ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#ImplementKalasaBanduri ಟ್ರೆಂಡಿಂಗ್

By Mahesh
|
Google Oneindia Kannada News

ಬೆಂಗಳೂರು, ಜುಲೈ 13: ಕಳಸಾ ಬಂಡೂರಿ ನೀರಿನ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದ್ದರೂ ಕೈಕಟ್ಟಿ ಕುಳಿತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿ ವಿಶಿಷ್ಟವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. #ImplementKalasaBanduri ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಶುರುವಾದ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜುಲೈ 13ರ ಬುಧವಾರ ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾದ #ImplementKalasaBanduri ಎಂಬ ಹ್ಯಾಶ್ ಟ್ಯಾಗ್ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾದ ಹಿನ್ನಲೆಯಲ್ಲಿ ಟ್ರೆಂಡಿಂಗ್ ಆಗಿದೆ. [ಏನಿದು ಕಳಸಾ-ಬಂಡೂರಿ ಯೋಜನೆ?]

Know why #ImplementKalasaBanduri is trending on Twitter

ನಾಡಿನ ಗಣ್ಯರಾದ ನಟ ಶಿವರಾಜ್ ಕುಮಾರ್, ದೊಡ್ಡಣ್ಣ, ಸ್ವಾಮಿಗಳಾದ ಬಸವ ಮೃತ್ಯುಂಜಯ, ಡಾ. ಶಿವಕುಮಾರ ಸ್ವಾಮೀಜಿ, ನಿರ್ಮಾಲಾನಂದ ಸ್ವಾಮೀಜಿ, ಹಲವಾರು ಕವಿಗಳು, ಚಂದ್ರಶೇಖರ್ ಕಂಬಾರರಂತ ದೊಡ್ಡ ಸಾಹಿತಿಗಳು ಹೋರಾಟಗಾರರಿಗೆ ಶುಭಕೋರಿ ಅವರ ವಿಡಿಯೋ ಮೂಲಕ ಬೆಂಬಲಿಸಿದ್ದಾರೆ

ನೀವು ಕೂಡಾ ಪಾಲ್ಗೊಳ್ಳಿ: ನಿಮ್ಮ ನಿಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಒಂದು ಸೆಲ್ಫೀ ವಿಡಿಯೋವನ್ನು "I SUPPORT KALASA BANDURI FROM 'YOUR PLACE'" ಅಂತ ಮಾಡಿ ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿರಿ. ಉದಾಹರಣೆಗೆ: I SUPPORT KALASA BANDURI FROM ಬೆಂಗಳೂರು. ಟ್ವಿಟ್ಟರ್ ನಲ್ಲಿ #ImplementKalasaBanduri ಎಂಬುದನ್ನು ತಪ್ಪದೇ ಬಳಸಿ

English summary
Know why #ImplementKalasaBanduri is trending on Twitter today(July 13) The fight for water from Mahadayi river to Karnataka has almost completing one year. IT BT Kannadigaru of Karnataka have taken an initiative in support of the fight and have requested Kannadigas to upload selfie in support of the protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X