ಮೋದಿ ಹತ್ಯೆ ಸಂಚಲ್ಲಿ ಕನ್ನಡಿಗರು: ಜಗ್ಗೇಶ್‌ ಬಾಂಬ್‌

Recommended Video

      ನರೇಂದ್ರ ಮೋದಿ ಹತ್ಯೆ ಸಂಚಿನ ಬಗ್ಗೆ ಸ್ಪೋಟಕ ಮಾಹಿತಿ ಕೊಟ್ಟ ಜಗ್ಗೇಶ್ | Oneindia kannada

      ಬೆಂಗಳೂರು, ಜೂನ್ 09: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ನಿನ್ನೆಯಷ್ಟೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆದರೆ ಈ ಸಂಚಿನಲ್ಲಿ ಕರ್ನಾಟಕ ರಾಜ್ಯದವರೂ ಇದ್ದಾರೆ ಎಂಬ ಅನುಮಾನವನ್ನು ಬಿಜೆಪಿ ಮುಖಂಡ ಮತ್ತು ಚಿತ್ರನಟ ಜಗ್ಗೇಶ್ ವ್ಯಕ್ತಪಡಿಸಿದ್ದಾರೆ.

      ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ರೀತಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೆ ಮಾವೋವಾದಿ ಮುಖಂಡ ಕಿಶನ್‌ನನ್ನು ಬಂಧಿಸಲಾಗಿದೆ.

      ಪ್ರಧಾನಿ ಮೋದಿ ಅವರ ಹತ್ಯೆ ಸಂಚಿನ ಹಿಂದೆ ನಮ್ಮ ರಾಜ್ಯದವರೂ ಇರುವ ಶಂಕೆಯನ್ನು ಬಿಜೆಪಿ ಮುಖಂಡ ಜಗ್ಗೇಶ್ ವ್ಯಕ್ತಪಡಿಸಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

      Karnataka people may involve in assassination deceit of Narendra Modi: Jaggesh

      ಮೋದಿ ಅವರ ಹತ್ಯೆಯ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಜಗ್ಗೇಶ್ ಅವರು, 'ಕೆಲವೆದಿನ ಬೆತ್ತಲಾಗುತ್ತಾರೆ ಕಿರಾತಕರು, ಅದರಲ್ಲಿ ನಮ್ಮ ರಾಜ್ಯದವರು ಕೆಲವರು ಇರಬಹುದು ಅನುಮಾನವಿಲ್ಲಾ' ಎಂದು ಬರೆದುಕೊಂಡಿದ್ದಾರೆ.

      ನರೇಂದ್ರ ಮೋದಿ ಹತ್ಯೆ ಸಂಚಿನ ತನಿಖೆಯನ್ನು ಪುಣೆ ಪೋಲೀಸರು ನಡೆಸುತ್ತಿದ್ದು, ಮಾವೋವಾದಿ ಮುಖಂಡನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಂತೆ ಜಗ್ಗೇಶ್ ಅವರ ಅನುಮಾನ ನಿಜವೋ ಸುಳ್ಳೋ ತಿಳಿಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+