ಹುತಾತ್ಮ ಯೋಧರ ಕುಟುಂಬಸ್ಥರಿಗೆ ರಾಜ್ಯದಿಂದ ಸರಕಾರಿ ಉದ್ಯೋಗ
ಬೆಂಗಳೂರು, ಆಗಸ್ಟ್ 9 : ಸೇವೆಯಲ್ಲಿರುವಾಗಲೇ ಹುತಾತ್ಮರಾದ ಯೋಧರ ಕುಟುಂಬದವರಿಗೆ ಕರ್ನಾಟಕ ಸರಕಾರವು ಉದ್ಯೋಗ ನೀಡಲು ತೀರ್ಮಾನಿಸಿದೆ. ಯೋಧರ ಕುಟುಂಬದವರಾಗಿದ್ದು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಸಹ ನೌಕರಿಯನ್ನು ಸರಕಾರ ನೀಡಲಿದೆ.
ಈ ತೀರ್ಮಾನವು ಕರ್ನಾಟಕ ಮೂಲದ ಯೋಧರಿಗೆ ಅನ್ವಯ ಆಗಲಿದೆ. ರಾಜ್ಯದ ಯೋಧರು ಹಾಗೂ ಕುಟುಂಬಸ್ಥರ ಅನುಕೂಲಕ್ಕಾಗಿ ಕನಿಕರದ ಆಧಾರದಲ್ಲಿ ನೌಕರಿ ನೀಡಲು ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಸಂಬಂಧಪಟ್ಟ್ ಇಲಾಖೆಗೆ ಆದೇಶ ತಲುಪಿದೆ.

ಅಂದಹಾಗೆ, ಈ ನಿಯಮದಿಂದ ಸೇವೆಯಲ್ಲಿರುವಾಗ ಹುತಾತ್ಮರಾದ ಸೈನಿಕರ ಕುಟುಂಬಸ್ಥರಿಗೆ ಕನಿಕರದ ಆಧಾರದಲ್ಲಿ ಸರಕಾರಿ ನೌಕರಿ ನೀಡಲಾಗುವುದು.
ಸಿಯಾಚಿನ್ ನಲ್ಲಿ ಹುತಾತ್ಮರಾದ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದು ರಾಜ್ಯ ಸರಕಾರ ಭರವಸೆ ನೀಡಿತ್ತು. ಆದರೆ ವರ್ಷದ ನಂತರವೂ ಅದನ್ನು ಈಡೇರಿಸಿಲ್ಲ.
ಈ ನಿಯಮ ಕರ್ನಾಟಕ ಮೂಲದ ಯೋಧರಿಗೆ ಮಾತ್ರ ಅನ್ವಯಿಸುತ್ತದೆ. ವಿಧಾನಸಭೆ ಚುನಾವಣೆ ಕಣ್ಣೆದುರು ಇರುವುದರಿಂದ ಇಂಥ ಯೋಜನೆ ಹಾಗೂ ವಿಚಾರಗಳನ್ನು ರಾಜ್ಯ ಸರಕಾರ ಜಾರಿಗೆ ತರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications