ಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್ ಸಹಾಯಕ್ಕಾಗಿ Ask Vani
ಬೆಂಗಳೂರು, ಜೂನ್ 03 : ಕೆಎಸ್ಆರ್‌ಟಿಸಿ ಬಸ್ ಟಿಕೆಟ್ ಬುಕ್ಕಿಂಗ್ ಮಾಡುವಾಗ ತೊಂದರೆ ಉಂಟಾದರೆ ಸಹಾಯಕ್ಕಾಗಿ ವಾಣಿಯನ್ನು ಕೇಳಿ. ಜನರ ಪ್ರಶ್ನೆಗೆ ಉತ್ತರಿಸಲು ಚಾಟ್ಬೊಟ್ ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) ವೆಬ್‌ಸೈಟ್‌ಗೆ ಅತಿ ಹೆಚ್ಚು ಜನರು ಭೇಟಿ ನೀಡುತ್ತಾರೆ. ವಿಚಾರಣೆ, ಮುಂಗಡ ಬುಕ್ಕಿಂಗ್, ಹೆಚ್ಚಿನ ಮಾಹಿತಿಗಳನ್ನು ಕೇಳುತ್ತಾರೆ. ಆದ್ದರಿಂದ, ಜನರ ಅನುಕೂಲಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ.
ಜನರ ಪ್ರಶ್ನೆಗಳಿಗೆ ವೆಬ್ ಸೈಟ್ ಮೂಲಕ ಉತ್ತರ ಒದಗಿಸಲು ಕೆಎಸ್ಆರ್‌ಟಿಸಿ ಕೃತಕ ಬುದ್ಧಿ ಮತ್ತೆ ಚಾಲಿತ ಕೋರೋವರ್‌ನ ಚಾಟ್ಬೊಟ್ ಸಹಾಯವಾಣಿಯನ್ನು ಆರಂಭಿಸಿದೆ. ನೀವು ಮೊಬೈಲ್ ಮೂಲಕ ಅಥವ ನೇರವಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿದರೆ Ask Vani ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ಕೋರೋವರ್ Ask Vaniಯನ್ನು ವಿನ್ಯಾಸ ಮತ್ತು ಅಭಿವೃದ್ಧಿ ಮಾಡಿದೆ. ಕೃತಕ ಬುದ್ಧಿ ಮತ್ತೆ, ಯಂತ್ರ ಕಲಿಕೆ ಹಾಗೂ ನೈಸರ್ಗಿಕ ಭಾಷಾ ಸಂಸ್ಕರಣೆಯಲ್ಲಿ ನಿರ್ಮಿಸಲಾದ ವೇದಿಕೆಯಾಗಿದೆ. ಸಾರ್ವಜನಿಕರಿಗೆ ಕೇಂದ್ರಿಕೃತ ಚಾಟ್ ಸೇವೆಯ ಮೂಲಕ ಸಂಪರ್ಕ ಒಗದಿಸುತ್ತದೆ.
Ask Vani ಸಹಾಯವಾಣಿಯು ಮುಂಗಡ ಬುಕಿಂಗ್, ವಿಚಾರಣೆ ಮತ್ತು ನಿಗಮದ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಪ್ರಶ್ನೆಗಳಿಗೆ ಅರ್ಥಗರ್ಭಿತ ಉತ್ತರಗಳನ್ನು ಒದಗಿಸುವ ಮೂಲಕ ಬೆಂಬಲವನ್ನು ನೀಡಲಿದೆ.












Click it and Unblock the Notifications