ಕೆಪಿಎಸ್‌ಸಿ: ಹೈಕೋರ್ಟ್‌ನಿಂದ ಸಿಐಡಿ ಚಾರ್ಜ್‌ಶೀಟ್ ವಜಾ
ಬೆಂಗಳೂರು, ಜು. 16: ಕೆಪಿಎಸ್ ಸಿ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ಗುರುವಾರ ಮಹತ್ವದ ಆದೇಶ ನೀಡಿದೆ. ಕೆಪಿಎಸ್ ಸಿ ಅಕ್ರಮ ನೇಮಕಕ್ಕೆ ಸಂಬಂಧಿಸಿ ಆಶಾ ಪರ್ವಿನ್ ಸೇರಿದಂತೆ 5 ಜನರ ಮೇಲೆ ಸಿಐಡಿ ಸಲ್ಲಿಸಿದ್ದ ಚಾರ್ಜ್ ಶೀಟ್ ನ್ನು ಹೈಕೋರ್ಟ್ ವಜಾ ಮಾಡಿದೆ.
ಆರೋಪಿಗಳಾಗಿದ್ದ ಆಷಾ ಪರ್ವೀನ್, ಸಲ್ಮಾ ಫಿರ್ದೋಸ್ ಮತ್ತು ಇತರರ ಮೇಲೆ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿಯನ್ನು ಸಾಕ್ಷಿ ಆಧಾರಗಳ ಕೊರತೆಯಿಂದ ಹೈ ಕೋರ್ಟ್ ರದ್ದು ಮಾಡಿದೆ.[ಕೆಪಿಎಸ್ ಸಿ ನೇಮಕಾತಿ, ಅಂತರ್ಜಾಲದಲ್ಲಿ ಅರ್ಜಿ ಲಭ್ಯ]

1998ರ ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಆಶಾ ಪರ್ವಿನ್, ಸಲ್ಮಾ ಫಿರ್ದೊಷ್, ಪಿ.ಗೋಪಿಕೃಷ್ಣ, ಎಂ.ಬಿ.ಬಣಕಾರ ಹಾಗೂ ಕೆ.ನರಸಿಂಹ ಸೇರಿದಂತೆ 19 ಅಧಿಕಾರಿಗಳ ವಿರುದ್ಧ ಸಿಐಡಿ ಎಫ್‌ಐಆರ್ ದಾಖಲಿಸಿ, ಚಾರ್ಜ್‌ಶೀಟ್ ಸಲ್ಲಿಸಿತ್ತು.[ಕೆಪಿಎಸ್ ಸಿ ನೇಮಕಾತಿ ರದ್ದು, ಸಿಡಿದೆದ್ದ ಅಭ್ಯರ್ಥಿಗಳು]
ನಕಲಿ ಜಾತಿ ಪ್ರಮಾಣ ಪತ್ರ, ದಾಖಲೆಗಳನ್ನು ತಿದ್ದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೆಪಿಎಸ್‌ಸಿ ಸದಸ್ಯರು ಹಾಗೂ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಕೆಲವರ ಪರವಾಗಿ ಸಂದರ್ಶನ ಹಾಗೂ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಸಿಐಡಿ ಆರೋಪಿಸಿತ್ತು. ಕೆಪಿಎಸ್ ಸಿ ಮೂಲಕ ಇವರು ಅಕ್ರಮ ನೇಮಕಾತಿ ಪಡೆದುಕೊಂಡು ಹುದ್ದೆ ಗಿಟ್ಟಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ಸಮರ್ಪಕ ಆಧಾರಗಳನ್ನು ಒದಗಿಸುವಲ್ಲಿ ಸಿಐಡಿ ವಿಫಲವಾಗಿತ್ತು.
ಅನೇಕ ದಿನಗಳಿಂದ ಕೆಪಿಎಸ್ ಸಿ ನೇಮಕ ಗೊಂದಲ ಪರಿಹಾರವಾಗದೇ ಉಳಿದುಕೊಂಡಿತ್ತು. ಇದು ಸರ್ಕಾರ ಮತ್ತು ಹೈಕೋರ್ಟ್ ನಡುವಿನ ಹಗ್ಗ ಜಗ್ಗಾಟಕ್ಕೂ ಕಾರಣವಾಗಿತ್ತು, ನ್ಯಾಯಾಲಯದ ಆದೇಶ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದೆ.












Click it and Unblock the Notifications