ಡಾ. ಅಪ್ಪಾಜಿ ಗೌಡ ಒಕ್ಕಲಿಗರ ಸಂಘಕ್ಕೆ ನೂತನ ಸಾರಥಿ

ಜಂಟಿ ಕಾರ್ಯದರ್ಶಿಯಾಗಿ ತುಮಕೂರಿನ ಶಶಿಕಿರಣ, ಖಜಾಂಜಿಯಾಗಿ ಮಂಡ್ಯದ ಬೆಟ್ಟೇಗೌಡ ಅವರು ಆಯ್ಕೆಯಾಗಿದ್ದಾರೆ. ಕೆಂಚಪ್ಪಗೌಡರ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಡಾ. ಮಹದೇವ್, ಜಾಲಹಳ್ಳಿ ರವಿ, ಡಾ. ರೇಣುಕಾ ಪ್ರಸಾದ್, ಕುಕ್ಕರದೊಡ್ಡಿ ಶಿವಣ್ಣ ಮತ್ತು ಎನ್ ರಮೇಶ್ ಅವರು ತಲಾ 14 ಮತ ಪಡೆದು ಸೋಲು ಕಂಡರು.
( ಒಕ್ಕಲಿಗರ ಸಂಘ: ಚುನಾವಣಾ ಫಲಿತಾಂಶ ವಿವರ )
ಈ ಮೊದಲು ಇದ್ದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ 5 ವರ್ಷದ ಅಧಿಕಾರಾವಧಿಯನ್ನು ಈಗ ಎರಡೂವರೆ ವರ್ಷ ಅವಧಿಗೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಇನ್ನೊಂದು ಅವಧಿಗೆ ಬಾಗೂರು ಮಂಜೇಗೌಡ, ಎ ಪ್ರಸಾದ್, ಡಿವಿ ರಮೇಶ್ ಅವರು ಪದಾಧಿಕಾರಿಗಳೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಕೆಂಚಪ್ಪಗೌಡರ ಅಕ್ರಮಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಾರಾ?: ಜನವರಿ 5ರಂದು ನಡೆದಿದ್ದ ಸಂಘದ ಚುನಾವಣೆಯ ಫಲಿತಾಂಶ ತಡವಾಗಿ ಹೊರಬಿದ್ದಿತ್ತು. ಅದರಲ್ಲಿ ಹಿಂದಿನ ಅಧ್ಯಕ್ಷ, ವಿವಾದಿತ ಕೆಂಚಪ್ಪಗೌಡ ಹೀನಾಯ ಸೋಲುಕಂಡಿದ್ದರು. ಡಾ. ಅಪ್ಪಾಜಿಗೌಡ ಅವರು 50 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸಿ, ಮಾಜಿ ಅಧ್ಯಕ್ಷ ಕೆಂಚಪ್ಪಗೌಡರನ್ನು ಬಗ್ಗುಬಡಿದಿದ್ದರು.
ಸುಮಾರು 2,000 ಕೋಟಿ ರೂ. ಪ್ರಮಾಣದ ಸಂಘದ ಆಸ್ತಿ ಕಬಳಿಸಿರುವ ಆರೋಪ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ ಅವರ ಮೇಲಿದೆ. ಅವರು ಎಸಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಾರಾ? ಬಿ. ಕೆಂಚಪ್ಪಗೌಡ ಕಬಳಿಸಿರುವ ಅಮೂಲ್ಯ ಆಸ್ತಿಯನ್ನು ಸಂಘದ ಸ್ವಾಧೀನಕ್ಕೆ ಪಡೆಯಲು ಡಾ. ಅಪ್ಪಾಜಿಗೌಡ ಅವರು ಕಾನೂನು ಹೋರಾಟ ನಡೆಸುತ್ತಾರಾ? ಎಂಬುದು ಸದ್ಯದ ಪ್ರಶ್ನೆ.












Click it and Unblock the Notifications