Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಡಿಸೆಂಬರ್ 4ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಪ್ರಮಾಣ ಹೆಚ್ಚಾಗುತ್ತಲಿದೆ. ಈ ನಡುವೆಯೇ ಚಂಡಮಾರುತ ಹಿನ್ನೆಲೆ ಹಲವೆಡೆ ಧಾರಾಕಾರ ಮಳೆ ಮುಂದುವರೆದಿದೆ. ಇನ್ನೂ ಈಗಾಗಲೇ ಮುಂಗಾರು ಮಳೆ ವೇಳೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ಡಿಸೆಂಬರ್ 4) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜಸಾಗರ (ಕೆಆರ್‌ಎಸ್) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿದಿವೆ. ಅಲ್ಲದೆ, ಪ್ರಮುಖ ಜಲಾಶಯಗಳು ಭರ್ತಿ ಆಗಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಕೆಲ ಜಲಾಶಯಗಳು ಇದೇ ವರ್ಷ ಎರಡು ಬಾರಿ ಭರ್ತಿಯಾಗಿವೆ.

ಸದ್ಯ ಇದೀಗ ರಾಜ್ಯದಲ್ಲಿ ಮಳೆರಾಯನ ಆರ್ಭಟ ತಗ್ಗಿದ್ದು, ಚಳಿ ಆವರಿಸಿದೆ. ಈ ನಡುವೆಯ ಕೆಲವು ಭಾಗಗಳ ಅಲ್ಲಲ್ಲಿ ಮಾತ್ರ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಚಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾದ್ರೆ ಪ್ರಸ್ತುತ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 122.74 ಅಡಿ
* ಒಳಹರಿವು - 3,282 ಕ್ಯೂಸೆಕ್
* ಹೊರಹರಿವು - 3,390 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 65 ಅಡಿ
* ಇಂದಿನ ನೀರಿನ ಮಟ್ಟ - 57.61 ಅಡಿ
* ಒಳಹರಿವು - 1,171 ಕ್ಯೂಸೆಕ್
* ಹೊರಹರಿವು - 1,800 ಕ್ಯೂಸೆಕ್
3. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1809.80 ಅಡಿ
* ಒಳಹರಿವು - 3,037 ಕ್ಯೂಸೆಕ್
* ಹೊರಹರಿವು -3,923.96 ಕ್ಯೂಸೆಕ್
4. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 181.4 ಅಡಿ
* ಒಳಹರಿವು - 220 ಕ್ಯೂಸೆಕ್
* ಹೊರಹರಿವು - 510 ಕ್ಯೂಸೆಕ್
5. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 129 ಅಡಿ
* ಇಂದಿನ ನೀರಿನ ಮಟ್ಟ - 109.48 ಅಡಿ
* ಒಳಹರಿವು - 282 ಕ್ಯೂಸೆಕ್
* ಹೊರಹರಿವು - 1,200 ಕ್ಯೂಸೆಕ್
6. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 117 ಅಡಿ
* ಇಂದಿನ ನೀರಿನ ಮಟ್ಟ - 108.33 ಅಡಿ
* ಒಳಹರಿವು - 1,307 ಕ್ಯೂಸೆಕ್
* ಹೊರಹರಿವು - 4,200 ಕ್ಯೂಸೆಕ್












Click it and Unblock the Notifications