ಕಾರವಾರದ ಕಡಲ ತೀರದಲ್ಲಿ ಬಿಗುವಿನ ಪರಿಸ್ಥಿತಿ

ಕಾರವಾರ, ನ.2: ಇಲ್ಲಿನ ಇತಿಹಾಸ ಪ್ರಸಿದ್ಧ ರವೀಂದ್ರನಾಥ್ ಠಾಗೂರ್ ಕಡಲ ತೀರದಲ್ಲಿ ಭಾನುವಾರ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಅನಧಿಕೃತ ಕಟ್ಟಡ, ಗುಡಿಸಲುಗಳನ್ನು ತೆರವುಗೊಳಿಸಲು ಬಂದಿದ್ದ ಅಧಿಕಾರಗಳ ವಿರುದ್ಧ ಸ್ಥಳೀಯ ಮೀನುಗಾರರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಆದರೆ, ಪ್ರತಿಭಟನೆ ನಡುವೆಯೂ ಹೈಕೋರ್ಟ್ ಆದೇಶದನ್ವಯ ಅಧಿಕಾರಿಗಳು ಕಡಲ ತೀರದಲ್ಲಿರುವ ಗುಡಿಸಲು ತೆರವು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ. ಸುಮಾರು 188 ಗುಡಿಸಲುಗಳು ಜೆಸಿಬಿ ದಾಳಿಗೆ ಸಿಲುಕಿ ನೆಲಸಮಗೊಂಡಿವೆ.

ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಗುಡಿಸಲುಗಳನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಹಿಂಪಡೆಯುವಂತೆ ಈ ಹಿಂದೆ ಕೂಡಾ ಮೀನುಗಾರರು, ಅಖಿಲ ಭಾರತ ಕೊಂಕಣಿ ಮಹಾಜನ್ ಸಭಾ ಸೇರಿದಂತೆ ಕೆಲ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅದರೆ, ಭಾನುವಾರ ಕಾರವಾರ ಉಪ ವಿಭಾಗಾಧಿಕಾರಿ ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ.

Karwar: Fishermen protest against clearing huts beach

ಸ್ಥಳಾಂತರಕ್ಕೆ ಸಮಯ ನೀಡಿಲ್ಲ?: ಏಕಾಏಕಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೀನುಗಾರರು ವಿರೋಧ ವ್ಯಕ್ತಪಡಿಸಿ ಜೆಸಿಬಿ ಯಂತ್ರಗಳನ್ನು ತಡೆಯಲು ಯತ್ನಿಸಿದರು. ಅಧಿಕಾರಗಳ ಜೊತೆ ಮಾತಿನ ಚಕಮಕಿ ಕೂಡಾ ನಡೆಯಿತು. ಅದರೆ, ಸೂಕ್ತ ಪೊಲೀಸ್ ಭದ್ರತೆ ಇದ್ದ ಕಾರಣ ಮೀನುಗಾರರು ಅಧಿಕಾರಗಳ ಮುಂದೆ ಕೈ ಕಟ್ಟಿ ನಿಲ್ಲಬೇಕಾಯಿತು.ಸ್ಥಳಾಂತರಕ್ಕೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಯಾರಿಗೂ ತೊಂದರೆ ಉಂಟಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. [ಕಾರವಾರದ ಕಡಲ ಕಿನಾರೆಯಲ್ಲಿ ವಿಹರಿಸಿ]

ಇಲ್ಲಿ ಶತಮಾನಗಳಿಂದ ಕೊಂಕಣಿ ಖಾರ್ವಿ ಮೀನುಗಾರರು ನೆಲೆಸಿದ್ದಾರೆ. ಗುಡಿಸಲುಗಳಲ್ಲಿ ಮೀನುಗಾರಿಕೆಗೆ ಬೇಕಾದ ವಸ್ತುಗಳನ್ನು ಮಾತ್ರ ಇರಿಸಿರುತ್ತಾರೆ. ಇಲ್ಲಿಂದ ಸ್ಥಳಾಂತರಗೊಂಡರೆ ಅವರ ದೈನಂದಿನ ಬದುಕಿಗೆ ಭಾರಿ ಹೊಡೆತ ಬೀಳಲಿದೆ. ಇದೆಲ್ಲವೂ ತಾತ್ಕಾಲಿಕ ಡೇರೆ ಅಥವಾ ಗುಡಿಸಲುಗಳಾಗಿದ್ದು, ಯಾರೂ ಇಲ್ಲಿ ಸರ್ಕಾರದ ಜಾಗವನ್ನು ಅತಿಕ್ರಮಿಸಿಲ್ಲ ಎಂದು ಕೊಂಕಣ್ ಖಾರ್ವಿ ಮಹಾಜನ್ ಸಭಾ ಜಿಲ್ಲಾಧ್ಯಕ್ಷ ಮಹಾರುದ್ರ ಬನಾವಲಿ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+