Karnataka Rains: ವಾಯುಭಾರ ಕುಸಿತ! ಇಂದಿನಿಂದ ರಾಜ್ಯದ 14 ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು: ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಒಳನಾಡು ಭಾಗಗಳಲ್ಲಿ ಆಗಾಗ ಸೋನೆ ಮತ್ತು ಹಗುರ ಮಳೆ ಸುರಿಯುತ್ತಿದೆ. ವಾಯು ಚಂಡಮಾರುತ ಪ್ರಸರಣದಿಂದಾಗಿ ಇನ್ನೂ ಕೆಲವು ದಿನಗಳ ಕಾಲ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದಿನಿಂದ ಮುಂದಿನ ಜುಲೈ 31ರವರೆಗೆ ಒಟ್ಟು ಐದು ದಿನಗಳ ಕಾಲ ಸುಮಾರು 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಉಡುಪಿ, ಉತ್ತರ, ಕನ್ನಡ ದಕ್ಷಿಣ ಹಾಗೂ ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ವಿಜಯಪುರ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳ ಹಲವು ಕಡೆಗಳಲ್ಲಿ ಸಾಧರಣದಿಂದ ಭಾರೀ ಮಳೆ ಆಗಲಿದ್ದು ಹವಾಮಾನ ಇಲಾಖೆ ಮುನ್ಸೂಚನೆ (IMD) ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಿದೆ.

Karnataka Rains

ತಗ್ಗಲಿದೆ ಮಳೆ ಪ್ರಭಾವ

ಮೂರು ದಿನಗಳ ಬಳಿಕ ಕರಾವಳಿಯಲ್ಲಿ ಮಳೆ ಪ್ರಮಾಣ ತಗ್ಗಲಿದೆ. ಆದರೆ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಗುರ, ಸಾಧಾರಣ ಮತ್ತು ಭಾರೀ ಮಳೆ ಆಗಲಿದೆ. ಕಳೆದ ಸುಮಾರು ಎಂಟು-ಹತ್ತು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ತಂಪು, ದಿನವಿಡೀ ಮಬ್ಬು ವಾತಾವರಣ ಕಂಡು ಬಂದಿದೆ. ಒಂದೆರಡು ಕಡೆಗಳಲ್ಲಿ ಜೋರು ಮಳೆ ಬಿಟ್ಟರೆ, ಉಳಿದ ಕಡೆಗಳಲ್ಲಿ ತುಂತುರು, ಜಿಟಿ ಜಿಟಿ ಮಳೆ ಆಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಳಗೂರು ನಗರ ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಣ್ಮರೆಯಾಗಿದೆ. ಕೆಲವೆಡೆ ಹಗುರ ಮಳೆಯ ಸುರಿಯುತ್ತಿದ್ದು, ಆಗಾಗ ಬಿಸಿಲಿನ ದರ್ಶನವಾಗುತ್ತಿದೆ. ಮುಂದಿನ ಒಂದು ವಾರ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.

ಬಾರದ ಬಿರುಸಿನ ಮಳೆ

ಮುಂಗಾರು ಬಿತ್ತಿದ ರೈತರಲ್ಲಿ ಈ ಮಳೆ ವಾತಾವರಣ ಸಂಪೂರ್ಣ ಖುಷಿ ತಂದಿಲ್ಲ. ಕಾರಣ ಹಾವೇರಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಕಂಡು ಬಂದರೂ ಸಹಿತ ನಿರೀಕ್ಷಿತ ಭಾರೀ ಮಳೆ ಆಗದೇ, ಕೆವಲ ಸೋನೆ ಮಳೆ ಆಗುತ್ತಿದೆ. ಇದರಿಂದ ಎರಡು ತಿಂಗಳ ಮುಂಗಾರು ಪೈರಿಗೆ ಮಳೆ ಸಾಕಾಗುತ್ತಿಲ್ಲ. ಕೆಲವೆಡೆ ಒಣಗಿದ ಬೆಳೆ ಹಾಗೆಯೇ ಇದೆ.

ಜೂನ್‌ನಲ್ಲಿ ಬಿತ್ತಿದ ಬೆಂಡೆ ಇನ್ನಿತರ ಬೀಜಗಳು ಹೊಲದಲ್ಲಿ ಈಗ ಮೊಳಕೆ ಒಡೆದು ಸಸಿಯಾಗಿವೆ. ವಾರದಿಂದ ಮಳೆ ಸಕ್ರಿಯವಾಗಿದ್ದರೂ ನಿರೀಕ್ಷಿತ ಮಳೆ ಆಗದ ಹಿನ್ನೆಲೆಯಲ್ಲಿ ಭಾರೀ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯಾಗಿದೆ.

ಚಂಡಮಾರುತ ಪ್ರಸರಣ ಪ್ರಭಾವ, ಭಾರೀ ಮಳೆ!

ಬಂಗಾಳಕೊಲ್ಲಿ ಹಾಗೂ ಒಡಿಶಾ ಕರಾವಳಿ ಭಾಗದ ಸಮೀಪದ ಸಮುದ್ರ ಮಟ್ಟದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಪಶ್ಚಿಮ ಬಂಗಾಳದಿಂದ ಸುಮಾರು 130 ಕಿಲೋ ಮೀಟರ್, ದಕ್ಷಿಣ ಸುಮಾರು 140 ಕಿಲೋ ಮೀಟರ್ ದಕ್ಷಿಣ ಪೂರ್ವಕ್ಕೆ ವ್ಯಾಪಿಸಿದೆ. ಒಡಿಶಾದಿಂದ ಸುಮಾರು 170 ಕಿ.ಮೀ. ಪೂರ್ವದಲ್ಲಿ ಕೇಂದ್ರೀಕತವಾಗಿದೆ.

ಈ ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಬಲಗೊಂಡು ಆಳವಾದ ವಾಯುಭಾರ ಕುಸಿತ (ಆಳವಾದ ಖಿನ್ನತೆ) ಆಗುವ ಸಾಧ್ಯತೆ ಇದೆ. ಈ ಕಾರಣದಿಂದ ವಿವಿಧ ಕಡೆಗಳಲ್ಲಿ ಹವಾಮಾನ, ಮಳೆಯಲ್ಲಿ ಒಂದಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+