ಶೇ 25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟ ನಮ್ಮ ಶಾಸಕರು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಆಗಸ್ಟ್ 16 : ಕರ್ನಾಟಕದ ಶಾಸಕರು ಶೇ 25ರಷ್ಟು ವೇತನ ಹೆಚ್ಚಿಸಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ. 2015ರ ಮಾರ್ಚ್‌ನಲ್ಲಿ ಶಾಸಕರ ಸಂಬಳ ಏರಿಕೆಯಾಗಿತ್ತು. ಒಂದೇ ವರ್ಷದಲ್ಲಿ ಮತ್ತೆ ವೇತನ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿದೆ.

2015ರಲ್ಲಿ ವಿಧಾನಸಭೆಯಲ್ಲಿ 'ಕರ್ನಾಟಕ ಶಾಸಕರ ವೇತನ, ನಿವೃತ್ತಿ ವೇತನ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ 2015ಕ್ಕೆ' ಅನುಮೋದನೆ ಸಿಕ್ಕಿತ್ತು. ನಂತರ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಭಾಪತಿ, ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಳವಾಗಿತ್ತು.[ಈ ಸುದ್ದಿ ಓದಿ ತಲೆ ತಿರುಗಿ ಬೀಳಬೇಡಿ!]

ಶಾಸಕರ ಸಂಬಳ 20 ರಿಂದ 25 ಸಾವಿರಕ್ಕೆ ಏರಿಕೆಯಾಗಿತ್ತು. ಪ್ರಯಾಣ ಭತ್ಯೆ, ದೂರವಾಣಿ ವೆಚ್ಚ, ಕ್ಷೇತ್ರ ಭತ್ಯೆ ಸೇರಿದಂತೆ ವಿವಿಧ ಭತ್ಯೆಗಳು ಸೇರಿ ವೇತನ 1.25ರಷ್ಟಾಗಿತ್ತು. ಈಗ ಶಾಸಕರು ಪುನಃ ಶೇ 15ರಷ್ಟು ವೇತನ ಪರಿಷ್ಕರಣೆಗೆ ಮುಂದಾಗಿದ್ದಾರೆ.[PMO ಸಿಬ್ಬಂದಿ ಸಂಬಳ ವಿವರ ಬಹಿರಂಗ, ಕುಲ್ಬೆಗೆ ಅಧಿಕ ವೇತನ]

ಪ್ರಸ್ತುತ ಬೇರೆ ರಾಜ್ಯಗಳ ಶಾಸಕರ ವೇತನಕ್ಕೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡಲು ಬೇಡಿಕೆ ಇಡಲಾಗಿದೆ. ಇತರ ಐದು ರಾಜ್ಯಗಳಲ್ಲಿ ಶಾಸಕರಿಗೆ ನೀಡುತ್ತಿರುವ ವೇತನದ ಬಗ್ಗೆ ವಿವರ ನೀಡಲು ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ. ಇದರ ವರದಿ ಬಂದ ಬಳಿಕ ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.....

ಈಗ ನಮ್ಮ ಶಾಸಕರ ಸಂಬಳ ಎಷ್ಟು?

ಈಗ ನಮ್ಮ ಶಾಸಕರ ಸಂಬಳ ಎಷ್ಟು?

ಶಾಸಕರ ಸಂಬಳ 25 ಸಾವಿರ. ಕ್ಷೇತ್ರ ಪ್ರಯಾಣ ಭತ್ಯೆ 40 ಸಾವಿರ, ದೂರವಾಣಿ ವೆಚ್ಚ 20 ಸಾವಿರ, ಕ್ಷೇತ್ರ ಭತ್ಯೆ 40 ಸಾವಿರ, ಪ್ರಯಾಣ ಭತ್ಯೆ ಪ್ರತಿ ಕಿ.ಮೀಗೆ 25 ರೂ., ಹೊರ ರಾಜ್ಯ ಭತ್ಯೆ 2 ಸಾವಿರ ಒಟ್ಟು ಮಾಸಿಕ 1.25 ಲಕ್ಷ ರೂ.

ಬೇರೆ ರಾಜ್ಯಗಳಲ್ಲಿ ವೇತನ ಎಷ್ಟು?

ಬೇರೆ ರಾಜ್ಯಗಳಲ್ಲಿ ವೇತನ ಎಷ್ಟು?

ತೆಲಂಗಾಣದಲ್ಲಿ ಮಾಸಿಕ 2.5 ಲಕ್ಷ, ದೆಹಲಿಯಲ್ಲಿ 2.10 ಲಕ್ಷ ವೇತನವನ್ನು ಶಾಸಕರು ಪಡೆಯುತ್ತಿದ್ದಾರೆ. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 2.10 ಲಕ್ಷಕ್ಕೆ ಏರಿಕೆ ಮಾಡಲು ಪ್ರಕ್ರಿಯೆ ನಡೆಯುತ್ತಿದೆ. ಆದ್ದರಿಂದ ನಮ್ಮ ರಾಜ್ಯದಲ್ಲಿಯೂ ಶಾಸಕರ ಶೇ 25ರಷ್ಟು ವೇತನ ಹೆಚ್ಚಿಸಿ ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

ಮಾಹಿತಿ ಮಾತ್ರ ಕೇಳಿದ್ದೇವೆ

ಮಾಹಿತಿ ಮಾತ್ರ ಕೇಳಿದ್ದೇವೆ

'ಬೇರೆ ರಾಜ್ಯಗಳ ಶಾಸಕರ ವೇತನದ ಬಗ್ಗೆ ಮಾಹಿತಿ ನೀಡುವಂತೆ ಸ್ಪೀಕರ್ ಅವರಿಗೆ ಕೇಳಿದ್ದೇವೆ. ಅವರ ವೇತನಕ್ಕೂ ನಮ್ಮ ವೇತನಕ್ಕೂ ವ್ಯತ್ಯಾಸ ತಿಳಿಯಲು ಬಯಸಿದ್ದೇವೆ. ವೇತನ ಹೆಚ್ಚಳ ಮಾಡುವಂತೆ ಬೇಡಿಕೆ ಮುಂದಿಟ್ಟಿಲ್ಲ' ಎಂದು ಶಾಸಕರೊಬ್ಬರು ತಿಳಿಸಿದ್ದಾರೆ.

ನಮ್ಮ ಶಾಸಕರ ವೇತನ ಮೊದಲು ಎಷ್ಟಿತ್ತು?

ನಮ್ಮ ಶಾಸಕರ ವೇತನ ಮೊದಲು ಎಷ್ಟಿತ್ತು?

2005ರಲ್ಲಿ ಶಾಸಕರ ಮೂಲ ವೇತನ 8 ಸಾವಿರ ರೂ. ಇತ್ತು. 2009 ರಲ್ಲಿ ಇದನ್ನು 10 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ನಂತರ 2011 ರಲ್ಲಿ 20ಸಾವಿರಕ್ಕೆ ಏರಿಸಲಾಗಿತ್ತು. ಮೂರು ವರ್ಷಗಳ ನಂತರ 25 ಸಾವಿರಕ್ಕೆ ಹೆಚ್ಚಳವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Over a year after Karnataka legislators were given a 40 percent hike, Now MLA's are demanding for a raise of 25 percent on their current salary.
Please Wait while comments are loading...