ಹೊಸವರ್ಷದ ಶುಭಾಶಯ, ನಂದಿನಿ ಹಾಲಿನ ದರ 4 ರು. ಏರಿಕೆ!

Posted By:
Subscribe to Oneindia Kannada

ಬೆಂಗಳೂರು, ಜನವರಿ 01 : ಹೊಸ ವರ್ಷದ ಮೊದಲ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಸಮಸ್ತ ಜನತೆಗೆ ಭರ್ಜರಿ ಶಾಕ್ ನೀಡಿದ್ದಾರೆ. ಹಾಲಿನ ದರ ಏರಿಸಬೇಕೆಂದು ಪ್ರಸ್ತಾವನೆಗೆ ಶುಕ್ರವಾರ ಸಮ್ಮತಿ ಸೂಚಿಸಿ, ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಈಕ್ಷಣದಿಂದ ಹಾಲಿನ ದರ 4 ರು. ಏರಿಕೆಯಾಗಲಿದೆ.

ಇದರಿಂದಾಗಿ ನೀಲಿ ಪ್ಯಾಕೆಟ್ ಹಾಲಿನ ದರ ಲೀಟರಿಗೆ 30 ರು.ನಿಂದ 34ಕ್ಕೆ, ಹಸಿರು ಬಣ್ಣದ ಪ್ಯಾಕೆಟ್ ಹಾಲಿನ ದರ 34 ರು.ನಿಂದ 38 ರು.ಗೆ ಮತ್ತು ಕೇಸರಿ ಬಣ್ಣದ ಪ್ಯಾಕೆಟ್ ಹಾಲಿನ ಬೆಲೆ 36 ರು.ನಿಂದ 40 ರು.ಗೆ ಏರಲಿದೆ. ಸಹಜವಾಗಿ, ಟೀ ಮತ್ತು ಕಾಫಿ ಬೆಲೆಗಳು ಕೂಡ ಏರಿಕೆಯಾಗಲಿವೆ.

ಹಿಂದಿನ ಸುದ್ದಿ : ಹೊಸ ವರ್ಷದ ಆರಂಭದಲ್ಲಿಯೇ ಜನರಿಗೆ ನಂದಿನಿ ಹಾಲಿನ ದರ ಏರಿಕೆ ಬಿಸಿ ತಟ್ಟಲಿದೆ? ಕರ್ನಾಟಕ ಹಾಲು ಮಹಾ ಮಂಡಲ (ಕೆಎಂಎಫ್) ಹಾಲಿನ ದರವನ್ನು 5 ರೂ. ಏರಿಕೆ ಮಾಡಲು ಅವಕಾಶ ನೀಡುವಂತೆ ಕೋರಿ ಪಶುಸಂಗೋಪನಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಪಶುಸಂಗೋಪನಾ ಸಚಿವ ಎ.ಮಂಜು ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. 'ಪ್ರತಿ ಲೀಟರ್ ಹಾಲಿನ ದರವನ್ನು 5 ರೂ. ಏರಿಕೆ ಮಾಡುವಂತೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದೆ. ರೈತರಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವ ದೃಷ್ಟಿಯಿಂದ ಹಾಲಿನ ದರವನ್ನು ಹೆಚ್ಚಳ ಮಾಡುವುದು ಸೂಕ್ತ' ಎಂದು ಹೇಳಿದರು. [KMF ನಿಂದ ಗರ್ಭಿಣಿಯರಿಗೆ ಹಾಲು, ತುಪ್ಪದ ಭಾಗ್ಯ?]

a manju

'ಹಾಲಿನ ದರ ಏರಿಕೆ ಮಾಡುವ ಕುರಿತು ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಈ ಕುರಿತು ಮಾತುಕತೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ' ಎಂದು ಎ.ಮಂಜು ತಿಳಿಸಿದರು. [ಕೆಎಂಎಫ್ ನಂತೆ ಬ್ರಾಂಡೆಡ್ ಮಟನ್ ಸ್ಟಾಲ್ ಸ್ಥಾಪನೆ: ಸಿದ್ದರಾಮಯ್ಯ]

4 ರೂ. ಪ್ರಸ್ತಾವನೆ ಇತ್ತು : 2015ರ ಜೂನ್‌ನಲ್ಲಿ ಕೆಎಂಎಫ್ ನಂದಿನಿ ಹಾಲಿನ ದರವನ್ನು 4 ರೂ. ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೆಲವು ದಿನಗಳ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರು, 'ಹಾಲಿನ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ' ಎಂದು ಸ್ಪಷ್ಟಪಡಿಸಿದ್ದರು. ಆದರೆ, ಈಗ 5 ರೂ. ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minister for animal husbandry A.Manju said, Karnataka Milk Federation (KMF) submitted proposal to government for hike the price of milk by Rs 5 per liter.
Please Wait while comments are loading...