ಕೆಪಿಎಸ್ಸಿ: ಕನ್ನಡ ಕಡ್ಡಾಯ, ಇತರ ನಿಯಮಾವಳಿಗಳೇನು?
ಬೆಂಗಳೂರು, ನವೆಂಬರ್, 03: ಕನ್ನಡ ನಾಡು ನುಡಿಗೆ ಸಂಬಂಧಿಸಿದ ಆಶಯಗಳಿಗೆ ಪೂರಕವಾದ ಆದೇಶವೊಂದು ರಾಜ್ಯೋತ್ಸವದ ಸಂದರ್ಭದಲ್ಲಿಯೇ ಹೊರಬಿದ್ದಿದೆ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದರೂ ಸಂದರ್ಶನಕ್ಕೆ ಹಾಜರಾಗಲು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂಬುದು ಆದೇಶದ ಪ್ರಮುಖ ಅಂಶ. ಅಕ್ಟೋಬರ್ ಮೊದಲ ವಾರದಲ್ಲಿ ನಡೆದ ಪರೀಕ್ಷೆ ಫಲಿತಾಂಶಕ್ಕೂ ಇದು ಅನ್ವಯವಾಗಲಿದೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಪಿ.ಸಿ.ಹೋಟಾ ನೇತೃತ್ವದ ಸಮಿತಿ ನೀಡಿರುವ ವರದಿ ಆಧರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ತಿದ್ದುಪಡಿ ಸೂತ್ರಗಳನ್ನು ತಿಳಿಸಿದೆ.[ಕೆಎಸ್ ಒಯು ಪದವೀಧರರು ಕೆಪಿಎಸ್ಸಿ ಎಕ್ಸಾಂ ಬರೆಯಲಡ್ಡಿಯಿಲ್ಲ]

ಇದರ ಜತೆಗೆ ಕೆಲ ಹೊಸ ನಿಯಮಾವಳಿಗಳನ್ನು ಹಾಕಿಕೊಳ್ಳಲಾಗಿದೆ. ಇನ್ನು ಮುಂದೆ ಹೊಸ ನಿಯಮಗಳಿಗೆ ಬದ್ಧವಾಗಿಯೇ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ. ಮಾರ್ಪಾಡುಗಳನ್ನು ನೋಡಿಕೊಂಡು ಬರೋಣ...
ಕನ್ನಡಕ್ಕೆ ಸಂಬಂಧಿಸಿದ ನಿಯಮಾವಳಿಗಳು
* 150 ಅಂಕದ ಕನ್ನಡ ಭಾಷಾ ಪರೀಕ್ಷೆ ಮಾಡಲಾಗುತ್ತದೆ.[ಲಗ್ನ ಪತ್ರಿಕೇಲಿ (ಎಂಎ) ಅಂತ ಬರೆಸಿಕೊಳ್ಳೋಣ ಅಂತಿದ್ದೆ!]
* ಅಭ್ಯರ್ಥಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಷ್ಟೇ ಅಂಕ ಗಳಿಸಿರಲಿ ಸಂದರ್ಶನಕ್ಕೆ ಆಯ್ಕೆಯಾಗ ಬೇಕಾದರೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಲೇಬೇಕು.
* ಎಸ್ಸೆಸ್ಸೆಲ್ಸಿ ಮಟ್ಟದ ಪ್ರಥಮ ಭಾಷೆಗೆ ಸರಿಸಮನಾದ 150 ಅಂಕಗಳ ಪರೀಕ್ಷೆ ನಡೆಸಲಾಗುತ್ತದೆ.
* ಕನ್ನಡ ಪರೀಕ್ಷೆಗೆ ವಿನಾಯಿತಿ ಸಿಗಬೇಕು ಎಂದಾದಲ್ಲಿ ಅಭ್ಯರ್ಥಿ ಎಸ್ಸೆಸ್ಸೆಲ್ಸಿ ಅಥವಾ ಅದಕ್ಕಿಂತ ಮೇಲ್ಮಟ್ಟದ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಧಾನ ಭಾಷೆಯಾಗಿ ಆಯ್ಕೆ ಮಾಡಿಕೊಂಡು ತೇರ್ಗಡೆಯಾಗಿರಬೇಕು ಅಥವಾ ಕೆಪಿಎಸ್‌ಸಿ ಹಿಂದೆ ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣ ನಾಗಿರಬೇಕು.
ಇತರ ನಿಯಮಾಗವಳಿಗಳು
* ಕೆಪಿಎಸ್ಸಿ ಲಿಖಿತ ಪರೀಕ್ಷೆ ಮೌಲ್ಯಮಾಪನ ಮುಗಿದ ತಕ್ಷಣ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟ ಮಾಡಬೇಕು. ಆದರೆ,
ಅಭ್ಯರ್ಥಿಗಳು ಗಳಿಸಿದ ಅಂಕ ಬಹಿರಂಗ ಮಾಡುವಂತಿಲ್ಲ.
* ಗ್ರೂಪ್ ಸಿ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯ. [ಕೆಪಿಎಸ್ ಸಿ ಎಡವಟ್ಟು: ತನಿಖೆಗೆ ಸರ್ಕಾರದ ಆದೇಶ]
* ನೂರು ಅಂಕಗಳ ಸಾಮಾನ್ಯ ಜ್ಞಾನ ಮತ್ತು ನೂರು ಅಂಕಗಳ ಇಲಾಖೆಗೆ ಸಂಬಂಧಿಸಿದ ಅಂದರೆ 200 ಅಂಕಗಳ ಪರೀಕ್ಷೆ ನಡೆಸಲಾಗುತ್ತದೆ.
* ಸರಿಯುತ್ತರಕ್ಕೆ ಒಂದು ಅಂಕ ನೀಡಿದರೆ, ತಪ್ಪು ಉತ್ತರ ಬರೆದರೆ 0.25 ಅಂಕ ಕಡಿತ ಮಾಡಲಾಗುತ್ತದೆ.
* ಸಂದರ್ಶನದ ವೇಳೆ ಅಂಕ ಬಹಿರಂಗ ಮಾಡಲಾಗುವುದಿಲ್ಲ. ಜತೆಗೆ ಸಂದರ್ಶಕರಿಗೂ ತಿಳಿಸಲಾಗುವುದಿಲ್ಲ. ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಗರಿಷ್ಠ ಅಂದರೆ 25 ಅಂಕ ಅಂದರೆ ಶೇ. 12.5ನ್ನು ಮಾತ್ರ ನೀಡಲು ಸಾಧ್ಯವಿದೆ.
* ಸಂದರ್ಶನದ ಬಳಿಕ ಮಾತ್ರ ಅಂತಿಮ ಪಟ್ಟಿ ಪ್ರಕಟ ಸಾಧ್ಯ. ಗ್ರೂಪ್ ಸಿ ಹುದ್ದೆಗಳ ಭರ್ತಿ ಸಂದರ್ಭದಲ್ಲಿ ತಲಾ 100 ಅಂಕಗಳ ಎರಡು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಅದೇ ರೀತಿ ಗ್ರೂಪ್ ಸಿ ವಿಭಾಗದ ಚಾಲಕರು ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರವು ಅರ್ಹತಾ ಪರೀಕ್ಷೆ ನಡೆಸಿ ಬಳಿಕ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸಬೇಕಾಗುತ್ತದೆ.












Click it and Unblock the Notifications