• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಶನಿವಾರದ ತುಣುಕು ಸುದ್ದಿ

|

ಬೆಂಗಳೂರು, ನ. 22 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 5 ಗಂಟೆ : ಅತ್ತಿಬೆಲೆಯ ನಿವಾಸಿಯಾಗಿ ಅಭಿಷೇಕ್ (28) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಶುಕ್ರವಾರ ರಾತ್ರಿ ಜಗಳ ನಡೆದಿತ್ತು, ಕುಡಿದ ಮತ್ತಿನಲ್ಲಿ ಅಭಿ‍ಷೇಕ್‌ನನ್ನು ಕೊಲೆ ಮಾಡಿದ್ದೇನೆ ಎಂದು ಸ್ನೇಹಿತ ಒಪ್ಪಿಕೊಂಡಿದ್ದಾನೆ.

ಸಮಯ 4 ಗಂಟೆ : ನಟ ದುನಿಯಾ ವಿಜಯ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ ಹಿರಿಯ ಪೊಲೀಸ್ ಅಧಿಕಾರಿ ದೇವರಾಜ್ ವಿರುದ್ಧ ದೂರು ಸಲ್ಲಿಸಿದ್ದಾರೆ. ತಮ್ಮ ಸಂಸಾರ ಒಡೆಯಲು ಡಿಸಿಪಿ ದೇವರಾಜ್ ಕಾರಣ ಎಂದು ವಿಜಿ ಎರಡು ದಿನಗಳ ಹಿಂದೆ ಆರೋಪಿಸಿದ್ದರು.

ಸಮಯ 3 ಗಂಟೆ : ಮೇಕೆದಾಟಿನಲ್ಲಿ ಡ್ಯಾಂ ಕಟ್ಟುವ ಕರ್ನಾಟಕದ ಯೋಜನೆಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದ್ದು ಇಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಮೇಕೆದಾಟಿನಲ್ಲಿ ಡ್ಯಾಂ ಕಟ್ಟುವುದರಿಂದ ನಮಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸಿರುವ ರೈತರು ಇಂದು ಮೂರು ಜಿಲ್ಲೆಗಳ ಬಂದ್‍ಗೆ ಕರೆ ನೀಡಿದ್ದರು.

ಸಮಯ 2 ಗಂಟೆ : ಧಾರವಾಡದ ತೇಜಸ್ವಿನಗರದ ಮಾಕಡವಾಲಾ ಪ್ಲಾಟಿನ ಕುಲಕರ್ಣಿ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದು, ಅವರು ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು ಎಂದು ಶಂಕಿಸಲಾಗಿದೆ.

ಸಮಯ 1 ಗಂಟೆ : ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯನ್ನು ನೀಗಿಸಲು ಮುಂದಾಗಿರುವ ರಾಜ್ಯ ಸರ್ಕಾರ 1298 ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಸಮಯ 12 ಗಂಟೆ : ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಪೂರ್ತಿ ನಾಶಗೊಳಿಸುವ ತನಕ ಬಿಜೆಪಿ ವಿರಮಿಸುವುದಿಲ್ಲ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದ್ದಾರೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಅಕ್ರಮ, ಅವ್ಯವಹಾರದಲ್ಲಿ ತೊಡಗಿರುವ ಮಂತ್ರಿಗಳನ್ನು ಸಂಪುಟದಲ್ಲಿ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಅವರು ದೂರಿದರು.

ಸಮಯ 11 ಗಂಟೆ : ಎನ್‌ಆರ್‌ಐ ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಸೈಬರ್ ಸೆಂಟರ್ ಉದ್ಯೋಗಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆಯ ನಿವಾಸಿ ಅಬ್ಬುಬಾಕರ್ ಸಿದ್ಧಿಕ್ಕಿ ಬಂಧಿತ ಯುವಕ. ಶುಕ್ರವಾರ ಸಂಜೆ ಸೈಬರ್‌ ಸೆಂಟರ್‌ಗೆ ಬಂದ ಯುವತಿ ಮೇಲೆ ಅತ್ಯಾಚಾರ ನಡೆಸಲು ಈತ ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ಸಮಯ 10 ಗಂಟೆ : ಮಗು ಮೂಲನಕ್ಷತ್ರದಲ್ಲಿ ಹುಟ್ಟಿದ್ದರಿಂದ ಕುಟುಂಬದವರು ಕಿರುಕುಳ ನೀಡಿದ ಕಾರಣ ತಾಯಿ ಮತ್ತು ಮಗು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಚಿಕ್ಕಬೀಸನಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರಾಹುಲ್ (2) ಮತ್ತು ಕಲಾವತಿ (23) ಎಂದು ಗುರುತಿಸಲಾಗಿದೆ.

ಸಮಯ 9 ಗಂಟೆ : ಪ್ರೇಮಕುಮಾರಿ ಮತ್ತು ಮಾಜಿ ಸಚಿವ ರಾಮದಾಸ್ ಪ್ರಕರಣದ ತನಿಖೆ ಮುಗಿಸಿರುವ ಸಿಐಡಿ ಪೊಲೀಸರು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ರಾಮದಾಸ್ ಮತ್ತು ಪ್ರೇಮಕುಮಾರಿ ನಡುವಿನ ಫೋನ್ ಸಂಭಾಷಣೆಯ ವರದಿ ಸಿಐಡಿಗೆ ಸಲ್ಲಿಕೆಯಾಗಿದ್ದು, ಫೋನ್‌ನಲ್ಲಿರುವುದು ರಾಮದಾಸ್ ಧ್ವನಿ ಎಂಬುದು ಸಾಬೀತಾಗಿದೆ. [ರಾಮದಾಸ್ - ಪ್ರೇಮಕುಮಾರಿ ಪ್ರಕರಣಕ್ಕೆ ಹೊಸಜೀವ]

ಸಮಯ 8 ಗಂಟೆ : ಬೆಂಗಳೂರಿನಲ್ಲಿ ರೌಡಿ ಶೀಟರ್ ಅಭಿಷೇಕ್ (28)ನನ್ನು ಕೊಲೆ ಮಾಡಲಾಗಿದೆ. ಶುಕ್ರವಾರ ರಾತ್ರಿ ಕೊಲೆ ಮಾಡಿರುವ ಶಂಕೆಯಿದ್ದು, ಇಂದು ಬೆಳಗ್ಗೆ ಅತ್ತಿಬೆಲೆ ಸಮೀಪ ವಡ್ಡರಪಾಳ್ಯದಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka top news in brief for the day : The Crime Investigation Department (CID) submitted the report to govt over Former minister S.A.Ramadas and Premakumari case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more