Karnataka New Policy: ಬಹುಮಹಡಿ ಕಟ್ಟಡ ಕಟ್ಟುವವರಿಗೆ ಸರ್ಕಾರ ಗುಡ್ ನ್ಯೂಸ್! ಅನುಮತಿ ಕಡ್ಡಾಯ
ಬೆಂಗಳೂರು, ಮಾರ್ಚ್ 03: ಕರ್ನಾಟಕ ಸರ್ಕಾರದ ಬಹುದಿನಗಳ ಹೊಸ ನೀತಿಯೊಂದು ಜಾರಿ ತರುವ ಪ್ರಯತ್ನವು ಅಂತಿಮ ಹಂತಕ್ಕೆ ಬಂದಿದೆ. 'ಪ್ರೀಮಿಯಂ ಫ್ಲೋರ್ ಏರಿಯಾ ರೇಷಿಯೋ (FAR)' ನೀತಿ ಪರಿಚಯಿಸುವ ನಿರ್ಧಾರ ಪ್ರಕಟಿಸಿದೆ. ಈ ನೀತಿಯಡಿ ಬಹುಮಹಡಿ ಕಟ್ಟಡಗಳು ಇನ್ನೂ ದುಬಾರಿಯಾಗಲಿವೆ. ಬಹುಮಹಡಿ ನಿರ್ಮಿಸಲು ಬಿಲ್ಡರ್‌ಗಳು ಕಡ್ಡಾಯವಾಗಿ ಅನುಮತಿ ಪಡೆಯುವುದು, ಅದಕ್ಕಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಬಹುಮಹಡಿ ಕಟ್ಟಡ ಕಟ್ಟುವವರು ಮಾರ್ಗದರ್ಶನ ಮೌಲ್ಯದ ಶೇಕಡಾ 28 ರಷ್ಟು ಪಾವತಿಸಿ ಸಂಬಂಧಿಸಿದಂತೆ ನಾಗರಿಕ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು. ಈ ನೀತಿ ಬಿಲ್ಡರ್ಸ್‌ಗಳಿಗೆ ಗುಡ್ಯ ನ್ಯೂಸ್ ಆದರೂ ಸಹಿತ ಸಾರ್ವಜನಿಕರಲ್ಲಿ ಒಂದಷ್ಟು ಕಳವಳ ಹುಟ್ಟಲು ಕಾರಣವಾಗಿದೆ.

ಪ್ರೀಮಿಯಂ ಫ್ಲೋರ್ ಏರಿಯಾ ರೇಷಿಯೋ (FAR)' ನೀತಿಯನ್ನು ಕಟ್ಟಡ ನಿರ್ಮಾಣ ರಂಗದವರು, ಬಿಲ್ಡರ್ಸ್‌ಗಳು ವರದಾನದಂತೆ ಪರಿಗಣಿಸುತ್ತಾರೆ. ಆದರೆ ನೀತಿಯಡಿ ನಾಗರಿಕ ಸಂಸ್ಥೆಗಳು ನೀಡುವ ಅನುಮತಿ, ಸೂಕ್ತ ರೀತಿಯಲ್ಲಿ ಜಾರಿಯಾಗುವ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಜಾರಿಗೆ ತರುತ್ತಿರುವ ಈ ಎಫ್‌ಎಆರ್ ನೀತಿಯಲ್ಲಿ "ಗ್ರೇ ಏರಿಯಾಗಳು" ಬಗ್ಗೆ ಆತಂಕ ವ್ಯಕ್ತವಾಗಿದೆ. ಅಂದರೆ ಈಗಾಗಲೇ ನಿರ್ಮಿಸಲಾಗುತ್ತಿರುವ ಪೂರ್ಣಗೊಳ್ಳದ ಅಪೂರ್ಣ ಯೋಜನೆಗಳಿಗೆ ಈ ನೀತಿ ಅನ್ವಯವಾಗುತ್ತದೋ ಇಲ್ಲವೋ ಎಂಬ ಸ್ಪಷ್ಟತೆ ಇಲ್ಲ. ಒಂದು ವೇಳೆ ಸರ್ಕಾರದ ಕಣ್ತಪ್ಪಿಸಿ ಅಕ್ರಮ ಬಹುಮಹಡಿ ನಿರ್ಮಾಣ ಕಟ್ಟಡಗಳು ಸಹ ಅನುಮತಿ ಪಡೆಯಬಹುದೇ, ಅವು ಅಕ್ರಮವಾಗುತ್ತವೆಯೋ ಎಂಬುದರ ಬಗ್ಗೆ ಉಲ್ಲೇಖವಿಲ್ಲ.

ಪ್ರತಿಯೊಂದು ಅಂಶವನ್ನು ಈ ನೀತಿಯೊಳಗೆ ತರುವುದು ಅಗತ್ಯವಿದೆ. ಈ ನೀತಿಯು ನಾಗರಿಕ ಸಂಸ್ಥೆಗಳಾದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಯೋಜನೆ, ವಿವಿಧ ನಗರ ಪಾಲಿಕೆಗಳ ವ್ಯಾಪ್ತಿಯ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಗೆ ಬರುತ್ತವೆ. ಇವುಗಳು ಸಮರ್ಪಕವಾಗಿ ಪರಿಶೀಲಿಸಿ, ಬಹುಮಹಡಿಗೆ ಅನುಮತಿ ನೀಡಬೇಕು. ಇದರಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಸಾರ್ವಜನಿಕರಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ.
ಅನುಮತಿ ಪಡೆಯುವುದು ಹೇಗೆ?
ವಿಶಾಲ ಪ್ರದೇಶದಲ್ಲಿ ಬಹುಮಡಿ ಕಟ್ಟಡ ನಿರ್ಮಿಸಲು "ಪ್ರೀಮಿಯಂ ಶುಲ್ಕ ವಿಧಿಸುವ ಮೂಲಕ 'ಪ್ರೀಮಿಯಂ ಎಫ್‌ಎಆರ್ ಪ್ರಮಾಣಪತ್ರ' ಪಡೆಯಬೇಕಾಗುತ್ತದೆ. ಪ್ರೀಮಿಯಂ ಎಫ್‌ಎಆರ್ ಲೋಡ್ ಮಾಡಲಾದ ಕಟ್ಟಡಕ್ಕೆ ಯೋಜನಾ ಮಂಜೂರಾತಿ ಬಿಡುಗಡೆ ಮುನ್ನ, ಕೆಟಿಸಿಪಿ ಕಾಯ್ದೆ, 1961 ರ ಸೆಕ್ಷನ್ 15 ರ ಅಡಿಯಲ್ಲಿ ಅಭಿವೃದ್ಧಿ ಯೋಜನೆಗಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ನೀಡಬೇಕು. ನಂತರ ಹಂತ ಹಂತ ಪ್ರಕ್ರಿಯೆಗಳು ನಡೆಯುತ್ತವೆ ಎಂದು ಈ ಹೊಸ ನೀತಿಯಲ್ಲಿ ತಿಳಿಸಲಾಗಿದೆ.
ಹೊಸ ನೀತಿಯಲ್ಲಿ ಗೊಂದಲ, ಅಸ್ಪಷ್ಟತೆ ಇವೆಯಾ?
ಈಗಾಗಲೇ ಅನುಮೋದಿತ ಯೋಜನೆಗೆ ಬದಲಾವಣೆಗಳು ತರಬೇಕಾದರೆ, ಹೆಚ್ಚುವರಿ ಮಹಡಿ ನಿರ್ಮಿಸಲ ಇಚ್ಛಿಸಿದರೆ ಅನುಮತಿ ಪರಿಷ್ಕರಣೆ ಮಾಡಬೇಕಾ? ಅಂತವರಿಗೆ ಈ ನೀತಿ ಅನ್ವಯಿಸುತ್ತದಾ, ಆಕ್ಯುಪೆನ್ಸಿ ಪ್ರಮಾಣಪತ್ರಕ್ಕಾಗಿ ಕಾಯುತ್ತಿರುವವರು ಹೆಚ್ಚುವರಿ ಮಹಡಿ ಸೇರಿಸಲು ಅವಕಾಶ ಇದೆಯೋ ಎಂಬುದರ ಬಗ್ಗೆ ನೀತಿಯಲ್ಲಿ ಸ್ಪಷ್ಟಪಡಿಸಬೇಕಿದೆ.
ಒಂದು ವೇಳೆ ಬಹುಮಹಡಿ ಕಟ್ಟಿದ ಮೇಲೆ ಅಂತಹ ಮನೆಗಳ ಸ್ವಾಧೀನ ವೇಳೆ ತೊಂದರೆ ಉಂಟಾಗಬಹುದು. ಬಿಡಿಎ, ಬಿಬಿಎಂಫಿ, ಪ್ರಾಧಿಕಾರಗಳು ನೀಡಿರುವ ಅನುಮೋದನೆ ಮೇರೆಗೆ ನಿರ್ಮಾನಗೊಳ್ಳುತ್ತಿರುವ ಯೊಜನೆಗಳಿಗೆ ಈ ನೀತಿ ಹೇಗೆ ಅನ್ವಯಿಸುತ್ತದೆ ಎಂಬುದರ ಸ್ಪಷ್ಟತೆ ಇಲ್ಲದಾಗಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications