KAS officers; ಕೆಎಎಸ್ ಅಧಿಕಾರಿಗಳ ವೆಲ್‌ಫೇರ್ ಫಂಡ್ ಮಾಹಿತಿ
ಬೆಂಗಳೂರು, ಆಗಸ್ಟ್ 17: ಕೆಎಎಸ್ ಅಧಿಕಾರಿಗಳ ಸಂಘದ welfare fund ಖಾತೆಯನ್ನು ತೆರೆಯುವ ಬಗ್ಗೆ ಈ ಹಿಂದೆ ಆದೇಶಿಸಲಾಗಿತ್ತು. ಈಗ ಖಾತೆಗೆ ಕೆಎಎಸ್ ಅಧಿಕಾರಿಗಳ ಮಾಸಿಕ ವೇತನದಲ್ಲಿ ಕಡಿತ ಮಾಡಿ ಹಣ ಜಮೆ ಮಾಡುವ ಕುರಿತು ಆದೇಶ ಹೊರಡಿಸಲಾಗಿದೆ.
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ) ಸರ್ಕಾರದ ಅಧೀನ ಕಾರ್ಯದರ್ಶಿ ಕಾಂತಮ್ಮ ಎನ್. ಎಂ. ಈ ಕುರಿತು ಟಿಪ್ಪಣಿ ಹೊರಡಿಸಿದ್ದಾರೆ. ಇದು ಕೆಎಎಸ್ ಅಧಿಕಾರಿಗಳ ಸಂಘದ welfare fund ಖಾತೆಗೆ ಕೆಎಎಸ್ ಅಧಿಕಾರಿಗಳ ಮಾಸಿಕ ವೇತನದಲ್ಲಿ ಕನಿಷ್ಠ ರೂ. 500ಗಳನ್ನು ಪ್ರತಿ ತಿಂಗಳು ಜಮಾ ಮಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 262 ಆನಿ 2023 ದಿನಾಂಕ 9/8/2023 ಅನ್ನು ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ಕಳುಹಿಸಿದೆ ಎಂದು ತಿಳಿಸಲಾಗಿದೆ.
ಕೆಎಎಸ್ ಅಧಿಕಾರಿಗಳ ಸಂಘದ welfare fund ಖಾತೆಯನ್ನು ತೆರೆಯುವ ಬಗ್ಗೆ. ಅಧ್ಯಕ್ಷರು, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ (ರಿ) ಇವರ ಪತ್ರ ಉಲ್ಲೇಖ ಮಾಡಿ 9/8/2023ರಂದು ಆದೇಶವೊಂದನ್ನು ಹೊರಡಿಸಲಾಗಿತ್ತು.
ಏನಿದು welfare fund?; ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಪತ್ರದಲ್ಲಿ ಕೆಎಎಸ್ ಅಧಿಕಾರಿಗಳು ಅನಾರೋಗ್ಯಕ್ಕೆ ತುತ್ತಾದರೆ ಮತ್ತು ಅಕಾಲಿಕ ಮರಣಹೊಂದಿದರೆ ಅವರ ಕುಟುಂಬಗಳಿಗೆ ಸಂಘದ ವತಿಯಿಂದ ಆರ್ಥಿಕ ಸಹಾಯವನ್ನು ಮಾಡುವುದಕ್ಕಾಗಿ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ welfare fund ತೆರೆಯಲು ಎಲ್ಲಾ ಕೆಎಎಸ್ ಅಧಿಕಾರಿಗಳ ಮಾಸಿಕ ವೇತನದಲ್ಲಿ ಪ್ರತಿ ತಿಂಗಳು ರೂ. 500 ವಂತಿಕೆಗಳನ್ನು ಅವರ ವೇತನದಿಂದ ಕಟಾವಣೆಗೊಳಿಸಿ welfare fund ಖಾತೆಗೆ ಜಮಾ ಮಾಡುವ ಸಲುವಾಗಿ, ಸರ್ಕಾರದಿಂದ ಆದೇಶ ಹೊರಡಿಸುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿತ್ತು.
ಕೆಎಎಎಸ್ ಅಧಿಕಾರಿಗಳ welfare fund ಅನ್ನು ಹೊಸದಾಗಿ ತೆರೆಯಲು ಕೆಎಎಸ್ ಅಧಿಕಾರಿಗಳ ವೇತನದಿಂದ ಮಾಸಿಕ ರೂ. 500 ಕಟಾಯಿಸಿ ಈ ಉದ್ದೇಶಕ್ಕಾಗಿ ಕೆಎಎಸ್ ಅಧಿಕಾರಿಗಳ ಸಂಘವು ತೆರೆದಿರುವ ಬ್ಯಾಂಕ್ ಖಾತೆಗೆ ಜಮೆ ಮಾಡಲು ಷರತ್ತುಗಳಿಗೊಳಪಟ್ಟು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ. ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಆಡಳಿತ ವಿಷಯಗಳನ್ನು ಸಿ. ಆ. ಸು. ಇಲಾಖೆ ನಿರ್ವಹಿಸುತ್ತಿರುವುದರಿಂದ ಷರತ್ತುಗಳೊಂದಿಗೆ ಸರ್ಕಾರಿ ಆದೇಶವನ್ನು ಹೊರಡಿಸಿದೆ.
ಷರತ್ತುಗಳು
* ಪ್ರತಿ ತಿಂಗಳು ರೂ. 500ಗಳ ವಂತಿಕೆಯನ್ನು ಕೆಎಎಸ್ ಅಧಿಕಾರಿಗಳ ಮಾಸಿಕ ತಿಂಗಳ ವೇತನ ಬಿಲ್ಲಿನಲ್ಲಿ ಕಟಾವಣೆ ಮಾಡಲು ಸಂಬಂಧಪಟ್ಟ ಡಿಡಿಓ ಗಳು ಮತ್ತು ಖಜಾನಾಧಿಕಾರಿಗಳು ಅಧಿಕಾರ ಪಡೆದಿರುತ್ತಾರೆ.
* ವೇತನದಲ್ಲಿ ವಂತಿಕೆಯನ್ನು ಕೊಡಲಿಚ್ಛಿಸದ ಕೆಎಎಸ್ ಅಧಿಕಾರಿಯು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಡಿಡಿಓ ಅವರಿಗೆ ಲಿಖಿತ ಮೂಲಕ ಸಲ್ಲಿಸಬಹುದಾಗಿದೆ. ಅಂತಹ ಅಧಿಕಾರಿಯ ವೇತನ ಬಿಲ್ಲಿನಲ್ಲಿ ಕಟಾವು ಮಾಡತಕ್ಕದ್ದಲ್ಲ.
* ಖಜಾನಾಧಿಕಾರಿಗಳು ಖಜಾನೆ-2 ತಂತ್ರಾಂಶ ಅನುಷ್ಠಾನದ ಹಿನ್ನೆಲೆಯಲ್ಲಿ ವಂತಿಗೆ ರೂಪದಲ್ಲಿ ಕಟಾವು ಮಾಡಿದ ಹಣವನ್ನು ಜಮಾ ಮಾಡಲು ಒಂದು ಬಡ್ಡಿ ರಹಿತ ಠೇವಣಿ ಖಾತೆ ತೆರೆಯುವುದು.
* ಈ ರೀತಿ ಕಟಾವು ಮಾಡಿ ಠೇವಣಿ ಖಾತೆಗೆ ಜಮೆ ಮಾಡಿದ ಹಣವನ್ನು ತಿಂಗಳ ಅಂತ್ಯದಲ್ಲಿ ಸಂಬಂಧಿಸಿದ ಸಂಘದ ಬ್ಯಾಂಕ್ ಖಾತೆಗೆ ಇ-ಪಾವತಿ ಮೂಲಕ ನೇರವಾಗಿ ಜಮೆ ಮಾಡುವುದು.
* ಸಂಘವು ಈ ಮೇಲಿನ ಉದ್ದೇಶಗಳಿಗಾಗಿ ಮಾತ್ರ ನಿಧಿಯ ಹಣವನ್ನು ಬಳಸುವಂತೆ, ಇನ್ನಿತರೆ ಬೇರೆ ಉದ್ದೇಶಗಳಿಗಾಗಿ ಬಳಸಬಾರದೆಂದು ಹಾಗೂ ಹಣ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ಸಂಘದ ಅಧ್ಯಕ್ಷರ ಹೊಣೆಗಾರಿಕೆಯಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications