Karnataka Reservoir Level Today: ಆಲಮಟ್ಟಿ ಭರ್ತಿ ಹಂತಕ್ಕೆ! ಇಂದು KRS, ಕಬಿನಿಯಲ್ಲಿ ಒಳ-ಹೊರ ಹರಿವು ಎಷ್ಟಿದೆ?
ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಸುರಿದ ಹಾಗೂ ಅಲಲ್ಲ ಬರುತ್ತಿರುವ ಮಳೆಯಿಂದಾಗಿ ನದಿಗಳ ಒಳಹರಿವು ಏರಿಕೆ ಆಗಿದೆ. ಕೆಲವು ಜಲಾಶಯಗಳಲ್ಲಿ ನೀರು ದಿನೇ ದಿನೇ ಖಾಲಿ ಆಗುತ್ತಿದ್ದು, ಆಲಮಟ್ಟಿ, ತುಂಗಭದ್ರಾ ಡ್ಯಾಂಗಳಲ್ಲಿ ನೀರು ಭರ್ತಿ ಹಂತದಲ್ಲಿದ್ದು, ಜೀವಕಳೆ ಬಂದಿದೆ. ಕೃಷ್ಣ ರಾಜ ಸಾಗರ (KRS), ಕಬಿನಿ ಇನ್ನಿತರ ಡ್ಯಾಂಗಳಲ್ಲಿ ನೀರಿನ ಹೊರ ಹರಿವು ಏರಿಕೆ ಆಗಿದೆ. ಇದರಿಂದ ಜಲಾನಯನ ಭಾಗದ ರೈತರು, ನಾಗರಿಕರು ಆತಂಕ ಮನೆ ಮಾಡಿದೆ. ಇಂದು ಶುಕ್ರವಾರ (ಸೆ18) ಕರ್ನಾಟಕದ ಪ್ರಮುಖ ಅಣೆಕಟ್ಟುಗಳ ನೀರಿನ ಮಟ್ಟ ಎಷ್ಟಿದೆ ಎಂಬ ವಿವರ ಇಲ್ಲಿದೆ.
ಕರ್ನಾಟಕದ ಅರ್ಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದ್ದು, ಮುಂದಿನ ಕೆಲವು ದಿನ ಮಳೆ ಆಗಲಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಮಲೆನಾಡು, ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳ, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆಗಾಗ ಬಂದು ಹೋಗುವ ಮಳೆಯಿಂದ ಹಾರಂಗಿ, ಹೇಮಾವತಿ, ತುಂಗಭದ್ರಾ, ಕೆಆರ್. ಎಸ್, ಕಬಿನಿ ಡ್ಯಾಂಗಳಲ್ಲಿ ಒಳಹರಿವು ಉತ್ತಮವಾಗಿದೆ. ಘಟಪ್ರಭಾ ಜಲಾಶಯದಲ್ಳೂ ನೀರಿನ ಸಂಗ್ರಹ ಉತ್ತಮವಾಗಿದೆ.

ಕರ್ನಾಟಕ ಜಲಾಶಯಗಳ ಇಂದಿನ ನೀರಿನ ಸಂಗ್ರಹ
* ಕಬಿನಿ ಜಲಾಶಯದ ನೀರಿನ ಮಟ್ಟ
ಗರಿಷ್ಠ ಮಟ್ಟ: 19.52 ಟಿಎಂಸಿ
ಇಂದಿನ ಸಂಗ್ರಹ: 10.97 ಟಿಎಂಸಿ
ಒಳಹರಿವು: 914 ಕ್ಯೂಸೆಕ್
ಹೊರ ಹರಿವು: 557ಕ್ಯೂಸೆಕ್
* ಹಾರಂಗಿ ಡ್ಯಾಂ ನೀರಿನ ಮಟ್ಟ
ಗರಿಷ್ಠ ಮಟ್ಟ: 8.50 ಟಿಎಂಸಿ
ಇಂದಿನ ಸಂಗ್ರಹ: 6.14 ಟಿಎಂಸಿ
ಒಳಹರಿವು: 229 ಕ್ಯೂಸೆಕ್
ಹೊರ ಹರಿವು: 2950 ಕ್ಯೂಸೆಕ್
* KRS ಜಲಾಶಯದ ನೀರಿನ ಮಟ್ಟ
ಗರಿಷ್ಠ ಮಟ್ಟ: 49.45 ಟಿಎಂಸಿ
ಇಂದಿನ ಸಂಗ್ರಹ: 27.83 ಟಿಎಂಸಿ
ಒಳಹರಿವು: 4152ಕ್ಯೂಸೆಕ್
ಹೊರ ಹರಿವು: 1516ಕ್ಯೂಸೆಕ್
* ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ: 123 ಟಿಎಂಸಿ
ಇಂದಿನ ಸಂಗ್ರಹ: 119.23 ಟಿಎಂಸಿ
ಒಳಹರಿವು: 00 ಕ್ಯೂಸೆಕ್
ಹೊರ ಹರಿವು: 10389ಕ್ಯೂಸೆಕ್
* ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟ
ಗರಿಷ್ಠ ಮಟ್ಟ: 151.75 ಟಿಎಂಸಿ
ಇಂದಿನ ಸಂಗ್ರಹ: 86.86 ಟಿಎಂಸಿ
ಒಳಹರಿವು: 2084ಕ್ಯೂಸೆಕ್
ಹೊರ ಹರಿವು: 7343ಕ್ಯೂಸೆಕ್
* ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ: 37.10 ಟಿಎಂಸಿ
ಇಂದಿನ ಸಂಗ್ರಹ: 18.17 ಟಿಎಂಸಿ
ಒಳಹರಿವು: 1726ಕ್ಯೂಸೆಕ್
ಹೊರ ಹರಿವು: 9300ಕ್ಯೂಸೆಕ್
* ತುಂಗಭದ್ರಾ ಅಣೆಕಟ್ಟು
ಗರಿಷ್ಠ ಮಟ್ಟ: 105 ಟಿಎಂಸಿ
ಇಂದಿನ ಸಂಗ್ರಹ: 82.74 ಟಿಎಂಸಿ
ಒಳಹರಿವು: 00 ಕ್ಯೂಸೆಕ್
ಹೊರ ಹರಿವು: 11771 ಕ್ಯೂಸೆಕ್
* ಭದ್ರಾ ಅಣೆಕಟ್ಟಿನ ಸಂಗ್ರಹ
ಗರಿಷ್ಠ ಮಟ್ಟ: 71.54 ಟಿಎಂಸಿ
ಇಂದಿನ ಸಂಗ್ರಹ: 62.19 ಟಿಎಂಸಿ
ಒಳಹರಿವು: 314ಕ್ಯೂಸೆಕ್
ಹೊರ ಹರಿವು: 1726ಕ್ಯೂಸೆಕ್
* ಘಟಪ್ರಭಾ ಜಲಾಶಯ ಮಟ್ಟ
ಗರಿಷ್ಠ ಮಟ್ಟ: 51 ಟಿಎಂಸಿ
ಇಂದಿನ ಸಂಗ್ರಹ: 50.84 ಟಿಎಂಸಿ
ಒಳಹರಿವು: 509 ಕ್ಯೂಸೆಕ್
ಹೊರ ಹರಿವು: 190 ಕ್ಯೂಸೆಕ್


Click it and Unblock the Notifications
