KEA: ಕರ್ನಾಟಕ ವಿದ್ಯಾರ್ಥಿ ಸ್ನೇಹಿ 3 ಹೊಸ ವ್ಯವಸ್ಥೆಗೆ ಸರ್ಕಾರ ಗ್ರೀನ್ ಸಿಗ್ನಲ್
ಬೆಂಗಳೂರು, ಮೇ 13: ವಿದ್ಯಾರ್ಥಿಗಳ ಹಿತಕ್ಕಾಗಿ ಹೊಸ ನಿಯಮ ರೂಪಿಸುವ, ಪರೀಕ್ಷೆ ಮಾಹಿತಿ, ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು ಮಾಹಿತಿ ಒದಗಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೂರು ಹೊಸ ಡಿಜಿಟಲ್ ಉಪಕ್ರಮ ಆರಂಭಿಸಿದೆ. ಇವುಗಳು ವಿದ್ಯಾರ್ಥಿಗಳ ಸ್ನೇಹಿ ವ್ಯವಸ್ಥೆಯಾಗಿದೆ. ಇವುಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ ಕಾಲೇಜುಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ನೀಡಲಿರುವ ಹಾಗೂ ಎಲ್ಲ ಸೇವೆ ನೀಡಬಹುದಾದ ಮೂರು ಡಿಜಿಟಲ್ ಉಪಕ್ರಮಗಳನ್ನು ಹೊರ ತಂದಿದೆ. ವಿಶೇಷ 'ಕಾಲೇಜ್ ಪೋರ್ಟಲ್' (College Portal)ಎಲ್ಲಾ ಸೇವೆ ನೀಡುವ 'ಮೊಬೈಲ್ ಅಪ್ಲಿಕೇಶನ್' (KEA Mobile App) ಮತ್ತು 'ಕೃತಕ ಬುದ್ಧಿಮತ್ತೆ (ಎಐ) ಚಾಲಿತ 'ಚಾಟ್‌ಬಾಟ್' (KEA Bot) ಉಪಕ್ರಮಗಳಿಗೆ ಸಚಿವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು, ಪ್ರಾಧಿಕಾರವು ಪರೀಕ್ಷಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು, ಅಭ್ಯರ್ಥಿಗಳಿಗೆ ಅನುಕೂಲಕರ ಸೇವೆ ನೀಡಲು ನಿರಂತರವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಲ್ಲೇ ಬಂದಿದೆ. ಪರೀಕ್ಷೆ ಅಥವಾ ಫಲಿತಾಂಶ ವೇಳೆ ಯಾವುದೇ ಗೊಂದಲಗಳು ಆಗದಂತೆ ನೋಡಿಕೊಳ್ಳುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸುತ್ತದೆ. ತಂತ್ರಜ್ಞಾನಕ್ಕೆ ತಕ್ಕಂತೆ ಪ್ರಾಧಿಕಾರ ಸೇವೆ ನೀಡುತ್ತಿರುವುದನ್ನು ಅವರು ಶ್ಲಾಘಿಸಿದರು.
ಒಂದೇ ಪೋರ್ಟಲ್‌ನಲ್ಲಿ ಕಾಲೇಜುಗಳ ಮಾಹಿತಿ
ಪರೀಕ್ಷೆ ಬಳಿಕ ಅಭ್ಯರ್ಥಿಗಳು ಉತ್ತಮ ಕಾಲೇಜನ್ನು ಆಯ್ಕೆ ಮಾಡುವುದು, ಅದರ ಮಾಹಿತಿ ಹೆಕ್ಕಿ, ಸೂಕ್ತವೆನಿಸಿದ್ದನ್ನು ಆಯ್ಕೆ ಮಾಡುವುದು ನಿರ್ಣಾಯಕವಾಗಿರುತ್ತದೆ. ಈ ಕೆಲಸಕ್ಕೆ ಯುಜಿಸಿಇಟಿ 'ಕಾಲೇಜ್ ಪೋರ್ಟಲ್' ನಲ್ಲಿ ಎಲ್ಲ ಕಾಲೇಜುಗಳ ಕುರಿತು ಮಾಹಿತಿ ಅಡಕಗೊಳಿಸಲಾಗುತ್ತದೆ. ಕೂತಲೇ ಪೋರ್ಟಲ್‌ನಲ್ಲಿ ನೀವು ನಿಮಗೆ ಬೇಕಾದ ಕಾಲೇಜುಗಳ ಮಾಹಿತಿ ಪಡೆಯಬಹುದಾಗಿದೆ. ಶೀಘ್ರವೇ ಎಲ್ಲ ಕಾಲೇಜುಗಳು ಮಾಹಿತಿ ಅಪ್ಲೋಡ್ ಆಗಲಿದೆ.

ಪೋರ್ಟಲ್ ನೀವು ಇಚ್ಛಿಸುವ ಕಾಲೇಜಿನ ಮೂಲಸೌಕರ್ಯ ಹೇಗಿದೆ? ಅಲ್ಲಿನ ಶೈಕ್ಷಣಿಕ ಪರಿಸರ, ಗ್ರಂಥಾಲಯಗಳು, ಲ್ಯಾಬ್, ಕೊಠಡಿಗಳು, ಹಾಸ್ಟೆಲ್‌ಗಳು, ಕೋರ್ಸ್-ವಾರು ಶುಲ್ಕ ರಚನೆ ಮತ್ತು ಉಪನ್ಯಾಸಕರ ವಿವರ ಹೀಗೆ ಎಲ್ಲವನ್ನು ತಿಳಿಯಬಹುದಾಗಿದೆ. ಇದರಿಂದ ಯಾವುದೇ ಮಾಹಿತಿ ಇಲ್ಲದೇ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದು ತಪ್ಪುತ್ತದೆ. ಕಾಲೇಜು ಆಯ್ಕೆ ಪ್ರತಿ ಹಂತದಲ್ಲೂ ಈ ಪೋರ್ಟಲ್ ಸಹಕಾರಿಯಾಗಲಿದೆ. ಯಾವುದೇ ಗೊಂದಲಗಳು ಇಲ್ಲದೇ ನೀವು ಇಲ್ಲಿನ ಮಾಹಿತಿ ಪಡೆಯಬಹುದು ಎಂದು ಕೆಇಎ ತಿಳಿಸಿದೆ.
ಇಷ್ಟು ಮಾತ್ರವಲ್ಲದೇ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ವಿಧಿಸಿದರೆ ಅಂತಹ ಕಾಲೇಜುಗಳ ಕುರಿತು ನೀವು ಪೋರ್ಟಲ್‌ನಲ್ಲಿ ವರದಿ ಮಾಡಲು ಅವಕಾಶ ನೀಡಲಾಗಿದೆ. ದೂರುಗಳನ್ನು ನೀವು ಸಲ್ಲಿಸಬಹುದಾಗಿದೆಗಿ ಶುಲ್ಕ ನಿಯಂತ್ರಣ ಸಮಿತಿಗೆ ರವಾನಿಸಲಾಗುತ್ತದೆ.
KEA ಮೊಬೈಲ್ ಅಪ್ಲಿಕೇಶನ್ ವೈಶಿಷ್ಟ್ಯತೆ
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು, ಆಯ್ಕೆಗೆ ಅವಕಾಶ, ಆಯ್ಕೆ ಮತ್ತು ಶುಲ್ಕ ಪಾವತಿ ಸೇರಿದಂತೆ ಕೆಇಎ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳನ್ನು ನೀವು ಈ 'ಕೆಇಎ ಮೊಬೈಲ್ ಆಪ್' ಮೂಲಕ ಪಡೆಯಬಹದು. ಕೂತಲ್ಲಿಯೇ ಅಂಗೈನಲ್ಲಿ ಎಲ್ಲ ಸೇವೆ ಪಡೆಯಬಹುದು. ಈ ಅಪ್ಲಿಕೇಷನ್‌ನಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗಳಲ್ಲಿ ಆಗಾಗ್ಗೆ ತಪ್ಪುಗಳನ್ನು ಆಗದಂತೆ ನೋಡಿಕೊಳ್ಳುವ ಜೊತೆಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಪ್ ಹೆಚ್ಚಿನ ಅನುಕೂಲ ಒದಗಿಸಲಿದೆ.
KEA AI ಆಧಾರಿತ ಚಾಟ್‌ಬಾಟ್
ಈ ಕೆಇಎ ಎಐ ಆಧಾರಿತ ಚಾಟ್ ಬಾಟ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಳಿಕ ತ್ವರಿತ ಉತ್ತರಗಳ ಪರಿಶೀಲನೆಗೆ ಸಹಾಯ ಮಾಡುತ್ತದೆ. ಕೆಲವು ದಿನಗಳ ಹಿಂದೆಯೇ ಈ ಸೇವೆ ಆರಂಭಿಸಲಾಗಿದೆ. ಆದರೆ ಅಧಿಕೃತ ಚಾಲನೆ ನೀಡಿರಲಿಲ್ಲ. ಅಲ್ಲಿಂದ ಈವರೆಗೆ 1.35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಾಟ್‌ಬಾರ್ಟ್ ಮಾಹಿತಿ ಪಡೆದಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಧಿಕಾರದ ಅಧಿಕಾರಿಗಳು ಕೆಇಎ ಎಲ್ಲ ಮಾಹಿತಿಯನ್ನು ಈ ಚಾಟ್‌ಬಾಟ್ ವ್ಯವಸ್ಥೆಗೆ ಅಪ್‌ಲೋಡ್ ಮಾಡುತ್ತಾರೆ. ಇಲ್ಲಿ ಸಿಗುವ ದತ್ತಾಂಶಗಳು, ಮಾಹಿತಿ ಆಧಾರ ಪರಿಶೀಲಿಸಬಹುದು. ಇದು ಸಾಧ್ಯವಾಗದಿದ್ದಲ್ಲಿ ನೀವು ಕೆಇಎ ಕಚೇರಿಗಳಿಗೂ ಭೇಟಿ ನೀಡಬಹುದು.












Click it and Unblock the Notifications