ರಾಜಕೀಯಕ್ಕೆ ಎಂಟ್ರಿಯಾಗ್ತಾರಾ ಹ್ಯಾಟ್ರಿಕ್‌ ಹಿರೋ!: ಮಧು ಗೆದ್ದರೆ ಸೊರಬಕ್ಕೆ ಬಂದು ಕುಣಿದು ಕುಪ್ಪಳಿಸುತ್ತೇನೆ: ಶಿವಣ್ಣ

ಶಿವಮೊಗ್ಗ,ಮೇ1: ರಾಜ್ಯ ರಾಜಕಾರಣದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ರಾಜಕೀಯ ಘಟಾನುಘಟಿ ನಾಯಕರ ಜೊತೆಗೆ ಸ್ಯಾಂಡಲ್ ವುಡ್‌ ನಟ ನಡಿಯರು ಸಹ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಎಂಟ್ರಿಕೊಟ್ಟಿದ್ದು, ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಪರ ನಟ ಶಿವರಾಜ್‌ ಕುಮಾರ್‌ ಪ್ರಚಾರ ನಡೆಸಿದ್ದಾರೆ.

ಪ್ರಚಾರದ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿ, ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಸೇವಾ ಮನೋಭಾವ ನನಗೆ ಇಷ್ಟ. ಅವರನ್ನು ಗೆಲ್ಲಿಸಿ, ಮಧು ಗೆದ್ದರೆ ಸೊರಬಕ್ಕೆ ಬಂದು ನಿಮ್ಮೊಂದಿಗೆ ಕುಣಿದು ಕುಪ್ಪಳಿಸುವೆ ಎಂದು ಹೇಳಿದ್ದಾರೆ.

karnataka Polls: Madhu Bangarappa Wins I Will Come To Soraba And Dance Says Shivarajkumar

ಸೊರಬ ತಾಲೂಕಿಗೆ ಹಲವು ಬಾರಿ ಆಗಮಿಸಿದ್ದು ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ಆದರೆ, ಮಧು ಬಂಗಾರಪ್ಪ ಅವರಲ್ಲಿರುವ ಜನಪರ ಕಾಳಜಿ, ಸಹಕಾರದ ತುಡಿತ ಮನಗಂಡು ಅವರು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂಬ ಉದ್ದೇಶದಿಂದ ಪ್ರಚಾರದಲ್ಲಿ ಪಾಲ್ಗೊಂಡಿದ್ದೇನೆ ಎಂದರು.

ಸೊರಬ ಕ್ಷೇತ್ರದ ಅಭಿವೃದ್ದಿಗಾಗಿ ಮಧು ಅವರು ಸಾಕಷ್ಟು ಶ್ರಮಿಸಿದ್ದಾರೆ. ತಾಲೂಕಿನ ಜನತೆಯ ಕಷ್ಟ ಸುಖಗಳಲ್ಲಿ ಸದಾ ಇರುವುದರಿಂದ ಜನತೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ವಿಶ್ವಾಸ ಇದೆ. ಮಧು ಬಂಗಾರಪ್ಪ ಗೆಲುವು ಸಾಧಿಸಿದ ನಂತರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರೊಂದಿಗೆ ಹಾಡಿ ಕುಣಿದು ಕುಪ್ಪಳಿಸುತ್ತೇನೆ ಎಂದು ಭರವಸೆ ನೀಡಿದರು.

ಇನ್ನೂ ನನ್ನ ಪತ್ನಿ ಗೀತಾ ಕಾಂಗ್ರೆಸ್ ಸೇರಿದ್ದಾರೆ. ಎಲ್ಲಾ ಪಕ್ಷಗಳಲ್ಲಿ ನನ್ನ ಸ್ನೇಹಿತರಿದ್ದಾರೆ ಮತ್ತು ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಅವರ ಪರ ಮಾತ್ರ ಪ್ರಚಾರ ಮಾಡುತ್ತಿದ್ದೇನೆ. ಶೂಟಿಂಗ್ ಶೆಡ್ಯೂಲ್‌ಗಳಲ್ಲಿ ಬ್ಯುಸಿಯಾಗಿರುವ ಕಾರಣ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಮಯ ಸಿಗುತ್ತಿಲ್ಲ ಹೀಗಾಗಿ ಪ್ರಚಾರಕ್ಕೆ ಸೀಮಿತವಾಗಿದ್ದೇನೆ ಎಂದು ರಾಜಕೀಯಕ್ಕೆ ಬರಲ್ಲ ಎಂದು ಶಿವರಾಜ್‌ ಕುಮಾರ್‌ ಸ್ಪಷ್ಟಪಡಿಸಿದರು.

ಕೇವಲ ಸೊರಬ ಕ್ಷೇತ್ರದಲ್ಲಿ ಅಷ್ಟೇ ಪ್ರಚಾರ ನಡೆಸದೇ, ರಾಜ್ಯದ ಇತರೆ ಕ್ಷೇತ್ರಗಳಾದ ಸಾಗರ, ತೀರ್ಥಹಳ್ಳಿ, ಬೀದರ್, ಸಿದ್ದರಾಮಯ್ಯ, ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್, ಜಗದೀಶ್ ಶೆಟ್ಟರ್, ವಿಜಯ್ ಸಿಂಗ್, ಅಶೋಕ್ ಖೇಣಿ ಹುಬ್ಬಳ್ಳಿಯ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದಲ್ಲೂ ಪ್ರಚಾರ ನಡೆಸುತ್ತೇನೆ.

ಜಗದೀಶ್ ಶೆಟ್ಟರ್ ಅವರು ಡಾ.ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಹುಬ್ಬಳ್ಳಿಯಲ್ಲಿ ಶೂಟಿಂಗ್ ಇದ್ದಾಗಲೆಲ್ಲ ಶೆಟ್ಟರ್ ಮನೆಗೆ ತಿಂಡಿ ತಿಂದು ಬರುತ್ತಿದ್ದರು. ಶೆಟ್ಟರ್ ಅವರು ನಮ್ಮ ಕುಟುಂಬಸ್ಥರು ಇದ್ದ ಹಾಗೆ. ಹಾಗಾಗಿ ಅವರ ಕ್ಷೇತ್ರದಲ್ಲೂ ಪ್ರಚಾರ ನಡೆಸುತ್ತೇನೆ. ನನಗೆ ರಾಜಕೀಯ ತಿಳಿದಿಲ್ಲ. ನಾನು ರಾಜಕೀಯಕ್ಕೆ ಸೇರುವುದು ಇಲ್ಲ. ನಾನು ಕೇವಲ ಪ್ರಚಾರವನ್ನಷ್ಟೇ ಮಾಡುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+