ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ ರಿಟರ್ನ್ಸ್, ಕಾಂಗ್ರೆಸ್ ಡೈರೆಕ್ಷನ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್ 06: ಡ್ರಾಮಾ ಇಲ್ಲದೆ ಕರ್ನಾಟಕದಲ್ಲಿ ಯಾವುದೇ ಚುನಾವಣೆ ಆರಂಭ, ಅಂತ್ಯ ಕಾಣುವುದಿಲ್ಲ. ಈಗ ರಾಜ್ಯಸಭೆ ಚುನಾವಣೆಗೂ ಮುನ್ನ ರೆಸಾರ್ಟ್ ರಾಜಕೀಯ ಮರುಕಳಿಸಿದೆ. ಪಕ್ಷೇತರ ಅಭ್ಯರ್ಥಿಗಳ ಹೈಜಾಕ್, ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರ, ಡೀಲ್ ಗಳು ಜೋರಾಗಿ ನಡೆಯುತ್ತಿದೆ.

ಜೂನ್ 9 ರ ತನಕ ಮುಂಬೈನ ಜೆಡಬ್ಲ್ಯೂ ಮಾರಿಯಾಟ್ ಹೋಟೆಲ್ ನಲ್ಲಿ 10 ಜನ ಪಕ್ಷೇತರ ಶಾಸಕರು ನೆಲೆಸುವಂತೆ ಅಘೋಷಿತ ಆಜ್ಞೆ ಹೊರಡಿಸಲಾಗಿದೆ. ಜೂನ್ 10ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. [ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?]

ಪಕ್ಷೇತರ ಶಾಸಕರನ್ನು ಕಾಯುವ ಹೊಣೆ ಯಶವಂತಪುರದ ಶಾಸಕ ಎಸ್ ಸೋಮಶೇಖರ್ ಗೆ ನೀಡಲಾಗಿದೆ. [ಈ ಬಗ್ಗೆ ವಿವರ ಇಲ್ಲಿದೆ ಓದಿ]. ಕಾಂಗ್ರೆಸ್ಸಿಗೆ 12 ಮತಗಳ ಅವಶ್ಯವಿದೆ. ಮುಖ್ಯವಾಗಿ ಮೂರನೇ ಅಭ್ಯರ್ಥಿ ಕೆಸಿ ರಾಮಮೂರ್ತಿ ಗೆಲುವಿಗಾಗಿ ಕಾಂಗ್ರೆಸ್ ಸರ್ಕಸ್ ಆರಂಭಿಸಿದೆ.

Karnataka MLAs back in the resort ahead of the RS polls

ಆದರೆ, ಲೆಕ್ಕಾಚಾರ ಏನೇ ಇದ್ದರೂ ಮುಂಬೈಗೆ ಈಗ ತೆರಳಿರುವ ಶಾಸಕರ ಒಟ್ಟು ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ ಬಹುತೇಕ ಎಲ್ಲಾ ಪಕ್ಷೇತರರನ್ನು ಕಾಂಗ್ರೆಸ್ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದೆ. [ವೋಟಿಗಾಗಿ ನೋಟು: ಯಾರು, ಏನು ಹೇಳಿದರು?]

ರೆಸಾರ್ಟ್ ರಾಜಕೀಯ ಯಾರಿಗೆ ಲಾಭ?: ಕಳೆದ 8 ವರ್ಷಗಳಲ್ಲಿ ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ ಅನೇಕ ಬಾರಿ ನಡೆದಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಹೈದರಾಬಾದಿಗೆ ಹಾರಿದ್ದು, ಜೆಡಿಎಸ್ ನ ಜಮೀರ್ ಅಹ್ಮದ್ ಖಾನ್ ಬಸ್ ನಲ್ಲಿ ಶಾಸಕರು ಬೆಂಗಳೂರಿನ ಹೊರವಲಯದ ರೆಸಾರ್ಟ್ ಸೇರಿದ್ದು ಎಲ್ಲವೂ ನೆನಪಿರಬಹುದು. ಆಗಾಗ ಶಾಸಕರಿಗೆ ಗೋವಾ ಟ್ರಿಪ್ ಭಾಗ್ಯ ಕೂಡಾ ಸಿಗುತ್ತಿರುತ್ತದೆ. [ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ]

ಇತ್ತ ಬಿಜೆಪಿ ತನ್ನ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಿಸಲು ಒಂದು ಅಧಿಕ ಮತದ ಬೇಕಿದೆ. ಜೆಡಿಎಸ್ ಗೆ 5 ಮತ ಬೇಕಿದೆ. ಈಗ ಈ ಪೈಪೋಟಿಯಲ್ಲಿ ಜೆಡಿಎಸ್ ಗೆ 5, ಕಾಂಗ್ರೆಸ್ಸಿಗೆ 12ಮತಗಳು ಸಿಗದಂತೆ ಮಾಡಲು ಬಿಜೆಪಿ ಕೂಡಾ ತಂತ್ರ ಹೆಣೆಯುತ್ತಿದೆ. ಕಾಂಗ್ರೆಸ್ ತನ್ನ ಇಬ್ಬರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚಿಂತಿಸಬೇಕಾಗಿಲ್ಲ, ಆದರೆ, ಕೆಸಿ ರಾಮಮೂರ್ತಿ ಆಯ್ಕೆ ಸಾಧ್ಯವಾಗಿಸಲು ಇಷ್ಟೆಲ್ಲ ಡ್ರಾಮಾ ಬಿಟ್ಟರೆ ಬೇರೆ ವಿಧಿಯಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
No election in Karnataka is conducted without drama. Now ahead of the Rajya Sabha elections, the politics of resorts has returned. The all important 10 independent candidates have been whisked away to the J W Marriott Hotel in Mumbai and asked to stay there until the 9th of the month. The RS polls in Karnataka will be held on June 10.
Please Wait while comments are loading...