ಗುಜರಿ ಸೇರಲಿವೆ ನಷ್ಟ ಮಾಡುವ ಮಾರ್ಕೊಪೋಲೊ ಬಸ್!

ಬೆಂಗಳೂರು, ಜ. 10 : ಸಾರಿಗೆ ಸಂಸ್ಥೆಗಳ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಕೊಪೋಲೊ ಬಸ್ಸುಗಳನ್ನು ಗುಜರಿಗೆ ಹಾಕಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಬೆಂಗಳೂರು ಮತ್ತು ಮೈಸೂರು ನಗರ ಸೇರಿ ಒಟ್ಟು 142 ಮಾರ್ಕೊಪೋಲೊ ಬಸ್‌­ಗಳು ಸಂಚರಿಸುತ್ತಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಮೈಸೂರು ನಗರ ಸಾರಿಗೆಯಲ್ಲಿ ಸಂಚರಿ­ಸುತ್ತಿರುವ ಮಾರ್ಕೊಪೋಲೊ ಬಸ್ಸುಗಳನ್ನು ಗುಜರಿಗೆ ಹಾಕಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. [ಸಾರಿಗೆ ಸಂಸ್ಥೆಗಳ ನಷ್ಟ, ಎಚ್ಡಿಕೆ ಪ್ರಶ್ನೆಗಳು]

Marcopolo buses

2009ರಲ್ಲಿ ಬಿಎಂಟಿಸಿಗಾಗಿ 98 ಹವಾನಿಯಂತ್ರಿತ ಮಾರ್ಕೊಪೋಲೊ ಬಸ್‌ ಮತ್ತು ಮೈಸೂರಿನಲ್ಲಿ 44 ಹವಾನಿಯಂತ್ರಿತ­ವಲ್ಲದ ಬಸ್ಸುಗಳನ್ನು ಖರೀದಿ ಮಾಡಲಾಗಿತ್ತು. ಸದ್ಯ ಇವುಗಳ ನಿರ್ವಹಣಾ ವೆಚ್ಚವೇ ಅಧಿಕವಾಗಿರುವ ಹಿನ್ನಲೆಯಲ್ಲಿ ಅವುಗಳನ್ನು ಗುಜರಿಗೆ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. [ಸಚಿವ ಸಂಪುಟ ಸಭೆಯ ತೀರ್ಮಾನಗಳು]

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಜೆನರ್ಮ್‌ ಯೋಜನೆಯಡಿ 31 ಲಕ್ಷ ರೂ. ನೀಡಿ ಪ್ರತಿ ಮಾರ್ಕೊಪೋಲೊ ಬಸ್ ಖರೀದಿ ಮಾಡಲಾಗಿತ್ತು. ಈ ಬಸ್‌ಗಳಿಂದ ತಿಂಗಳಿಗೆ 1.56 ಕೋಟಿ ನಷ್ಟ ಆಗು­ತ್ತಿದೆ. ಆದ್ದರಿಂದ ಇವುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಾರ್ಕೊ­ಪೋಲೊ ಬಸ್ಸುಗಳನ್ನು ಸಂಚಾರದಿಂದ ಹಿಂದಕ್ಕೆ ಪಡೆದು ಗುಜರಿಗೆ ಕಳುಹಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಸ್ಸುಗಳು ನಿತ್ಯವೂ ಕೆಟ್ಟು ನಿಲ್ಲುತ್ತಿವೆ. ತಾಂತ್ರಿಕ ಗುಣಮಟ್ಟವೂ ಉತ್ತಮವಾಗಿಲ್ಲ. ದುರಸ್ತಿ ಮಾಡಿ, ಸಂಚಾರಕ್ಕೆ ಬಿಟ್ಟರೂ ನಷ್ಟವಾಗಲಿದೆ ಎಂದು ತಿಳಿಸಿದರು.

ಖರೀದಿ ಏಕೆ : ಬೆಂಗಳೂರಿನ ರಸ್ತೆಗಳಿಗೆ ಮಾರ್ಕೊಪೋಪೊ ಬಸ್ಸುಗಳು ಸರಿ ಹೊಂದುವುದಿಲ್ಲ. ಆದರೂ ಏಕೆ ಖರೀದಿ ಮಾಡಲಾಗಿದೆ? ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಜಯಚಂದ್ರ ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+