Get Updates
Get notified of breaking news, exclusive insights, and must-see stories!

Karnataka Lok Sabha Election 2024: ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ: ಕೋಲಾರ ಕಗ್ಗಂಟು- 28 ಕ್ಷೇತ್ರಗಳಲ್ಲಿ ಯಾರೊಂದಿಗೆ ಯಾರು

ಬೆಂಗಳೂರು ಮಾರ್ಚ್‌ 31: ಕರ್ನಾಟಕ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಇಂದು 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ರಾಜ್ಯದ 28 ಕ್ಷೇತ್ರಗಳ ಪೈಕಿ ಒಟ್ಟು 27 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾಗಿದೆ. ಆದರೆ ಕೋಲಾರದಲ್ಲಿ ಮಾತ್ರ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಉಳಿದಿದೆ.

ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳೂ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಂಡಾಯ, ಅಸಮಾಧಾನಗಳ ನಡುವೆ ಬಿಜೆಪಿ ಸಾಕಷ್ಟು ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಬಾರಿ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಲು ರಾಜ್ದಾದ್ಯಂತ ಸಂಚರಿಸಿ ಮತಭೇಟಿ ಆರಂಭವಿಸುವ ಒಪ್ಪಂದ ಮಾಡಿಕೊಂಡಿವೆ.

Karnataka Lok Sabha Election 2024 Who is competing with whom

ಇತ್ತ ಕಾಂಗ್ರೆಸ್ ಪಕ್ಷವೂ ಟಿಕೆಟ್ ಕೈತಪ್ಪಿದ ಆಕಾಂಕ್ಷಿಗಳನ್ನು ಹಾಗೂ ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನಿಸು ಶಮನ ಮಾಡುತ್ತಾ ಕೋಲಾರ ಒಂದನ್ನು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಪ್ರಸ್ತುತ ಆಯ್ಕೆಯಾದ ಅಭ್ಯರ್ಥಿಗಳು ನಮಪತ್ರ ಸಲ್ಲಿಸುವ ಮೂಲಕ ತಮ್ಮ ಕ್ಷೇತ್ರದಲ್ಲಿ ಪತ ಸಮರ ಆರಂಭಸಲು ಸಜ್ಜುಗೊಳ್ಳುತ್ತಿದ್ದಾರೆ.

ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷದಲ್ಲು ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಜೊತೆಗೆ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದ್ದು ಕುಟುಂಬ ರಾಜಕರಣವೂ ಈ ಬಾರಿ ಮುಂದುವರೆದಿದೆ. ಟಿಕೆಟ್ ಕೈತಪ್ಪಿದ ಅಸಮಾಧಾನಿತರು ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಪ್ರಚಾರದಲ್ಲಿ ಭಾಗವಹಿಸುವುದು ಕೆಲವೆಡೆ ಅನುಮಾನವಿದ್ದರೆ, ಇನ್ನೂ ಕೆಲವೆಡೆ ಹೈಕಮಾಂಡ್‌ ಮಾತಿಗೆ ಕೆಲವರು ಗ್ರೀನ್ ಸಿಗ್ನಲ್ ತೋರಿ ಬೆಂಬಲ ಸೀಡುವುದಾಗಿ ಹೇಳಿಕೊಂಡಿದ್ದಾರೆ.

Karnataka Lok Sabha Election 2024 Who is competing with whom

ಹಾಗಾದರೆ ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದ ಯಾವ ಅಭ್ಯರ್ಥಿಗಳು ಯಾರೊಂದಿಗೆ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸಂಪೂರ್ಣ ವರದಿ ಇಲ್ಲಿದೆ.

ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ + ಜೆಡಿಎಸ್ ಅಭ್ಯರ್ಥಿ
1
ಚಿಕ್ಕೋಡಿ ಪ್ರಿಯಾಂಕಾ ಜಾರಕಿಹೊಳಿ
ಆಣ್ಣಾಸಾಹೇಬ್ ಜೊಲ್ಲೆ
2
ಬೆಳಗಾವಿ ಮೃಣಾಲ್ ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್
3
ಬಾಗಲಕೋಟೆ ಸಂಯುಕ್ತಾ ಪಾಟೀಲ್ ಪಿಸಿ ಗದ್ದಿಗೌಡರ್
4
ವಿಜಯಪುರ ರಮೇಶ್ ಜಿಗಜಿಣಗಿ ರಾಜು ಆಲಗೂರು
5
ಕಲಬುರಗಿ ರಾಧಾಕೃಷ್ಣ ದೊಡ್ಡಮನಿ ಉಮೇಶ್ ಜಾಧವ್
6
ಕೊಪ್ಪಳ ರಾಜಶೇಖರ್ ಹಿಟ್ನಾಳ್
ಡಾ.ಬಸವರಾಜ್ ಕವಟೂರು
7
ಹಾವೇರಿ-ಗದಗ ಆನಂದಸ್ವಾಮಿ ಗಡ್ಡದೇವರಮಠ
ಬಸವರಾಜ್ ಬೊಮ್ಮಾಯಿ
8
ಧಾರವಾಡ ವಿನೋದ್ ಆಸೂಟಿ ಪ್ರಹ್ಲಾದ್ ಜೋಶಿ
9
ದಾವಣಗೆರೆ ಡಾ.ಪ್ರಭಾ ಮಲ್ಲಿಕಾರ್ಜನ್
ಗಾಯಿತ್ರಿ ಸಿದ್ದೇಶ್ವರ
10
ಶಿವಮೊಗ್ಗ ಗೀತಾ ಶಿವರಾಜ್​ಕುಮಾರ್ ಬಿವೈ ರಾಘವೇಂದ್ರ
11
ಉಡುಪಿ-ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ
ಕೋಟ ಶ್ರೀನಿವಾಸ್ ಪೂಜಾರಿ
12
ದಕ್ಷಿಣ ಕನ್ನಡ ಪದ್ಮರಾಜ್
ಕ್ಯಾಪ್ಟನ್ ಬ್ರಿಜೇಶ್ ಚೌಟ
13
ತುಮಕೂರು ಮುದ್ದಹನುಮೇಗೌಡ ವಿ.ಸೋಮಣ್ಣ
14
ಮೈಸೂರು-ಕೊಡಗು ಎಂ ಲಕ್ಷ್ಮಣ್ ಯದುವೀರ್ ಒಡೆಯರ್
15
ಬೆಂಗಳೂರು ಗ್ರಾಮಾಂರ ಡಿಕೆ ಸುರೇಶ್
ಡಾ.ಸಿಎನ್ ಮಂಜುನಾಥ್
16
ಬೆಂಗಳೂರು ಉತ್ತರ ಪ್ರೊ.ರಾಜೀವ್ ಗೌಡ ಶೋಭಾ ಕರಂದ್ಲಾಜೆ
17
ಬೆಂಗಳೂರು ಕೇಂದ್ರ ಮನಸೂರ್ ಅಲಿಖಾನ್ ಪಿಸಿ ಮೋಹನ್
18
ಬೆಂಗಳೂರು ದಕ್ಷಿಣ ಸೌಮ್ಯಾ ರೆಡ್ಡಿ ತೇಜಸ್ವಿ ಸೂರ್ಯ
19
ಬೀದರ್ ಸಾಗರ್ ಖಂಡ್ರೆ ಭಗವಂತ್ ಖೂಬಾ
20
20. ಬಳ್ಳಾರಿ ಇ.ತುಕಾರಾಂ ಬಿ ಶ್ರೀರಾಮುಲು
21
ರಾಯಚೂರು ಕುಮಾರ್ ನಾಯಕ್ ರಾಜಾ ಅಮರೇಶ್ವರ ನಾಯಕ್
22
ಚಿತ್ರದುರ್ಗ ಚಂದ್ರಪ್ಪ ಗೋವಿಂದ ಕಾರಜೋಳ
23
ಉತ್ತರ ಕನ್ನಡ ಅಂಜಲಿ ನಿಂಬಾಳ್ಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
24
ಚಾಮರಾಜನಗರ ಸುನೀಲ್ ಬೋಸ್ ಎಸ್​ ಬಾಲರಾಜ್
25
ಹಾಸನ ಶ್ರೇಯಸ್ ಪಟೇಲ್
ಪ್ರಜ್ವಲ್ ರೇವಣ್ಣ
26
ಮಂಡ್ಯ ಸ್ಟಾರ್ ಚಂದ್ರು
ಹೆಚ್​​ಡಿ ಕುಮಾರಸ್ವಾಮಿ
27
ಕೋಲಾರ - ಮಲ್ಲೇಶ್‌ ಬಾಬು
28
ಚಿಕ್ಕಬಳ್ಳಾಪುರ ರಕ್ಷಾ ರಾಮಯ್ಯ ಡಾ. ಕೆ. ಸುಧಾಕರ್
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+