ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಕಣ್ಣೀರಿಟ್ಟ ಹೆಚ್ ಡಿ ದೇವೇಗೌಡ: ಈ ಬಗ್ಗೆ ಡಾ.ಜಿ ಪರಮೇಶ್ವರ್ ಹೇಳಿದ್ದೇನು?
ತುಮಕೂರು,ಏಪ್ರಿಲ್26: ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರು 2019 ರ ತುಮಕೂರು ಲೋಕಸಭಾ ಚುನಾವಣಾ ಸೋಲನ್ನು ನೆನಪು ಕಣ್ಣೀರು ಹಾಕಿದ್ದು, ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ನಾಯಕರೇ ಕಾರಣ ಎಂದು ದೂರಿದ್ದಾರೆ.
ಈ ಕುರಿತು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವವಿದೆ, ಅವರನ್ನು ಸೋಲಿಸಿದ್ದು ನಾನಲ್ಲ. ನನ್ನ ಕ್ಷೇತ್ರದಲ್ಲಿ ಅವರಿಗೆ ಹೆಚ್ಚಿನ ಮುನ್ನಡೆ ನೀಡಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.

2019 ರ ಲೋಕಸಭೆ ಚುನಾವಣೆಯ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಸ್ವತಃ ತುಮಕೂರು ಜಿಲ್ಲೆಯನ್ನ ಆರಿಸಿಕೊಂಡ ಸ್ಪರ್ಧೆ ಮಾಡಿದ್ದರು. ನನ್ನ ಕೊರಟಗೆರೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿಗೆ ಅತಿ ಹೆಚ್ಚಿನ ಲೀಡ್ ನೀಡಿದ್ದೇವೆ. ಜೆಡಿಎಸ್ ಪಕ್ಷದ ಶಾಸಕರಿರುವ ಕ್ಷೇತ್ರಗಳಲ್ಲೇ ಕಡಿಮೆ ಮತಗಳು ಬಂದಿವೆ. ಅದಕ್ಕೆಲ್ಲಾ ಯಾರು ಜವಾಬ್ದಾರಿ ಎಂದು ಕೇಳಿದರು.
ಈ ವಿಚಾರವಾಗಿ ನನ್ನ ಕ್ಷೇತ್ರದಲ್ಲಿ ಎಷ್ಟು ಮತಗಳು ಬಂದಿವೆ ಎಂಬ ಬಗ್ಗೆ ಅಂಕಿಅಂಶದ ಮಾಹಿತಿ ಪಡೆದುಕೊಳ್ಳಲಿ. ನನಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೇಲೆ ಅಪಾರ ಗೌರವಿದೆ. ಅವರಿಗೆ ಕಣ್ಣೀರು ಹಾಕಿಸುವ ಕೆಲಸ ಮಾಡಿಲ್ಲ. ಜೆಡಿಎಸ್ ಪಕ್ಷದ ನಾಯಕರ ಆಂತರಿಕ ಕಲಹದಿಂದ ಅವರ ಶಾಸಕರೇ ಇರುವಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್ ಬಂದಿಲ್ಲ. ಅದರ ಬಗ್ಗೆ ಸಿಎಂ ಇಬ್ರಾಹಿಂ ಅವರು ಮಾತನಾಡಬೇಕಿದೆ ಎಂದರು.

ಇನ್ನೂ ನಾನು ಕಾಂಗ್ರೆಸ್ ಪಕ್ಷ ನನಗೇ 8 ವರ್ಷ ಪಕ್ಷದ ಅಧ್ಯಕ್ಷನ್ನಾಗಿ ಮಾಡಿದೆ. ಕೊರಟಗೆರೆ ಕ್ಷೇತ್ರದ ಜನತೆಯ ಆರ್ಶೀವಾದದಿಂದ ನಾನು 2008ರಲ್ಲಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. 2013ರಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂತು. ನನಗೇ ಕೊರಟಗೆರೆ ಕ್ಷೇತ್ರದಲ್ಲಿ ಸೋಲಾದರೂ ನಾನು ಕ್ಷೇತ್ರದ ಅಭಿವೃದ್ದಿ ಮಾಡಿದ್ದೇನೆ. 2018ರಲ್ಲಿ ನಾನು ಆಯ್ಕೆಯಾದ ನಂತರ ಕೊರಟಗೆರೆ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿದ್ದೇನೆ. ಮತ್ತೇ 2023ಕ್ಕೆ ಶಾಸಕನಾಗಿ ಆಯ್ಕೆಯಾದರೇ ತರುತ್ತೇನೆ ಎಂದು ಭರವಸೆ ಇದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹೇಳಿದ್ದೇನು?
ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತುಮಕೂರಿನಿಂದ ನಿಲ್ಲಲು ಬಯಸಿದವನಲ್ಲ, ರಾಜಕೀಯ ನಿವೃತ್ತಿ ಘೋಷಿಸಲು ಬಯಸಿದ್ದೆ. ಆದರೆ ಜಿಲ್ಲೆಯ ಕೆಲವು ಮುಖಂಡರು ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿಪಶು ಮಾಡಿದರು ಎಂದು ಆರೋಪಿಸಿದ್ದಾರೆ.
ಜಿಲ್ಲೆಯ ಕೆಲ ಮುಖಂಡರು, ಮಾಜಿ ಶಾಸಕರು ನನ್ನನ್ನು ಬಲಿಪಶು ಮಾಡಿದ್ದು ಈ ಬಾರಿ ತಕ್ಕ ಪಾಠ ಕಲಿಸುವಂತೆ ಮನವಿ ಮಾಡಿದರು. ನಾನು ಬೇಡವೆಂದರೂ ಕರೆತಂದು ಲೋಕಸಭೆಯ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಕಣ್ಣೀರು ಹಾಕಿಸಿದವರಿಗೂ ಕಣ್ಣೀರು ಹಾಕಿಸಬೇಕು. ಆಗಲೇ ನನ್ನ ಆತ್ಮಕ್ಕೆ ಶಾಂತಿಯೆಂದು ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಹಾಕಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ 25 ಸ್ಥಾನ ಪಡೆಯುತ್ತದೆ ಎಂದು ಕಾಂಗ್ರೆಸ್ ನಾಯಕರ ಹೇಳಿದ್ದಾರೆ, ಬಹುಶಃ ಮಧುಗಿರಿ ಒಂದೇ ಸಾಕು ಕಾಂಗ್ರೆಸ್ ನಾಯಕರಿಗೆ ಉತ್ತರ ಕೊಡೋಕೆ. ಕಾಂಗ್ರೆಸ್‌ನವರಿಗೆ ಮಧುಗಿರಿಯಿಂದಲೇ ತಕ್ಕ ಉತ್ತರವನ್ನು ಕೊಡ್ತೀನಿ ಎಂದರು.












Click it and Unblock the Notifications