Kodi Shree Prediction: ಅಖಂಡ ಕರ್ನಾಟಕ, ಮಳೆ, ದಸರಾ ಸಂಭ್ರಮ, ರಾಜ್ಯ ರಾಜಕೀಯ ಬಗ್ಗೆ ಕೋಡಿಮಠದ ಶ್ರೀಗಳು ಹೇಳಿದ್ದೇನು?
Kodi Shree Prediction: ಬೀಕರ ಬರಗಾಲ, ಬೆಳೆ ಹಾನಿ, ನೀರು ಬಿಕ್ಕಟ್ಟಿನ ಸಂಕಷ್ಟ ಅನುಭವಿಸಿರುವ ಕರ್ನಾಟಕದ ಜನರು, ರೈತರಿಗೆ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು (ಕೋಡಿಶ್ರೀ) ನುಡಿದ ಭವಿಷ್ಯ ಸಮಾಧಾನ ತಂದಿದೆ. ಶ್ರೀಗಳು ನುಡಿದಿದ್ದ ಮುಂಗಾರು ಮಳೆಯ ಭವಿಷ್ಯ ನಿಜವಾಗಿದೆ. ಇದೀಗ ಅವರು ನುಡಿದ ಹಿಂಗಾರು ಮಳೆ ಭವಿಷ್ಯವಾಣಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜೊತೆಗೆ ರಾಜ್ಯ ರಾಜಕೀಯ, ಕರ್ನಾಟಕ ಪರಂಪರೆ, ದಸರಾ ಹಬ್ಬ ಕುರಿತು ಮಾತನಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಕೋಡಿಶ್ರೀ ಸ್ವಾಮೀಜಿಗಳು, ಮುಂಗಾರು ಮಳೆ ಕುರಿತು ಈ ಹಿಂದೆ ನಾನು ಭವಿಷ್ಯ ನುಡಿದಂತೆ ಮಳೆ ಕೊರತೆ ಆಗಿದೆ. ಬರಗಾಲ ಸೃಷ್ಟಿಯಾಗಿದೆ. ಅನ್ನದ ಕೊರತೆ, ನೀರಿನ ಅಭಾವ ಆಗುತ್ತದೆ ಎಂದಿದ್ದೆ. ಅದೇ ರೀತಿ ಆಗಿದೆ. ಇದೀಗ ಹಿಂಗಾರು ಮಳೆ ಉತ್ತಮವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ರಾಜ್ಯದ ಜನರ ಚಿತ್ತ ಈ ಭವಷ್ಯವಾಣಿಯತ್ತ ನೆಟ್ಟಿದೆ.

ನಿರೀಕ್ಷೆಯಂತೆ ಹಿಂಗಾರು, ಉತ್ತಮ ಮಳೆ, ಬೆಳೆ
ಈ ವರ್ಷದ ಹಿಂಗಾರು ಮಳೆ ನಿರೀಕ್ಷೆಯಂತೆ ಸುರಿಯುತ್ತದೆ. ಉತ್ತಮ ಮಳೆ ಬೆಳೆ ಆಗಲಿದ್ದು, ಜಲಚರಗಳಿಗೂ ಒಳಿತಾಗಲಿದೆ. ಜನ, ಜಾನುವಾರುಗಳ ಸಮೃದ್ಧಿ ಸಿಗಲಿದೆ ಎಂದು ಕೋಡಿಶ್ರೀಗಳು ಭರವಸೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಿಂಗಾರು ಮಳೆಯಿಂದ ಉತ್ತಮ ಇಳುವರಿ, ಆರ್ಥಿಕ ಸಂಕಷ್ಟದಲ್ಲಿರುವ ರೈತರು ಚೇತರಿಸಿಕೊಳ್ಳಲಿದ್ದಾರೆ. ಬರಗಾಲದೋತ್ತರ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ ಎಂದು ಅರ್ಥೈಸಲಾಗುತ್ತಿದೆ.
ಅಖಂಡ ಕರ್ಣಾಟಕ ಒಂದಾಗಿ ಹೋಗಲಿ
ಇದೇ ವೇಳೆ ಅಖಂಡ ಕರ್ನಾಟಕ ಪರಂಪರೆ ಕುರಿತು ಮಾತನಾಡಿದ ಸ್ವಾಮೀಜಿಗಳು, ಅಖಂಡ ಕರ್ಣಾಟಕ ಒಂದಾಗಿ ಹೋಗಬೇಕು. ಮೈಸೂರಿನಲ್ಲಿ ನಡೆಯುವಂತೆ ಉತ್ತರ ಕರ್ನಾಟಕದಲ್ಲೂ ದಸರಾ ಜಂಬೂ ಸವಾರಿ ಆಯೋಜಿಸುತ್ತಿರುವ ಏಕತಾ ಮನೋಭಾವದ ಪ್ರತೀಕ ಎಂದು ತಿಳಿಸಿದರು.
ಮನುಷ್ಯ ಮನುಷ್ಯನಾಗಿ ಬಾಳಲು ಹಿರಿಯರ ಆದರ್ಶಗಳು ಮುಖ್ಯವಾಗಿರುತ್ತವೆ. ದಸರಾ ಉತ್ಸವಗಳು ಆ ಸಂಸ್ಕೃತಿಯ ಸಂಕೇತವಾಗಿ ಎಂದು ಕೋಡಿಮಠದ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ರಾಜಕಾರಣ ನಿಮಗೇ ಗೊತ್ತಿದೆ!
ಇನ್ನೂ ರಾಜ್ಯ ರಾಜಕೀಯ ಕುರಿತು ಉತ್ತರಿಸಲು ನಿರಾಕರಿಸಿದ ಕೋಡಿ ಶ್ರೀಗಳು, ರಾಜ್ಯ ರಾಜಕಾರಣ ಬಗ್ಗೆ ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಪ್ರಶ್ನೆ ಕೇಳಿದ ಮಾಧ್ಯಮದವರಿಗೆ ಉತ್ತರಿಸಿದರು. ಎಲ್ಲರಿಗೂ ಒಳಿತಾಗಲಿ, ಧೈವ ಕೃಪೆ ಇರಲಿ ಎಂದು ಹಾರೈಸಿಸದರು. ರೋಗ ರುಜಿನಗಳು ದೂರಾಗಿ, ಉತ್ತಮ ಮಳೆ-ಬೆಳೆ ಆಗಿ ನಾಡಿನ ಜನರಿಗೆ ಶಾಂತಿ ಹಾಗೂ ನೆಮ್ಮದಿ ಸಿಗಲಿ ಎಂದು ಕೋಡಿ ಮಠದ ಶ್ರೀಗಳು ಪ್ರಾರ್ಥಿಸಿದರು.
ರಾಜ್ಯದಲ್ಲಿ ಹಲವು ಸ್ವಾಮೀಜಿಗಳ ಪೈಕಿ ಕೋಡಿಶ್ರೀ ಮಠದ ಶ್ರೀಗಳು ಕಾಲ ಕಾಲಕ್ಕೆ ಭವಿಷ್ಯ ನುಡಿಯುವ ಮೂಲಕ ಜನರನ್ನು ಎಚ್ಚರಿಸುವ, ಭವಿಷ್ಯ ಕುರಿತು ತಿಳಿಸುತ್ತಾರೆ. ರಾಜಕಾರಣ, ಹವಾಮಾನ, ಸಾವು-ನೋವು ಸೇರಿದಂತೆ ಇನ್ನಿತರ ವಿಚಾರಗಳ ಕುರಿತ ಅವರ ಹೇಳಿಕೆಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತವೆ. ಜನರು ಶ್ರೀಗಳು ಹೇಳುವ ನಾಡಿನ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ.


Click it and Unblock the Notifications
