KEA Horticulture Exam 2026: ತೋಟಗಾರಿಕೆ ನೇಮಕಾತಿ ಪರೀಕ್ಷೆಗಳ ದಿನಾಂಕ ಬದಲಾವಣೆ, ಹೊಸ ವೇಳಾಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನೇಮಕಾತಿಗೆ ಸಂಬಂಧಿಸಿದಂತೆ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳಿಗಾಗಿ ನಡೆಸಲು ಉದ್ದೇಶಿಸಲಾಗಿದ್ದ ಪರೀಕ್ಷಾ ವೇಳಾಪಟ್ಟಿ ಬದಲಾಗಿದೆ. ಇದೇ ಸೆಪ್ಟೆಂಬರ್ 26 ಮತ್ತು 27ರಂದು ನಡೆಸಬೇಕಿದ್ದ ಪರೀಕ್ಷೆಗಳ ದಿನಾಂಕಗಳನ್ನು ಪರಿಷ್ಕರಣೆ ಮಾಡಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಜೊತೆಗೆ ಹಾಲ್ ಟಿಕೆಟ್ ಡೌನ್‌ಲೋಡ್ ದಿನಾಂಕ ಮತ್ತು ವಿಧಾನಗಳ ಮಾಹಿತಿ ಇಲ್ಲಿದೆ.

ತೋಟಗಾರಿಕೆ ಇಲಾಖೆ ಸಂಬಂಧಿ ಅಧಿಕಾರಿಗಳ ನೇಮಕಾತಿಯ ಪರೀಕ್ಷೆಗಳ ಉದ್ದೇಶಿತ ದಿನಗಳಂದು ಎಸ್‌ ಬಿ ಐ ಕ್ಲರ್ಕ್ (SBI Clerk) ಮತ್ತು SHIMUL ಸಂಸ್ಥೆಯ ನೇಮಕಾತಿ ಪರೀಕ್ಷೆಗಳು ನಿಗದಿಯಾಗಿವೆ. ಈ ಕಾರಣದಿಂದಾಗಿ ಹಲವು ಅಭ್ಯರ್ಥಿಗಳು ಪರೀಕ್ಷೆಗಳ ದಿನಾಂಕ ಮುಂದೂಡುವಂತಿ ಮನವಿ ಮಾಡಿದ್ದರು. ಹೀಗಾಗಿ ಪರೀಕ್ಷಾ ದಿನಾಂಕಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.

KEA Horticulture Exam 2026

ಪರೀಕ್ಷೆ ಯಾವಾಗ? ಹೊಸ ವೇಳಾಪಟ್ಟಿ ಇಲ್ಲಿದೆ

ಇದೇ ಸೆಪ್ಟಂಬರ್ 26ರಂದು ನಡೆಯಬೇಕಿದ್ದ ಕಲ್ಯಾಣ ಕರ್ನಾಟಕ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರ ನೇಮಕಾತಿ ಪರೀಕ್ಷೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಲಾಗಿದೆ. ಸೆಪ್ಟೆಂಬರ್ 27ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ವಿಭಜನೆ ಮಾಡಲಾಗಿದ್ದು, ಅದನ್ನು ಸೆಪ್ಟೆಂಬರ್ 29 ಮತ್ತು 30 ರಂದು ನಡೆಸ‍ಲು ಪ್ರಾಧಿಕಾರ ನಿರ್ಧರಿಸಿದೆ ಎಂದು ಹೇಳಿದರು.

ಸೆಪ್ಟೆಂಬರ್ 29 ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸಾಮಾನ್ಯ ಜ್ಞಾನ- ಪತ್ರಿಕೆ-1 ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 30ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನಿರ್ದಿಷ್ಟ ಪತ್ರಿಕೆ- ಪತ್ರಿಕೆ- 2ರ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದರು.

ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಯ ನಿರ್ದಿಷ್ಟ ಪತ್ರಿಕೆ- 2ರ ಪರೀಕ್ಷೆ ನಿಗದಿಯಂತೆ ಸೆಪ್ಟೆಂಬರ್ 28ರಂದೇ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಪರಿಷ್ಕೃತ ಪ್ರವೇಶ ಪತ್ರಗಳನ್ನು ಸೆಪ್ಟೆಂಬರ್ 23ರಂದು ಮಧ್ಯಾಹ್ನ 2ಗಂಟೆ ನಂತರ ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರಾಧಿಕಾರವು ಪ್ರಕಟಣೆ ಮೂಲಕ ತಿಳಿಸಿದೆ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡೋದು ಹೇಗೆ?

* ಅಭ್ಯರ್ಥಿಗಳು ಪ್ರವೇಶ ಪತ್ರ (Admit Card) ಡೌನ್‌ಲೋಡ್ ಮಾಡಲು ಮೊದಲು ಕೆಇಎ ಅಧಿಕೃತ ವೆಬ್‌ಸೈಟ್‌ಗೆ (https://cetonline.karnataka.gov.in/kea/indexnew) ಭೇಟಿ ನೀಡಬೇಕು.

* ಬಳಿಕ ಮುಖಪುಟದಲ್ಲಿ Horticulture Department Recruitment - 2026 (RPC/KK)' ಅಥವಾ 'Hall Ticket Download' ಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

* ನಂತರ ನಿರ್ದಿಷ್ಟ ಪರೀಕ್ಷೆಯ ಪ್ರಕಾರ ಅಥವಾ ಹುದ್ದೆ ( ಸಹಾಯಕ ತೋಟಗಾರಿಕೆ ನಿರ್ದೇಶಕ ಅಥವಾ ಅಧಿಕಾರಿ) ಅಂತ ಆಯ್ಕೆ ಮಾಡಿಕೊಳ್ಳಬೇಕು.

* ನಿಗದಿತ ಜಾಗದಲ್ಲಿ ನಿಮ್ಮ ಅರ್ಜಿ ಸಂಖ್ಯೆ ಇಲ್ಲವೇ ನೋಂದಣಿ ಐಡಿ ಹಾಕಿ, ಕೇಳಲಾಗುವ ಮಾಹಿತಿ ಒದಗಿಸಬೇಕು.

* ಬಳಿಕ ಪ್ರವೇಶ ಪತ್ರ ವೀಕ್ಷಿಸಲು ಸಬ್ಮಿಟ್ ಇಲ್ಲವೇ ಲಾಗಿನ್ ಎಂದು ಕೇಳುತ್ತದೆ. ಅದನ್ನು ಆಯ್ಕೆ ಮಾಡಿಕೊಂಡರೆ ಪ್ರವೇಶ ಪತ್ರದ PDF ಡೌನ್‌ಲೋಡ್ ಮಾಡಿಕೊಳ್ಳಬಹುದು.

* ಪರೀಕ್ಷಾಗಿ ಎರಡು ಪ್ರತಿಗಳನ್ನು ಪ್ರಿಂಟ್ ತೆಗೆದುಕೊಂಡು, ಪರೀಕ್ಷೆಗೆ ಒಯ್ಯುವುದು ಕಡ್ಡಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+