KPSC Recruitment: KAS ಪರೀಕ್ಷೆ ಕಟ್ ಆಫ್ ಅಂಕಗಳು, ಕೀ ಉತ್ತರ ಬಿಡುಗಡೆ ಅಪ್ಡೇಟ್ಸ್
ಬೆಂಗಳೂರು, ಡಿಸೆಂಬರ್ 31: ಕರ್ನಾಟಕ ಲೋಕಸೇವಾ ಆಯೋಗವು (KPSC) ಆಡಳಿತ ಸೇವೆಯ ವಿವಿಧ ವೃಂದದ ಹುದ್ದೆಗಳಿಗೆ ಮರು ಪರೀಕ್ಷೆಯನ್ನು ಇದೆ ಡಿಸೆಂಬರ್ 29 ರಂದು ನಡೆಸಿತು. ಪರೀಕ್ಷೆ ಬೆನ್ನಲ್ಲೆ ಆಯೋಗದ ಲೋಪದೋಷಗಳ ಬಗ್ಗೆ ಚರ್ಚೆ ಆಯಿತು. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಆಯೋಗವು ನೇಮಕಾತಿಯ ಭಾಗವಾಗಿ KAS ಪರೀಕ್ಷೆಯ ಕೀ ಉತ್ತರ ಬಿಡುಗಡೆ ಮಾಡಲಿದೆ. ಹಾಗಾದರೆ ಫಲಿತಾಂಶ ಬಿಡುಗಡೆ ಯಾವಾಗ? ಕಟ್ ಅಂಕಗಳು ಎಷ್ಟು? ಇಲ್ಲಿದೆ ಮಾಹಿತಿ.
ಕರ್ನಾಟಕ ಆಡಳಿತ ಸೇವೆಯ 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ಡಿಸೆಂಬರ್ 31 ರಂದು ಕೀ ಉತ್ತರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಇನ್ನೂ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ಬಳಿಕ ಕಟ್ ಆಫ್ ಅಂಕಗಳು ಇಂತಿಷ್ಟು ಎಂದು ಬಿಡುಗಡೆ ಆಗಲಿದೆ.

ಕೆಪಿಎಸ್‌ಸಿಯು 2025ರ ಜನವರಿಯಲ್ಲಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಜಾತಿ ಆಧಾರದಲ್ಲಿ ಅಭ್ಯರ್ಥಿಗಳಿಗೆ ಕಟ್ ಆಫ್ ಅಂಕ ಬಿಡುಗಡೆ ಮಾಡಲಾಗುತ್ತದೆ. ಹಾಗಾದರೆ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಮುಂದುವರಿಯಲಿ ಕನಿಷ್ಠ ಅರ್ಹತಾ ಅಂಕಗಳು ಎಷ್ಟು?, ನಿರೀಕ್ಷಿತ ಕಟ್ ಆಫ್ ಅಂಕಗಳ ಮಾಹಿತಿ ಇಲ್ಲಿದೆ.
KAS Exam: ನಿರೀಕ್ಷಿತ ಕಟ್ ಆಫ್ ಅಂಕಗಳ ಪಟ್ಟಿ
ಸಾಮಾನ್ಯ ವರ್ಗ: 185
ಪರಿಶಿಷ್ಟ ಜಾತಿ (SC): 150
ಪರಿಶಿಷ್ಟ ಪಂಗಡ (ST): 163
ಸಿ1: 168
2ಎ: 150
3ಎ: 175
3ಬಿ: 172
2ಬಿ: 135
ಕೆಪಿಎಸ್‌ಸಿಯು ತನ್ನದೇ ಆದ ವಿಧಾನಗಳು, ನಿಯಮಗಳ ಪ್ರಕಾರ, ಫಲಿತಾಂಶ ಬಿಡುಗಡೆಗೊಳಿಸಿ ಕಟ್ ಆಫ್ ಅಂಕಗಳನ್ನು ನಿರ್ಧರಿಸಿ ತನ್ನ ಜಾಲತಾಣದಲ್ಲಿ ಪ್ರಕಟಿಸಲಿದೆ. ಈ ವೇಳೆ ಕಳೆದ ವರ್ಷದ ಕಟ್ ಆಫ್ ಅಂಕಗಳ ಮಾಹಿತಿಯನ್ನು ಅಭ್ಯರ್ಥಿಗಳು ಗಮನಿಸಬೇಕು.
ನೇಮಕಾತಿ ಹೆಚ್ಚುವರಿ ಮಾಹಿತಿ
ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
ಪರೀಕ್ಷೆ: ಕರ್ನಾಟಕ ಆಡಳಿತ ಸೇವೆ (KAS)
ಪರೀಕ್ಷೆ ದಿನಾಂಕ: ಡಿಸೆಂಬರ್ 29
ಕೀ ಉತ್ತರ ಬಿಡುಗಡೆ: ಡಿಸೆಂಬರ್ 31 ಬಿಡುಗಡೆ ಸಾಧ್ಯತೆ
ಪರೀಕ್ಷೆ ಫಲಿತಾಂಶ: ಜನವರಿ 2025
ಕಟ್ ಆಫ್ ಅಂಕಗಳ ಪ್ರಕಟ: https://kpsc.kar.nic.in/
KPSC KAS ಫಲಿತಾಂಶ 2024: ಪರಿಶೀಲನೆ ಹೇಗೆ?
ಕೆಪಿಎಸ್‌ಸಿ ನಡೆಸಿದ KAS ಪ್ರಿಲಿಮ್ಸ್ ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ವೆಬ್‌ಸೈಟ್ ಗೆ https://kpsc.kar.nic.in ಗೆ ಭೇಟಿ ನೀಡಿ ಮಾಹಿತಿ ಫಲಿತಾಂಶವನ್ನು ವೀಕ್ಷಿಸಬಹುದು.
* ಕರ್ನಾಟಕ ಲೋಕಸೇವಾ ಆಯೋಗ ಫಲಿತಾಂಶ ಬಿಡುಗಡೆ ಆಗುತ್ತಿದ್ದಂತೆ ಅಭ್ಯರ್ಥಿಗಳು ಲಿಂಕ್ ಮೂಲಕ ವೆಬ್‌ಸೈಟ್ ಪ್ರವೇಶಿಸಬೇಕು.
* ಮುಖಪುಟದಲ್ಲಿ ಹೊಸ ಅಪ್ಡೇಟ್ಸ್ ವಿಭಾಗದ ಅಡಿಯಲ್ಲಿ ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ ಟೆಕ್ಸ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
* ನಂತರ ಕಾಣುವ ಪರದೆ ಮೇಲೆ ನಿಮ್ಮ ರೋಲ್ ಸಂಖ್ಯೆ ನಮೂದಿಸಬೇಕು.
* ಬಳಿಕ ಕೆಎಎಸ್ ಪರೀಕ್ಷೆ ಫಲಿತಾಂಶದ ಪಿಡಿಎಫ್ ಕಾಣಿಸುತ್ತದೆ.
* ಭವಿಷ್ಯದ ಉಪಯೋಗಕ್ಕಾಗಿ ಫಲಿತಾಂಶದ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಬೇಕು.












Click it and Unblock the Notifications