Trekking Rules: ಟ್ರೆಕ್ಕಿಂಗ್ ಹೋಗುವ ಮುನ್ನ ಈ ರೂಲ್ಸ್ ತಿಳಿದುಕೊಳ್ಳಿ; ಅರಣ್ಯ ಇಲಾಖೆ ಹೊಸ SOP ಜಾರಿ

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಶುರುವಾಗುತ್ತಿದ್ದಂತೆ ತೆರೆಯುವ ಚಾರಣ ಸ್ಥಳಗಳಲ್ಲಿ ಇತ್ತೀಚೆಗೆ ಮೇಲಿಂದ ಮೇಲೆ ಅನಾಹುತಗಳು ಸಂಭವಿಸಿದ ಪ್ರಕರಣಗಳು ವರದಿ ಆಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಾರಣಿಗರ ಸುರಕ್ಷತೆ ಮತ್ತು ಪರಿಸರ ರಕ್ಷಿಸುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಅರಣ್ಯ ಇಲಾಖೆಯು ಚಾರಣ ಚಟುವಟಿಕೆಗಳನ್ನು ನಿಯಂತ್ರಿಸಲು ಸಮಗ್ರ ಮಾದರಿ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಜಾರಿಗೊಳಿಸಿ ಆದೇಶಿಸಿದೆ.

ರಾಜ್ಯದ ಪಶ್ಚಿಮ ಘಟ್ಟಗಳು, ಅರಣ್ಯ ಪ್ರದೇಶ ಸೇರಿ ಇತರೆ ಜಾಗಗಳಲ್ಲಿ 39 ಚಾರಣ ಸ್ಥಳಗಳನ್ನು ಇಲಾಖೆಯು ಗುರುತಿಸಿದೆ. 2026ರ ಜನವರಿ ತಿಂಗಳಿನಿಂದ ಕೊಡಗಿನ ತಡಿಯಾಂಡ ಮೋಳ್, ಚಿಕ್ಕಮಗಳೂರಿನ ಮಾಣಿಕ್ಯಧಾರ ಜಲಪಾತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆ ಬೆಟ್ಟದಲ್ಲಿ ಚಾರಣಕ್ಕೆ ಹೋದವರು ಕಾಣೆಯಾಗಿದ್ದು ವರದಿ ಆಗಿತ್ತು. ಕೇರಳದ ಒಬ್ಬ ಯುವತಿ ನಾಪತ್ತೆಯಾಗಿ ಮ್ತೆ ಜೀವಂತವಾಗಿ ಪತ್ತೆಯಾದರೆ, ಅದಾಗಿ ಕೆಲ ದಿನಗಳ ಬಳಿಕ ಮತ್ತೊಂದು ಚಾರಣ ಸ್ಥಳಕ್ಕೆ ಹೋದ ಇನ್ನೊಬ್ಬ ಕೇರಳದ ಯುವತಿ ಮೃತಪಟ್ಟಿದ್ದಳು.

Karnataka Trekking Rules

ಅನಾಹುತ ತಡೆಗೆ ಹೆಚ್ಚಾಗಿತ್ತು ಒತ್ತಾಯ

ಅಲ್ಲದೇ ಕಳೆದ ತಿಂಗಳು ಆಗಸ್ಟ್‌ನಲ್ಲಿ ಶಿವಗಂಗೆ ಬೆಟ್ಟಕ್ಕೆ ತೆರಳಿದ್ದ ಟೆಕ್ಕಿಯೊಬ್ಬರ ಸುಳಿವು ಇವತ್ತಿಗೂ ಸಿಕ್ಕಿಲ್ಲ. ಹೀಗಾಗಿ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಂದ ಚಾರಣಿಗರ ಸುರಕ್ಷತೆಗೆ ಸರ್ಕಾರ ಕ್ರಮ ವಹಿಸಬೇಕು ಎಂಬ ಒತ್ತಾಯ ಜೋರಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಅನಾಹುತಕ್ಕೆ ಕಾರಣ, ಪರಿಸರ ರಕ್ಷಣೆಗೆ ಏನು ಕ್ರಮ ವಹಿಸಬೇಕು ಎಂಬುದನ್ನು ಚರ್ಚಿಸಿ ಎಸ್‌ಒಪಿ ಜಾರಿಗೊಳಿಸಿದೆ.

ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳುತ್ತಿದೆ..?

ಹೊಸ ಎಸ್‌ಒಪಿ ಮಾರ್ಗಸೂಚಿಗಳ ಪ್ರಕಾರ, ಹುಲಿ, ಚಿರತೆ, ಆನೆ, ಕರಡಿ ಸೇರಿ ಇತರೆ ವನ್ಯ ಜೀವಿಧಾಮ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಉದ್ದೇಶಿಸಿಲಾಗಿದೆ. ಇನ್ನೂ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು ನಿಗಾವಹಿಸಲಿದ್ದಾರೆ. ಚಾರಣ ಸ್ಥಳಗಳಲ್ಲಿ ನಿರಂತರವಾಗಿ ಸ್ಥಳೀಯ ಸಮುದಾಯಗಳು ಮತ್ತು ಡ್ರೋನ್ ಕಣ್ಗಾವಲು ಇರಲಿದೆ. ಯಾರೊಬ್ಬರು ಚಾರಣದಲ್ಲಿ ಅರಣ್ಯ ಇಲಾಖೆ ಸೂಚಿತ ನಿಯಮ, ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಿಲ್ಲ ಎಂದು ತಿಳಿಸಿದೆ. ಚಾರಣ ವೇಳೆ ಗುರುತಿಸಿರುವ ಹಾದಿಗಳನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ಸಾಗುವಂತಿಲ್ಲ. ಒಂದು ವೇಳೆ ಹೀಗಾದರೆ ಚಾರಣಿಗರು ಮತ್ತು ಗೈಡ್ (ಮಾರ್ಗದರ್ಶಕರು, ಅಥವಾ ಕರೆದೊಯ್ದವರ) ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಜೊತೆಗೆ ಅಂಥವರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಚಾರಣ ಪ್ರದೇಶಗಳಲ್ಲಿ ಮೂಲಸೌಲಭ್ಯಗಳಿಗೆ ಒತ್ತು

ಚಾರಣ ತಾಣಗಳಲ್ಲಿ ಪೀಕ್ ತಲುಪಲು ತೆರಳುವ ಮಾರ್ಗ/ ಹಾದಿಗಳು, ದಿಕ್ಕುಗಳನ್ನು ಸೂಚಿಸುವ ಸೈನ್‌ ಬೋರ್ಡ್‌ಗಳು, ವಿಶ್ರಾಂತಿ ಪ್ರದೇಶಗಳು ಮತ್ತು ಬೇಸ್ ಕ್ಯಾಂಪ್‌ಗಳಲ್ಲಿ ಕುಡಿಯಲು ನೀರು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತ್ಯೇಕ ಶೌಚಾಲಯಗಳು ಅತ್ಯಗತ್ಯ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಮುಂದಿನ ಎಂಟು ವಾರಗಳಲ್ಲಿ ಇದೆಲ್ಲ ವ್ಯವಸ್ಥೆ ಮಾಡಬೇಕು. ಚಾರಣಿಗರಿಗೆ ಸೂಕ್ತ ಅನುಭವ, ಅವಕಾಶ ನೀಡವಂತೆ ಇಲಾಖೆ ನಿರ್ದೇಶಿಸಿದೆ.

ಜನಜಂಗುಳಿಗೆ ಕಡಿವಾಣ, ನಿಯಮಿತ ಜನರಿಗೆ ಅವಕಾಶ

ಟ್ರೆಕಿಂಗ್ ಎಂದಾಕ್ಷಣ ಜನರು ದಾಂಗುಡಿ ಇಡುತ್ತಾರೆ. ಚಾರಣ ಪ್ರದೇಶಗಳು ಸಾರ್ವಜನಿಕರಿಗೆ ಮುಕ್ತವಾಗುವ ಮುನ್ನ ಚಾರಣ ಮಾರ್ಗದಲ್ಲಿ ನಿರ್ದಿಷ್ಟ ಸುರಕ್ಷತೆ ಕಾಯ್ದುಕೊಳ್ಳಲು, ಅನಿರೀಕ್ಷಿತ ತೊಂದರೆ ತಡೆಗೆ ಮತ್ತು ಅರಣ್ಯ ಸಿಬ್ಬಂದಿ ಮೇಲ್ವಿಚಾರಣೆಯನ್ನು ಸುಗಮಗೊಳಿಸಲು ಪ್ರತಿ ದಿನ 150 ಸಂದರ್ಶಕರಿಗೆ (ಚಾರಣಿಗರ) ಮಾತ್ರವೇ ಪ್ರವೇಶ ಮಿತಿಗೊಳಿಸಲಾಗಿದೆ. ತರಬೇತಿ ಪಡೆದ ಸ್ಥಳೀಯ ಯುವಕರು ಚಾರಣ ಗುಂಪುಗಳ ಜೊತೆಗೆ ಮಾರ್ಗದರ್ಶಕರಾಗಿ ತೆರಳುತ್ತಾರೆ.

ಮೊಬೈಲ್ ಸಂಪರ್ಕ ಇರದ ಸೂಕ್ಷ್ಮ ಮತ್ತು ದೂರದ ಪ್ರದೇಶಗಳಿಗೆ ಚಾರಣಿಗರು ಹೋಗದಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲದೇ ಮೊಬೈಲ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಜಿಪಿಎಸ್ ಆಧಾರಿತ ಸಾಧನಗಳ ಅಳವಡಿಕೆಗೂ ಅರಣ್ಯ ಇಲಾಖೆ ತೀರ್ಮಾನಿಸಿದೆ. ಒಟ್ಟಾರೆ ಎಸ್‌ಒಪಿಯನ್ನು ಸರಿಯಾದ ನಿಟ್ಟಿನಲ್ಲಿ ಜಾರಿಗೊಳಿಸುವ ಮೂಲಕ ಚಾರಣಕ್ಕೆ ಹೋದಾಗ ಪ್ರವಾಸಿಗರಿಗೆ ತೊಂದರೆ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಲು ಮುಂದಾಗಿದೆ. ಚಾರಣಕ್ಕೆ ತೆರಳಿದವರೂ ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿರುತ್ತದೆ. ಬಹುಶಃ ಮುಂದಿನ ವರ್ಷದಿಂದ ರಾಜ್ಯದ ಎಲ್ಲ ಚಾರಣ ಸ್ಥಳಗಳ ಶೇಕಡಾ ನೂರರಷ್ಟು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+