KSRTC EV Power Plus Bus: 50ಇವಿ ಬಸ್‌ಗಳ ಯೋಜನೆಯ ಅರ್ಧದಷ್ಟು ಗುರಿ ಸಾಧನೆ, ವೈಶಿಷ್ಟತೆ, ಮಾರ್ಗಗಳ ಪಟ್ಟಿ ಮಾಹಿತಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಅಂತರ್‌ ನಗರಗಳಿಗೆ ಇವಿ ಪವರ್ ಪ್ಲಸ್ ಬಸ್ ಯೋಜನೆ ಪೈಕಿ ಅರ್ಧ ಗುರಿ ಸಾಧಿಸಿದೆ. ಇವಿ ಬಸ್‌ಗಳ ವೈಶಿಷ್ಯ, ಪ್ರಯೋಜನ, ಚಾರ್ಜಿಂಗ್ ಪಾಯಿಂಟ್‌ ಬಗ್ಗೆ ಇಲ್ಲಿ ತಿಳಿಯಿರಿ.

ಬೆಂಗಳೂರು, ಮಾರ್ಚ್ 20: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಅಂತರ್‌ ನಗರಗಳಿಗೆ ಸಾರಿಗೆ ಒದಗಿಸಲು ಉದ್ದೇಶದಿಂದ ರೂಪಿಸಿದ್ದ 'ಇವಿ ಪವರ್ ಪ್ಲಸ್ ವಿದ್ಯುತ್ ಚಾಲಿತ' (EV Power Plus Electric Bus) ಬಸ್ ಸೇವೆ ಯೋಜನೆಯಲ್ಲಿ ಅರ್ಧದಷ್ಟು ಗುರಿ ತಲುಪಿದೆ.

ಸೋಮವಾರ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (KSRTC) ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಇವಿ ಪವರ್ ಪ್ಲಸ್ ವಿದ್ಯುತ್ ಚಾಲಿತ' KSRTC ಬಸ್‌ಗಳಿಗೆ ಹಸಿರು ನಿಶಾನೆ ತೋರಿಸದರು. ಈ ಮೂಲಕ ನಿಗಮದಲ್ಲಿ ಅಂತರ್ ನಗರಗಳಿಗೆ ಓಡಾಡುವ ಬಸ್‌ಗಳ ಸಂಖ್ಯೆ 25ಕ್ಕೆ ಏರಿಕೆ ಆಗಿದೆ.

KSRTC Has Achieved Half Of Its Goal Of Inter-City Connectivity By Having 25 EV Power Plus Buses

ನಿಗಮವು ಈ ಹಿಂದೆ ಬೆಂಗಳೂರು- ಮೈಸೂರು ಮಧ್ಯ 'ಇವಿ ಪವರ್ ಪ್ಲಸ್ ಎಲೆಕ್ಟ್ರಿಕ್ ಬಸ್ ಅನ್ನು ಬಿಟ್ಟಿತ್ತು. ಇದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿತ್ತು. ಇದಾದ ಬಳಿಕ ಹಂತ ಹಂತವಾಗಿ ಇವಿ ಬಸ್‌ಗಳ ಸಂಖ್ಯೆ 25ಕ್ಕೆ ಏರಿಕೆ ಮಾಡಿಕೊಂಡಿದೆ. ಈ ಪೈಕಿ ಯೋಜನೆ ಉದ್ದೇಶದಂತೆ 50 ಬಸ್‌ಗಳ ಗುರಿಯಲ್ಲಿ ಅರ್ಧದಷ್ಟು ಸಾಧನೆ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 7,400 ಅನುಸೂಚಿಗಳಿಂದ 27 ಲಕ್ಷ ಕಿ.ಮೀ ಕ್ರಮಿಸುವುದರ ಮೂಲಕ 26 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳು ಇದ್ದಾರೆ. ನಿಗಮವು ಪ್ರತಿ ದಿನ 9.5 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ.

KSRTC Has Achieved Half Of Its Goal Of Inter-City Connectivity By Having 25 EV Power Plus Buses

ನಿಗಮವು ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾ' ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಯೋಜಿಸಿತ್ತು. ಈ ಪೈಕಿ 25 ವಾಹನಗಳನ್ನು ಕಾರ್ಯಾಚರಣೆ ನಡೆಸುತ್ತಿವೆ. ಬಾಕಿ 25 ಬಸ್‌ಗಳು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆಗಿಳಿಯಲಿವೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೆ ನಿಗಮವು ತನ್ನ ವಾಹನ ಬಲಕ್ಕೆ ಸ್ಕ್ಯಾಂಡಿನೇವಿಯನ್ ಯೂರೋಪಿಯನ್ ವಿನ್ಯಾಸದ ವೋಲ್ವೋ-9600s 'ಅಂಬಾರಿ ಉತ್ಸವ' ವಾಹನವನ್ನು ಸಾರ್ವಜನಿಕ ಬಳಕೆಗಾಗಿ ಲೋಕಾರ್ಪಣೆ ಮಾಡಿದೆ. ಅಲ್ಲದೇ ಇಂದು ಲೋಕಾರ್ಪಣೆಗೊಂಡ ಇವಿ ಬಸ್‌ಗಳಿಗೆ 'EV Power Plus - e-Xperience e-levated' ಎಂದು ಬಣ್ಣಿಸಿದೆ.

ಪ್ರಸ್ತುತದಲ್ಲಿ ಉದ್ಘಾಟಿಸಲಾದ ಎಲ್ಲ ಇವಿ ಪವರ್ ಪ್ಲಸ್ ಬಸ್‌ಗಳು ಈ ಕೆಳಕಂಡ ಮಾರ್ಗಗಳಲ್ಲಿ ನಾಗರಿಕರೆಗೆ ಸೇವೆ ನೀಡಲಿವೆ. ಅವುಗಳ ಪಟ್ಟಿ ಇಲ್ಲಿದೆ

KSRTC Has Achieved Half Of Its Goal Of Inter-City Connectivity By Having 25 EV Power Plus Buses

ಇವಿ ಪವರ್ ಪ್ಲಸ್ ಬಸ್ ಮಾರ್ಗದ ಪಟ್ಟಿ

* ಬೆಂಗಳೂರು - ಮೈಸೂರು

* ಬೆಂಗಳೂರು - ಮಡಿಕೇರಿ

* ಬೆಂಗಳೂರು - ವಿರಾಜಪೇಟೆ

* ಬೆಂಗಳೂರು - ದಾವಣಗೆರೆ

* ಬೆಂಗಳೂರು - ಶಿವಮೊಗ್ಗ

* ಬೆಂಗಳೂರು - ಚಿಕ್ಕಮಗಳೂರು

ksrtcಯ ಈ ವಿದ್ಯುತ್ ವಾಹನಗಳ ಚಾರ್ಚಿಂಗ್ ಪಾಯಿಂಟ್‌ಗಳನ್ನು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ನಗರಗಳಲ್ಲಿ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.

'ಇವಿ ಪವರ್ ಪ್ಲಸ್' ಬಸ್ ವಿಶೇಷತೆ ಏನು?

* ಈ ಬಸ್ 12 ಮೀಟರ್ ಉದ್ದ ಇದೆ.

* ಒಂದು ಬಾರಿ ಚಾರ್ಜ್ ಮಾಡಿದರೆ 300 ಕಿ.ಮೀ ಕ್ರಮಿಸಲಿದೆ.

* ಸುಧಾರಿತ Li-ion Phosphate Battery ಹೊಂದಿದ್ದು, ಕೇವಲ 2-3 ಗಂಟೆಗಳಲ್ಲಿ ಚಾರ್ಚಿಂಗ್ ಮಾಡಬಹುದಾಗಿದೆ.

* ಚಾಲಕರು, ನಿರ್ವಾಹಕರು ಸೇರಿ 45 ಆಸನ ಹೊಂದಿದೆ.

* ಸದರಿ ಬಸ್ಸಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳು, ಎಮರ್ಜೆನ್ಸಿ ಬಟನ್, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮ್ಮರ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳು ಇವೆ.

* ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯ ಕಲ್ಪಿಸಲು ಭವಿಷ್ಯದಲ್ಲಿ 350 ಇವಿ ಬಸ್‌ಗಳನ್ನು ನಿಗಮಕ್ಕೆ ಸೇರಿಸಿಕೊಳ್ಳುವ ಉದ್ದೇಶ ಇದೆ.

* ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗಾಗಿ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳು ಮುಂದಿನ ಮೂರು ತಿಂಗಳಲ್ಲಿ ಸೇರ್ಪಡೆಯಾಗಲಿವೆ ಎಂದು ನಿಗಮ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+