ನ. 4, 5ರಂದು ಕೆಪಿಎಸ್‌ಸಿ ಪರೀಕ್ಷೆ; ಅಕ್ರಮ ತಡೆಗೆ ಕೈಗೊಂಡ ಕ್ರಮಗಳು

ಬೆಂಗಳೂರು, ನವೆಂಬರ್ 03: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನವೆಂಬರ್ 4 ಮತ್ತು 5ರಂದು ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲಿದೆ. ಪರೀಕ್ಷೆಯಲ್ಲಿ ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಲು ಕೆಪಿಎಸ್‌ಸಿ ಕಾರ್ಯದರ್ಶಿಗಳು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಕೆಪಿಎಸ್‌ಸಿ ಗ್ರೂಪ್ 'ಸಿ' ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ 14/03/2023, ದಿನಾಂಕ 15/03/2023, ದಿನಾಂಕ 17/03/2023 ಮತ್ತು ದಿನಾಂಕ 18/03/2023ರ ಅಧಿಸೂಚನೆಗಳಲ್ಲಿ ಅಧಿಸೂಚಿಸಿರುವ ವಿವಿಧ ನೇಮಕಾತಿಗೆ ಪರೀಕ್ಷೆಗಳನ್ನು ನಡೆಸುತ್ತಿದೆ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು 242 ಮತ್ತು ಕಿರಿಯ ಲೆಕ್ಕ ಸಹಾಯಕರು 67 ಹಾಗೂ ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು 47 ಮತ್ತು 53 (ಹೈ.ಕ.ವೃಂದ) ಹುದ್ದೆಗಳ ನೇಮಕಾತಿ ಸಂಬಂಧ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 4/11/2023ರಂದು ನಡೆಸಲು ದಿನಾಂಕ ನಿಗದಿ ಮಾಡಿದೆ.

kpsc-exam-november-4

ಲೆಕ್ಕ ಸಹಾಯಕರು 242, ಸಹಕಾರ ಸಂಘಗಳ ನಿರೀಕ್ಷಕರು 47 ಹುದ್ದೆಗಳಿಗೆ ದಿನಾಂಕ 05/04/2023ರಂದು 23 ಜಿಲ್ಲಾ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ದಾವಣಗೆರೆ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿನ 207 ಪರೀಕ್ಷೆ ಉಪಕೇಂದ್ರಗಳಲ್ಲಿ 78000 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಲು ಹಾಗೂ ಸದರಿ ಪರೀಕ್ಷೆಯಲ್ಲಿ ಪಾರದರ್ಶಕತೆ, ದಕ್ಷತೆ, ನ್ಯಾಯ ಹಾಗೂ ಗೌಪ್ಯತೆಯಲ್ಲಿ ಯಾವುದೇ ರಾಜಿಯಿಲ್ಲದಂತೆ ನ್ಯಾಯ ಸಮ್ಮತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಪರೀಕ್ಷೆಯನ್ನು ನಡೆಸಲು ಆಯೋಗವು ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಆಯೋಗ ಕೈಗೊಂಡ ಕ್ರಮಗಳು

* ಆಯೋಗದಿಂದ ದಿನಾಂಕ 04/11/2023 ಮತ್ತು 05/11/2023ರಂದು ನಡೆಯುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣಗಳು, Moblie, Bluetooth, Calculator, White Fluid, Wireless Sets, Paper, Book Bros.
ಹೋಗುವಂತಿಲ್ಲ.

* ಪರೀಕ್ಷಾರ್ಥಿಗಳು ತುಂಬು ತೋಳಿನ ಶರ್ಟ್ ಮತ್ತು ಯಾವುದೇ ಆಭರಣಗಳನ್ನು (ಮಂಗಳ ಸೂತ್ರ ಹಾಗೂ ಕಾಲುಂಗುರವನ್ನು ಹೊರತುಪಡಿಸಿ) pullovers, Jackets and Sweater ಗಳನ್ನು ನಿಷೇಧಿಸಿದೆ.

* ಪರೀಕ್ಷಾರ್ಥಿಗಳು Metal Water Bottles or Non Transparent water bottle ಗಳನ್ನು ಪರೀಕ್ಷಣ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

* ಪರೀಕ್ಷಾರ್ಥಿಗಳು ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ Filter ಇರುವ ಫೇಸ್ ಮಾಸ್ಕ್‌ ಅನ್ನು ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.

* ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಅಭ್ಯರ್ಥಿಗಳನ್ನು ಪ್ರವೇಶಿಸುವ ಮುನ್ನ Hand Held Metal Detector ಮುಖಾಂತರ ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿಗಳಿಂದ Frisking ಕಾರ್ಯವನ್ನು ನೆರವೇರಿಸಲಾಗುತ್ತಿದೆ.

* ಮೊಬೈಲ್ ಮತ್ತು ಇತರೆ ತಾಂತ್ರಿಕ (ಎಲೆಕ್ಟ್ರಾನಿಕ್) ವಸ್ತುಗಳಿಂದ ಪರೀಕ್ಷಾ ಉಪಕೇಂದ್ರದಲ್ಲಿ ಸಂವಹನ ನಡೆಸಲು ಅವಕಾಶವಾಗದಂತೆ ಜಾಮರ್ ಅಳವಡಿಸಲಾಗುತ್ತಿದೆ.

* ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ನೈಜತೆಯನ್ನು ಪರಿಶೀಲಿಸಲು Biometric Face Recognition ಮಾಡಲಾಗುತ್ತಿದೆ.

* ಪರೀಕ್ಷಾ ಉಪಕೇಂದ್ರಗಳ ಕೊಠಡಿಗಳಲ್ಲಿ ನಕಲು ಮಾಡುವುದನ್ನು ತಡೆಯಲು ಎಲ್ಲಾ ಕೊಠಡಿಗಳಿಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಮತ್ತು ಪರೀಕ್ಷೆ ನಡೆಯುವ ಕೊಠಡಿಗಳ ಅಭ್ಯರ್ಥಿಗಳ ಚಲನ-ವಲನಗಳ Live feedಅನ್ನು ಆಯೋಗದ ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಲಾಗಿರುವ Command Roomನಲ್ಲಿ ವೀಕ್ಷಿಸಲಾಗುತ್ತಿದೆ.

* ಪ್ರಥಮ ಬಾರಿಗೆ ಪರೀಕ್ಷಾ ಕೇಂದ್ರಗಳ ಸಂವೀಕ್ಷಕರಿಗೆ Body Camera ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ಪರೀಕ್ಷಾ ಕೊಠಡಿಯಲ್ಲಿನ ಎಲ್ಲಾ ಅಭ್ಯರ್ಥಿಗಳ ಚಲನ-ವಲನ ಮತ್ತು ಸಂವೀಕ್ಷಕರುಗಳ ಚಲನ-ವಲನಗಳ ಮಾಹಿತಿ ದಾಖಲಾಗುತ್ತದೆ.

* ಪ್ರತಿ ಪರೀಕ್ಷಾ ಉಪಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯ ನಿರ್ವಹಣೆಯ ಚಟುವಟಿಕೆಗಳ ಕುರಿತು ಪ್ರತ್ಯೇಕವಾಗಿ ವಿಡಿಯೋ ಚಿತ್ರೀಕರಣವನ್ನು ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.

* ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಎಲ್ಲಾ 207 ಪರೀಕ್ಷಾ ಉಪ ಕೇಂದ್ರಗಳಿಗೂ ಸ್ಥಳೀಯ ನಿರೀಕ್ಷಾಣಾಧಿಕಾರಿಗಳನ್ನು (Local Inspecting Officer) ನಿಯೋಜಿಸಲು ಕ್ರಮವಹಿಸಲಾಗಿರುತ್ತದೆ.

* ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಗ್ರೂಪ್-ಎ ಮತ್ತು ವೀಕ್ಷಕರನ್ನು ನೇಮಿಸಲು ಕ್ರಮವಹಿಸಲಾಗಿರುತ್ತದೆ.

ಪರೀಕ್ಷಾರ್ಥಿಗಳು ಮೇಲೆ ಸೂಚಿಸಿರುವ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಪರೀಕ್ಷೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಶಾಂತಿಯುತವಾಗಿ ನಡೆಸಲು ತಮ್ಮ ಸಹಕಾರ ನೀಡತಕ್ಕದ್ದು. ಈ ಸೂಚನೆಗಳನ್ನು ಉಲ್ಲಂಘಿಸಿ, ಪರೀಕ್ಷೆಯಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಅಥವಾ ಅನುಸರಿಸಲು ಪ್ರಯತ್ನಿಸುತ್ತಿರುವನೆಂದು ಅಥವಾ ಅವರ ನೇಮಕಾತಿ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡುಬಂದಲ್ಲಿ ಅವನು/ ಅವಳು ಸ್ವತ: ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತುಕ್ರಮಕ್ಕೆ ಒಳಪಡುವುದಲ್ಲದೇ; ಅವರ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು ಅಥವಾ ಆಯೋಗವು ನಡೆಸುವ ಪರೀಕ್ಷೆಗಳು ಅಥವಾ ಭಾರತದಲ್ಲಿನ ಇತರೆ ಲೋಕಸೇವಾ ಆಯೋಗ ಇಂತರೆ ಆಯ್ಕೆ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದು.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಪ್ರವೇಶಪತ್ರ, ಭಾವಚಿತ್ರವಿರುವ ಗುರುತಿನ ಮೂಲ ದಾಖಲೆ/ ಚೀಟಿ (ಐ.ಡಿ) ಮತ್ತು ಕಪ್ಪು ಶಾಹಿಯ ಬಾಲ್‌ನ್‌ನೊಂದಿಗೆ ಮಾತ್ರ ಪರೀಕ್ಷಾರ್ಥಿಗಳಿಗೆ ನಿಗದಿಪಡಿಸಲಾಗಿರುವ ಪರೀಕ್ಷಾ ಉಪಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಿದೆ. ಆಯೋಗವು ಪರೀಕ್ಷಾರ್ಥಿಗಳಿಗೆ ಎಚ್ಚರಿಸುವುದೇನೆಂದರೆ, ಸದರಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಬಂಧ ಮಧ್ಯವರ್ತಿ, ಏಜೆಂಟ್‌ಗಳು ಅಥವಾ ಪರೀಕ್ಷೆ ಸಂಬಂಧದಿಂತ ನಿಯೋಜಿತ ಅಧಿಕಾರಿ/ಸಿಬ್ಬಂದಿಗಳನ್ನು ಸಂಪರ್ಕಿಸಬಾರದೆಂದು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+