ಷದ ಪಾಸುಗಳನ್ನು ತೋರಿಸಿ ಪ್ರಯಾಣ ಮಾಡಬಹುದು ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+