ಗ್ರಾಮಗಳಲ್ಲಿ ವ್ಯಾಕ್ಸಿನ್ ನೀಡಲು ಸರ್ಕಾರಿ ಬಸ್ ಬಾಡಿಗೆಗೆ ಲಭ್ಯ
ಬೆಂಗಳೂರು, ಮೇ 30; ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಜೂನ್ 7ರ ತನಕ ಲಾಕ್‌ಡೌನ್ ಜಾರಿಯಲ್ಲಿರಲಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಕೆಎಸ್ಆರ್‌ಟಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಕೋವಿಡ್ ಲಸಿಕೆ ನೀಡಲು ಬಸ್‌ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ವಿವಿಧ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಬಸ್‌ಗಳನ್ನು ಬಾಡಿಗೆಗೆ ಪಡೆಯಬಹುದು.
ಬಸ್‌ಗಳನ್ನು ಬಾಡಿಗೆ ಪಡೆಯಲು ಕೆಲವು ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಸಾಮಾಜಿ ಹೊಣೆಗಾರಿಕೆ/ ಸಾರ್ವಜನಿಕ ಹಿತದೃಷ್ಟಿಯನ್ನು ಗಮದಲ್ಲಿಟ್ಟುಕೊಂಡು ರಿಯಾಯಿತಿಗಳನ್ನು ನೀಡಲಾಗಿದೆ.

ಕರ್ನಾಟಕ ಸರ್ಕಾರಿಗೆಯ 55/47/49 ಆಸನಗಳ ಬಸ್‌ಗಳನ್ನು ಲಸಿಕೆ ನೀಡಲು ಸಂಚಾರ ನಡೆಸಲು ಬಳಕೆ ಮಾಡಿಕೊಳ್ಳಬಹುದು. ಪ್ರತಿ ದಿನಕ್ಕೆ ಕನಿಷ್ಠ 200 ಕಿ. ಮೀ. ಸಂಚಾರ ನಡೆಸಿದರೆ ಪ್ರತಿ ಕಿ. ಮೀ.ಗೆ 39 ರೂ. ದರವನ್ನು ಪಾವತಿ ಮಾಡಬೇಕು.
ಈ ದರದಲ್ಲಿ ಬಸ್ಸುಗಳನ್ನು ವ್ಯಾಕ್ಸಿನ್ ನೀಡುವ ಸಂಬಂಧ ಬೇಡಿಕೆ ಬಂದರೆ ಒದಗಿಸಬೇಕು ಎಂದು ವಿವಿಧ ನಿಗಮಗಳಿಗೆ ಸೂಚನೆ ನೀಡಲಾಗಿದೆ. ಉಳಿದಂತೆ ಸಾಂಧರ್ಭಿಕ ಒಪ್ಪಂದದ ಮೇಲೆ ಬಸ್‌ಗಳನ್ನು ಒದಗಿಸುವ ಇನ್ನಿತರೆ ಯಾವುದೇ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ.











Click it and Unblock the Notifications