ಗುಡ್‌ನ್ಯೂಸ್: ದಸರಾ ಪ್ರಯುಕ್ತ KSRTC 500 ವಿಶೇಷ ಬಸ್‌ಗಳ ಕಾರ್ಯಾಚರಣೆ: ಎಲ್ಲಿಂದ? ವೇಳಾಪಟ್ಟಿ
ಮೈಸೂರು, ಸೆಪ್ಟಂಬರ್ 14: ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಸಾರ್ವಜನಿಕರು ಆಗಮಿಸುತ್ತಾರೆ. ಅವರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಚ್ಚುವರಿ 500 ಬಸ್ ಗಳನ್ನು ಬಿಡಲಾಗಿದೆ. ಇದು ಕೇವಲ ಬೆಂಗಳೂರಿನಿಂದ ಮಾತ್ರವಲ್ಲದೇ ಇತರ ಜಿಲ್ಲೆಗಳು, ಮಾರ್ಗಗಳಿಂದ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ. ಈ ಭಾರಿ ಅತ್ಯಧಿಕ ಆದಾಯ ನಿರೀಕ್ಷೆ ಹೊಂದಲಾಗಿದೆ.
ಹೌದು, ಕಳೆದ ಬಾರಿ ದಸರಾಗೆಂದು ಮೈಸೂರಿಗೆ ಬಿಡುಗಡೆ ಮಾಡಿದ್ದ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಒಟ್ಟು 07 ಕೋಟಿ ರೂಪಾಯಿ ಆದಾಯ ಬಂದಿತ್ತು. ಈ ಬಾರಿಯು ಅದಕ್ಕಿಂತ ಕೊಂಚ ಹೆಚ್ಚು ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ. ಈ ಹೆಚ್ಚುವರಿ ಬಸ್‌ಗಳು ಕೆಎಸ್‌ಆರ್‌ಟಿಸಿ ನಗರ ವಿಭಾಗದಿಂದ 150 ಹಾಗೂ KSRTC ಗ್ರಾಮಾಂತರ ವಿಭಾಗದಿಂದ 350 ಬಸ್‌ಗಳು ಸೆಪ್ಟಂಬರ್ 22ರಿಂದ ಕಾರ್ಯಾಚರಣೆ ಮಾಡಲಿವೆ.

ರಾಜಧಾನಿ ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುವವರ ಸಂಖ್ಯೆ ಹೆಚ್ಚಿರುವ ಕಾರಣ ಬೆಂಗಳೂರು-ಮೈಸೂರಿಗೆ 170 ಬಸ್‌ಗಳನ್ನು ಬಿಡಲಾಗಿದೆ. ದಸರಾ ಹಬ್ಬದ ಮುಗಿಯುವವರೆಗೂ ಈ ಬಸ್‌ಗಳು ಸೇವೆ ನೀಡಲಿವೆ. ಉಳಿದ ಬಸ್‌ಗಳು ಮೈಸೂರಿಗೆ ಇತರ ಮಾರ್ಗಗಳಿಂದ ಸೇವೆ ನೀಡಲಿವೆ. ಅಂದರೆ ಹಾಸನ, ಮಡಿಕೇರಿ, ಚಾಮರಾಜನಗರ ಭಾಗಗಳಿಂದ ಮೈಸೂರಿಗೆ ಕಾರ್ಯಾಚರಣೆ ನಡೆಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ಮೈಸೂರು ದಸರಾ ನೋಡಲು ಬರುವ ಅಕ್ಕಪಕ್ಕ ತಾಲೂಕು ಜನರಿಗೆ ಅನುಕೂಲವಾಗುವಂತೆ KSRTC ನಗರ ವ್ಯಾಪ್ತಿಯಲ್ಲಿ 150 ಬಸ್‌ಗಳನ್ನು ಬಿಡಲಾಗಿದೆ. ಇದರಲ್ಲಿ 50 ಬಸ್ ತಾಲೂಕು ವ್ಯಾಪ್ತಿಯಿಂದ ಸಂಚಾರ ಮಾಡುತ್ತವೆ. 60 ಬಸ್‌ಗಳು ಮೈಸೂರಲ್ಲಿ ದಸರಾ ಹಿನ್ನೆಲೆಯಲ್ಲಿ ನಿರ್ಮಿಸಿದ ಕೃತಕ ಬಸ್ ನಿಲ್ದಾಣಗಳಿಂದ ಸಂಚಾರ ಮಾಡುತ್ತವೆ. ಕೆಲವು ಬಸ್‌ಗಳನ್ನು ದಸರಾ ಕಾರ್ಯಕ್ರಮದ ಅಗತ್ಯತೆ ನಿಯೋಜಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ದಸರಾ ನೋಡಲು ಬರುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಸ್‌ಗಳನ್ನು ಬಿಡುಗಡೆ ಮಾಡಲಾಗಿದೆ. 2024ರಲ್ಲಿ ಬಸ್ ಕಾರ್ಯಾಚರಣಗಳಿಂದ ಮೈಸೂರು ಗ್ರಾಮಾಂತರದಿಂದ 5 ಕೋಟಿ ಹಾಗೂ ನಗರ ವಿಭಾಗ ಬಸ್ ಸಂಚಾರದಿಂದ 7 ಕೋಟಿ ರೂಪಾಯಿ ಆದಾಯ ಬಂದಿತ್ತು. ಈ ಬಾರಿಯು ಏಳು ಕೋಟಿ ರೂಪಾಯಿಗೆ ಹೆಚ್ಚಿನ ದರ ನಿರೀಕ್ಷೆ ಇದೆ. ಇನ್ನೂ ಮೈಸೂರಿನಿಂದ ಇತರ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭಕ್ತಾಧಿಗಳು ಸಂಚರಿಸಲು ಇಷ್ಟಪಟ್ಟರೆ ಅವರಿಗೆ ಜಲದರ್ಶಿನಿ, ಗಿರಿ ದರ್ಶಿನಿ, ದೇವ ದರ್ಶಿನಿ ಎಂಬ ಟೂರ್ ಪ್ಯಾಕೇಜ್ ವ್ಯವಸ್ಥೆ ಸಹ ನಿಗಮ ಮಾಡಿದೆ.












Click it and Unblock the Notifications