KSET Results 2024: ಕೆಸೆಟ್ ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಬಿಡುಗಡೆ, ಆಕ್ಷೇಪಣೆ ಆಹ್ವಾನ

ಬೆಂಗಳೂರು, ಡಿಸೆಂಬರ್ 17: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕಳೆದ ನವೆಂಬರ್ ತಿಂಗಳಲ್ಲಿ ಸ್ನಾತಕೋತ್ತರ ಪದವಿಧರರಿಗೆ ನಡೆಸಿದ್ದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2024 (KSET) ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ತಾತ್ಕಾಲಿಕ ಫಲಿತಾಂಶ ಕುರಿತಂತೆ ಯಾರಾದರು ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಗಡುವು ನೀಡಲಾಗಿದೆ. ಗುಡುವು ದಿನಾಂಕ, ಅಂತಿಮ ಫಲಿತಾಂಶ ಮಾಹಿತಿ ಇಲ್ಲಿದೆ.

ಕೆಸೆಟ್ ತಾತ್ಕಾಲಿಕ ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ತನ್ನ ವೆಬ್‌ಸೈಟ್‌ನಲ್ಲಿ ರಿಲೀಸ್ ಮಾಡಿದೆ. ಅಭ್ಯರ್ಥಿಗಳು ಫಲಿತಾಂಶವನ್ನು https://cetonline.karnataka.gov.in/kea/ ಪರಿಶೀಲಿಸಬಹುದು. ಈ ರಿಸಲ್ಟ್ ಕುರಿತು ಆಕ್ಷೇಪಣೆ ಇದ್ದಲ್ಲಿ ಡಿಸೆಂಬರ್ 19ರ ಒಳಗೆ ಸಲ್ಲಿಸಬೇಕು ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

KEA Released KSET Exam 2024 Provisional Results Objection Deadline Announced

ತಾತ್ಕಾಲಿಕ ಫಲಿತಾಂಶ ಪಟ್ಟಿಯನ್ನು KSET ಅಭ್ಯರ್ಥಿಗಳು ತಮ್ಮ ಅರ್ಜಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಪರಿಶೀಲಿಸಬೇಕು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜುಲೈ 13ರಂದು KSET 2024 ಅಧಿಸೂಚನೆ ಬಿಡುಗಡೆ ಮಾಡಿತ್ತು. ನವೆಂಬರ್ 24, ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 41 ವಿಷಯಗಳ ಮೇಲೆ ವಿವಿಧ ಸ್ನಾತಕೋತ್ತರ ಪದವೀಧರರಿಗೆ KSET 2024 ಪರೀಕ್ಷೆ ನಡೆಸಿತ್ತು. ಬಳಿಕ ಕೀ ಉತ್ತರಗಳನ್ನು ಬಿಡುಗಡೆಗೊಳಿಸಿತು.

KSET 2024 ಫಲಿತಾಂಶ ಬಿಡುಗಡೆಗೊಂಡಿದ್ದು, ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ ಪರಿಶೀಲನೆ ವಿಧಾನ ತಿಳಿಯಿರಿ. ಅಭ್ಯರ್ಥಿಗಳು ಮೊದಲು ಜಾಲತಾಣಕ್ಕೆ ಭೇಟಿ ನೀಡಬೇಕು. ತಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮದಿನಾಂಕ ಅಗತ್ಯ ವಿವರ ನಮೂದಿಸಬೇಕು. ಬಳಿಕ ಪರದೆ ಮೇಲೆ ಕಾಣುವ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಕಾಣುವ ತಾತ್ಕಾಲಿಕ ಅಂಕಪಟ್ಟಿಯನ್ನು ನೋಡಿ, ಮುಂದಿನ ಅಗತ್ಯತೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಕೆಸೆಟ್ ಪರೀಕ್ಷೆ 2024 ಪ್ರಮುಖ ಅಂಶಗಳು

* ಪರೀಕ್ಷೆ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2024 ಅಧಿಸೂಚನೆ ದಿನಾಂಕ: ಜುಲೈ 13

* ನೋಂದಣಿ ದಿನಾಂಕ: ಜುಲೈ 30 ರಿಂದ ಆಗಸ್ಟ್ 28

* ಪರೀಕ್ಷೆಯ ದಿನಾಂಕ ನವೆಂಬರ್ 24

* ಅಂತಿಮ ಉತ್ತರದ ಕೀ ಡಿಸೆಂಬರ್ 16

* ಫಲಿತಾಂಶ ಡಿಸೆಂಬರ್ 16, 2024

* ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)

* ಅಧಿಕೃತ ವೆಬ್‌ಸೈಟ್ cetonline.karnataka.gov.in

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+