ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ; ಗೆದ್ದು ಬೀಗಿದ ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಫೆಬ್ರವರಿ 11 : ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಒಟ್ಟು 167 ವಾರ್ಡ್‌ಗಳಿಗೆ ಭಾನುವಾರ ಚುನಾವಣೆ ನಡೆದಿತ್ತು.

ಕರ್ನಾಟಕದ 5 ಜಿಲ್ಲೆಗಳ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಭಾನುವಾರ ಮತದಾನ ನಡೆದಿತ್ತು. ಮತ ಎಣಿಕೆ ಮಂಗಳವಾರ ನಡೆಯಿತು. ಒಟ್ಟು 167 ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 69 ಸ್ಥಾನದಲ್ಲಿ ಜಯಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಹೊಸಕೋಟೆ; ಎಂಟಿಬಿ ಮ್ಯಾಜಿಕ್, ಶಾಸಕ ಶರತ್ ಕಂಗಾಲುಹೊಸಕೋಟೆ; ಎಂಟಿಬಿ ಮ್ಯಾಜಿಕ್, ಶಾಸಕ ಶರತ್ ಕಂಗಾಲು

ವಿಜಯಪುರದ ಸಿಂಧಗಿ ಪುರಸಭೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭೆ, ಮೈಸೂರು ಜಿಲ್ಲೆಯ ಹುಣಸೂರು ನಗರಸಭೆ, ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ, ಸಿರಗುಪ್ಪ ನಗರ ಸಭೆ ಸೇರಿದಂತೆ 5 ಜಿಲ್ಲೆಗಳಲ್ಲಿ ಚುನಾವಣೆ ನಡೆದಿತ್ತು.

ಬಳ್ಳಾರಿ ಸ್ಥಳೀಯ ಸಂಸ್ಥೆ ಚುನಾವಣೆ: ಒಂದು ಕಮಲ, ಒಂದು ಹಸ್ತಬಳ್ಳಾರಿ ಸ್ಥಳೀಯ ಸಂಸ್ಥೆ ಚುನಾವಣೆ: ಒಂದು ಕಮಲ, ಒಂದು ಹಸ್ತ

ಮತ ಎಣಿಕೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಕರ್ನಾಟಕದಲ್ಲಿ ಆಡಳಿತದಲ್ಲಿರುವ ಬಿಜೆಪಿ 167 ವಾರ್ಡ್‌ಗಳ ಪೈಕಿ 59ರಲ್ಲಿ ಮಾತ್ರ ಗೆಲುವು ಕಂಡಿದೆ.

ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ! ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!

5 ಜಿಲ್ಲೆಗಳಲ್ಲಿ ಚುನಾವಣೆ

5 ಜಿಲ್ಲೆಗಳಲ್ಲಿ ಚುನಾವಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 31, ಚಿಕ್ಕಬಳ್ಳಾಪುರದ 31, ಮೈಸೂರಿನ 31, ಬಳ್ಳಾರಿಯ 51, ವಿಜಯಪುರದ 23 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 167 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ.

ಯಾರಿಗೆ ಎಷ್ಟು ಸೀಟುಗಳು

ಯಾರಿಗೆ ಎಷ್ಟು ಸೀಟುಗಳು

ಒಟ್ಟು 167 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 59, ಕಾಂಗ್ರೆಸ್ 69, ಜೆಡಿಎಸ್ 15, 10 ಇತರರು, 14 ಪಕ್ಷೇತರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.

ಫಲಿತಾಂಶದ ಹೈಲೈಟ್ಸ್

ಫಲಿತಾಂಶದ ಹೈಲೈಟ್ಸ್

* ವಿಜಯಪುರದ ಸಿಂಧಗಿ ಪುರಸಭೆ (23 ವಾರ್ಡ್) ಕಾಂಗ್ರೆಸ್ 11, ಬಿಜೆಪಿ 3, ಜೆಡಿಎಸ್ 6, ಮೂವರು ಪಕ್ಷೇತರರು.
* ಹುಣಸೂರು ನಗರ ಸಭೆ (31 ವಾರ್ಡ್) ಕಾಂಗ್ರೆಸ್ 14, ಜೆಡಿಎಸ್ 7, ಬಿಜೆಪಿ 3, ಪಕ್ಷೇತರ 5, ಎಸ್‌ಡಿಪಿಐ 2.
* ಸಿರಗುಪ್ಪ ನಗರಸಭೆ (31 ವಾರ್ಡ್) ಬಿಜೆಪಿ 8, ಕಾಂಗ್ರೆಸ್ 16, ಪಕ್ಷೇತರ 1
* ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ (20 ವಾರ್ಡ್) ಬಿಜೆಪಿ 11, ಕಾಂಗ್ರೆಸ್ 9
* ಹೊಸಕೋಟೆ ನಗರ ಸಭೆ (31 ವಾರ್ಡ್) ಬಿಜೆಪಿ 22, ಸ್ವಾಭಿಮಾನಿ ಪಕ್ಷ 7, ಎಸ್‌ಡಿಪಿಐ 1, ಪಕ್ಷೇತರ 1

ಕಾರ್ಯಕರ್ತರಿಗೆ ಅಭಿನಂದನೆ

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಗೆದ್ದಂತಹ ಎಲ್ಲ ಪ್ರತಿನಿಧಿಗಳಿಗೂ ಕಾಂಗ್ರೆಸ್ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದೆ.

English summary
Congress bagged 69 seat in the Karnataka urban local bodies election February 2020. BJP won 59 and JD(S) 15 seat in 167 wards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X