Kannada: ಕನ್ನಡಿಗರನ್ನು ಕೆಣಕಿದ ಫೋನ್‌ಪೇ ವಿರುದ್ಧ ಕಿಚ್ಚ ಸುದೀಪ್ ಸಮರ?
ಕನ್ನಡ & ಕನ್ನಡಿಗರನ್ನು ಕೆಣಕಿದರೆ ಏನ್ ಆಗುತ್ತೆ? ಅನ್ನೋದನ್ನ ಈಗ ಫೋನ್‌ಪೇ ಸಿಇಒ ಬಳಿ ಕೇಳಬೇಕು. ಯಾಕಂದ್ರೆ ಕನ್ನಡಿಗರ ಬಗ್ಗೆ ಮಾತನಾಡಿದ್ದಕ್ಕೆ ಫೋನ್‌ಪೇ ಸಂಸ್ಥೆ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಹೀಗಿದ್ದಾಗಲೇ ನಟ ಕಿಚ್ಚ ಸುದೀಪ್ ಕೂಡ 'ಫೋನ್‌ಪೇ'ಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದರೆ, ಕನ್ನಡಿಗ ಕಿಚ್ಚ ಸುದೀಪ್ ಕೈಗೊಂಡಿರುವ ಆ ಕಠಿಣ ನಿರ್ಧಾರ ಏನು? ಮುಂದೆ ಓದಿ.
ಅಂದಹಾಗೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನ ಕಡ್ಡಾಯಗೊಳಿಸುವ ಬಗ್ಗೆ, ಕರ್ನಾಟಕ ಸರ್ಕಾರದ ಹೊಸ ಮಸೂದೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು ಫೋನ್ ಪೇ ಸಿಇಒ ಸಮೀರ್ ನಿಗಮ್. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಫೋನ್ ಪೇ ಸಿಇಒ ಸಮೀರ್ ನಿಗಮ್ ಕಮೆಂಟ್ ಮಾಡಿದ ನಂತರ, ಸಂಚಲನ ಸೃಷ್ಟಿ ಆಗಿತ್ತು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನ ದೊಡ್ಡದಾಗಿ ಶುರುವಾಗಿದ್ದು ಕಿಚ್ಚ ಸುದೀಪ್ ಕೂಡ ಫೋನ್ ಪೇಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಅದು ಹೇಗೆ? ಮುಂದೆ ಓದಿ.

ಕನ್ನಡಿಗರ ಪರ ನಿಂತ ಕಿಚ್ಚ ಸುದೀಪ್!
ಅಷ್ಟಕ್ಕೂ 'ಫೋನ್ ಪೇ' ಇನ್ನು ಒಂದು ದಿನದ ಒಳಗೆ ಕನ್ನಡಿಗರ ಬಳಿ ಕ್ಷಮೆ ಕೇಳಬೇಕು, ರಾಜ್ಯ ಸರ್ಕಾರದ ನಿಲುವಿಗೆ ಬದ್ದವಾಗಿ ಇರಬೇಕು. ಇಲ್ಲದೆ ಹೋದರೆ ತಾವು ಫೋನ್ ಪೇ ಬ್ರಾಂಡ್‌ನ ಅಂಬಾಸಡರ್ ಆಗಿ ಮುಂದುವರೆಯದೇ ಇರಲು ನಿರ್ಧರಿಸಿದ್ದಾರೆ, ನಟ ಕಿಚ್ಚ ಸುದೀಪ್ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಮತ್ತು ಇದೇ ವಿಚಾರವಾಗಿ ದೊಡ್ಡ ಮಟ್ಟದ ಚರ್ಚೆ ಕೂಡ ಈಗ ಶುರುವಾಗಿದ್ದು, ಕನ್ನಡ ನಾಡು & ನುಡಿ ವಿಚಾರದಲ್ಲಿ ಕಿಚ್ಚ ಸುದೀಪ್ ಅವರ ಈ ನಡೆ ಬಗ್ಗೆ ಸಿಕ್ಕಾಪಟ್ಟೆ ಬೆಂಬಲ ವ್ಯಕ್ತವಾಗುತ್ತಿದೆ.
ಫೋನ್ ಪೇ ಬ್ರಾಂಡ್‌ಗೆ ಕಿಚ್ಚ ಸುದೀಪ್ ಅವರು ರಾಯಭಾರಿ ಆಗಿದ್ದರು. ಆದರೆ ಈಗ ಇದೇ ಫೋನ್ ಪೇ ವಿರುದ್ಧ ಕನ್ನಡ ವಿರೋಧಿ ನೀತಿ ಆರೋಪ ಕೇಳಿಬಂದಿದೆ. ಈ ಕುರಿತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಕನ್ನಡಿಗರಿಗೆ ನಮ್ಮ ರಾಜ್ಯದಲ್ಲಿ ಮೀಸಲಾತಿ ಕೊಟ್ಟರೆ ನಿಮಗೇನು ಸಮಸ್ಯೆ? ಅಂತಾ ಕನ್ನಡಿಗರು ಪ್ರಶ್ನೆ ಕೇಳ್ತಿದ್ದಾರೆ.
ಕನ್ನಡಿಗರಿಂದ 'ಕಳಪೆ ರೇಟಿಂಗ್' ಸಮರ!
ಇದಿಷ್ಟೂ ಒಂದು ಕಡೆ ಆಗಿದ್ದರೆ, ಮತ್ತೊಂದು ಕಡೆ ಫೋನ್ ಪೇ ಅಪ್ಲಿಕೇಷನ್ ವಿರುದ್ಧ ಸಮರ ಸಾರಿದ್ದಾರೆ ಕನ್ನಡಿಗರು. ಫೋನ್ ಪೇ ಅಪ್ಲಿಕೇಷನ್ ಅನ್‌ಇನ್ಸ್ಟಾಲ್ ಮಾಡುತ್ತಿದ್ದು, ಜೊತೆಗೆ ಗೂಗಲ್ ಪ್ಲೇ ಸ್ಟೋರ್ ಮೂಲಕ ಅತ್ಯಂತ ಕಳಪೆ ಎಂದು ಫೋನ್ ಪೇ ಅಪ್ಲಿಕೇಷನ್‌ಗೆ ರೇಟಿಂಗ್ ನೀಡುತ್ತಿದ್ದಾರೆ. 'ಫೋನ್ ಪೇ' ಅಪ್ಲಿಕೇಷನ್‌ಗೆ 5 ರೇಟಿಂಗ್‌ನಲ್ಲಿ ಬರೀ 1 ರೇಟಿಂಗ್ ನೀಡಿ, ಬುದ್ಧಿ ಕಲಿಸುತ್ತಿದ್ದಾರೆ. ಈ ತಕ್ಷಣಕ್ಕೆ ಫೋನ್ ಪೇ ಸಿಇಒ ಬುದ್ಧಿ ಕಲಿತು, ಕ್ಷಮೆ ಕೇಳದೇ ಹೋದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications