HSRP: ನಂಬರ್ ಪ್ಲೇಟ್ ವಂಚಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಾರಿಗೆ ಸಚಿವರು!
ವಾಹನ ಸವಾರರಿಗೆ ಒಂದಲ್ಲ ಒಂದು ಟೆನ್ಷನ್ ಎದುರಾಗುತ್ತಿದೆ. ಮೊದಲಿಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಫೆಬ್ರವರಿ 17ರ ಡೆಡ್‌ಲೈನ್ ನೀಡಿದ್ದು ಭಾರಿ ಗೊಂದಲ ಸೃಷ್ಟಿ ಮಾಡಿತ್ತು. ಈಗ ಮತ್ತೆ 3 ತಿಂಗಳು ಮುಂದಕ್ಕೆ ಹೋಗಿದೆ ಆ ಡೆಡ್‌ಲೈನ್. ಇಷ್ಟೆಲ್ಲದರ ನಡುವೆ HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ, ಆನ್‌ಲೈನ್ ಮೂಲಕ ವಂಚನೆ ಮಾಡುತ್ತಿರುವ ಮೋಸಗಾರರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಖಡಕ್ ಆಗಿಯೇ ವಾರ್ನಿಂಗ್ ಕೊಟ್ಟಿದ್ದಾರೆ.
ಹೌದು, ವಾಹನ ಮಾಲೀಕರಿಗೆ ಈಗ ಟೆನ್ಷನ್.. ಟೆನ್ಷನ್.. ಯಾಕಂದ್ರೆ ಇನ್ನು 3 ದಿನದ ಒಳಗೆ ತಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಂದ್ರೆ ಅತಿ ಸುರಕ್ಷಿತ ನೋಂದಣಿ ಫಲಕದ ಅಳವಡಿಕೆ ಮಾಡಿಕೊಳ್ಳದೆ ಇದ್ರೆ ಸಮಸ್ಯೆ ಗ್ಯಾರಂಟಿ ಎನ್ನಲಾಗಿತ್ತು. ಹೀಗಾಗಿಯೇ ಈಗ ರಾಜ್ಯ ಸರ್ಕಾರ ಅಂದ್ರೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ 3 ತಿಂಗಳ ಹೆಚ್ಚುವರಿ ಸಮಯವನ್ನ ನೀಡಿದೆ. ಹೀಗಿದ್ದಾಗಲೇ ಆನ್‌ಲೈನ್ ವಂಚಕರಿಗೆ ಖುದ್ದು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಂಬರ್ ಪ್ಲೇಟ್ ವಿಚಾರದಲ್ಲಿ ವಂಚನೆಗಳು ಬೆಳಕಿಗೆ ಬಂದರೆ ಕಠಿಣ ಕ್ರಮ ಗ್ಯಾರಂಟಿ ಎಂದಿದ್ದಾರೆ.

ವಂಚಕರಿಗೆ ಖಡಕ್ ಎಚ್ಚರಿಕೆ ಸಂದೇಶ
ಅಂದಹಾಗೆ ಇಂದು ವಿಧಾಸಭೆಯಲ್ಲಿ ಈ ಕುರಿತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಆನ್‌ಲೈನ್ ವಂಚನೆ ಬಗ್ಗೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಈ ಮೂಲಕ ಗ್ರಾಹಕರನ್ನು ವಂಚಿಸಿದ್ದ, ವಂಚನೆ ಮಾಡುತ್ತಿದ್ದ ಆನ್‌ಲೈನ್ ವಂಚಕರಿಗೆ ಬಿಸಿ ಮುಟ್ಟಿದೆ. ಹಾಗೇ ಮತ್ತೊಂದು ಕಡೆ, 3 ತಿಂಗಳ ಕಾಲ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಸಮಯ ಮುಂದೂಡಿಕೆ ಆಗಿದೆ. ಇಷ್ಟೆಲ್ಲದರ ನಡುವೆ ನಕಲಿ ವೆಬ್‌ಸೈಟ್ ಹಾಗೂ ಆನ್‌ಲೈನ್ ವಂಚಕರಿಗೂ ಸರಿಯಾಗಿ ಬಿಸಿ ಮುಟ್ಟಿಸಲಾಗುತ್ತಿದೆ.
ಎಷ್ಟು ದಂಡ ಕಟ್ಟಬೇಕು ಗೊತ್ತಾ?
ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಗ್ಯಾರಂಟಿ ಎಂಬುದು ಕೂಡ ವಾಹನ ಸವಾರರಿಗೆ ತಲೆನೋವು ತರಿಸಿತ್ತು. ಫೆಬ್ರವರಿ 17ಕ್ಕೆ ಗಡುವು ಮುಗಿದ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದಿದ್ದ ವಾಹನದ ಮಾಲಿಕರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆಯೂ ಎಚ್ಚರಿಕೆ ನೀಡಿತ್ತು. ಎಚ್‌ಎಸ್‌ಆರ್‌ಪಿ ನಿಯಮದ ಮೊದಲ ಬಾರಿ ಉಲ್ಲಂಘನೆಗಾಗಿ 1 ಸಾವಿರ ರೂಪಾಯಿ ದಂಡ. ನಂತರದ ಉಲ್ಲಂಘನೆಗೆ ಪ್ರತಿ ಬಾರಿ ಕೂಡ, 1 ಸಾವಿರ ರೂಪಾಯಿ ದಂಡ ಗ್ಯಾರಂಟಿ ಆಗಿತ್ತು.

ಸಂಪೂರ್ಣ ವೆಬ್‌ಸೈಟ್ ಮಾಹಿತಿ ಇಲ್ಲಿದೆ
ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ವಾಹನ ಸವಾರರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ನಂಬರ್ ಪ್ಲೇಟ್ ಅಳವಡಿಕೆ ಸಮಯದಲ್ಲಿ ಸರ್ಕಾರ ಸೂಚಿಸಿರುವ ವೆಬ್‌ಗೆ ಮಾತ್ರ ಭೇಟಿ ನೀಡಬೇಕು. ಕರೆಗಳ ವಿಚಾರದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಬೇಕು.
ನಿಮ್ಮ ವಾಹನಕ್ಕೂ ಭದ್ರತೆ ಹೆಚ್ಚು
ಒಟ್ನಲ್ಲಿ ನಿಮ್ಮ ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗಾಗಿ ಇದೀಗ ಮತ್ತೆ 3 ತಿಂಗಳ ಸಮಯ ಸಿಕ್ಕಿದೆ. ಹೀಗಾಗಿ ಆದಷ್ಟು ಬೇಗ ನಿಮ್ಮ ಗಾಡಿಗೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಿ. ಈ ಮೂಲಕ ಸರ್ಕಾರದ ಆದೇಶವನ್ನು ಪಾಲನೆ ಮಾಡಿ. ಇಲ್ಲವಾದರೆ ಮತ್ತೊಮ್ಮೆ ಗಡುವು ಮುಗಿದ ನಂತರ ಭಾರಿ ಪ್ರಮಾಣದ ದಂಡವನ್ನ ಕಟ್ಟಬೇಕಾಗಿ ಬರುತ್ತದೆ. ಈ ಕಾರಣಕ್ಕೆ ಅಲರ್ಟ್ ಆಗಿ ನಿಮ್ಮ ವಾಹನಕ್ಕೆ, ನಂಬರ್ ಪ್ಲೇಟ್ ಹಾಕಿಸಿಕೊಂಡು ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ. ಹಾಗೇ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಯಿಂದ ನಿಮ್ಮ ವಾಹನಕ್ಕೂ ಹೆಚ್ಚಿನ ಭದ್ರತೆ ಸಿಗಲಿದೆ.












Click it and Unblock the Notifications