• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಮೇ 17ರಿಂದ ಜಿಮ್, ಫಿಟ್ನೆಸ್ ಕೇಂದ್ರ ಓಪನ್?

|

ಬೆಂಗಳೂರು, ಮೇ 13: ಕೊರೊನಾವೈರಸ್ ಸೋಂಕು ಹರಡದಂತೆ ಮೂರು ಹಂತದಲ್ಲಿ ಲಾಕ್ಡೌನ್ ವಿಧಿಸಿರುವ ಸರ್ಕಾರವು ನಿರ್ಣಾಯಕ ಹೋರಾಟ ನಡೆಸಿದೆ. ಮೇ 17ರಂದು ಮೂರನೇ ಹಂತದ ಲಾಕ್ಡೌನ್ ಮುಕ್ತಾಯವಾಗಲಿದ್ದು, ನಾಲ್ಕನೇ ಹಂತದ ಲಾಕ್ಡೌನ್ ಹೇಗಿರಲಿದೆ? ಯಾವ ಯಾವ ಸೌಲಭ್ಯಗಳು ಸಿಗಲಿದೆ? ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಮೇ 17ರ ನಂತರ ಜಿಮ್, ಫಿಟ್ನೆಸ್ ಕೇಂದ್ರ, ಗಾಲ್ಫ್ ಕೋರ್ಸ್ ತೆರೆಯಲು ಅನುಮತಿ ನೀಡುವ ಸಾಧ್ಯತೆಯಿದೆ. ಸಾಮಾಜ ಅಂತರ ಕಾಯ್ದುಕೊಂಡು, ಸ್ವಚ್ಛತೆ ಕಾಪಾಡುವ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸುಳಿವು ನೀಡಿದ್ದಾರೆ.

ಎಚ್ಚರ! ಕೊರೊನಾ ವೈರಸ್ ಹರಡುವ ಅಪಾಯಕಾರಿ ಸ್ಥಳ ಜಿಮ್‌

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಬುಧವಾರದಂದು ಸಭೆ ನಡೆಸಿದ ಬಳಿಕ ಸಿ.ಟಿ ರವಿ ಪ್ರತಿಕ್ರಿಯಿಸಿದರು. ಹೋಟೆಲ್ ,ರೆಸ್ಟೊರೆಂಟ್ ಓಪನ್ ಮಾಡುವ ಬಗ್ಗೆ ಕೂಡಾ ಚರ್ಚೆ ನಡೆಸಲಾಯಿತು. ಈ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಅನುಸರಿಸಲಾಗುವುದು, ಪ್ರವಾಸೋದ್ಯಮಕ್ಕೆ ಬೇಕಾದ ಆರ್ಥಿಕ ನೆರವು, ಪುನಶ್ಚೇತನದ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪ್ರವಾಸಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಕಡ್ಡಾಯಗೊಳಿಸುವುದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಲಾಕ್‌ಡೌನ್‌: 800ಕ್ಕೂ ಅಧಿಕ ಫಿಟ್ನೆಸ್ ಸಿಬ್ಬಂದಿ ಕೆಲಸದಿಂದ ವಜಾ

ಈ ನಡುವೆ ಮೋದಿ ಅವರು ಘೋಷಿಸಿದ ಆರ್ಥಿಕ ಪ್ಯಾಕೇಜ್ ಹೊಗಳಿದರು. ದೇಶದಲ್ಲಿ ಘೋಷಿಸಲಾದ ಆರ್ಥಿಕ ಪ್ಯಾಕೇಜ್ ನಿಂದ ಮೂಲಸೌಕರ್ಯಕ್ಕೆ ಆದ್ಯತೆ ಕೊಡುವರ ಜೊತೆಗೆ ಟೆಕ್ನಾಲಜಿ ಬಳಸಿಕೊಂಡು ಜನಸಂಖ್ಯೆಯನ್ನೂ ಜೋಡಿಸಿಕೊಂಡು ಬೇಡಿಕೆ ಆಧರಿಸಿ ಲೋಕಲ್ ನಿಂದ ಗ್ಲೋಬಲ್ ವರೆಗೂ ತೆಗೆದುಕೊಂಡು ಹೋಗಲಿದೆ. ರೈತರು, ಕಾರ್ಮಿಕರು, ಮಧ್ಯಮವರ್ಗದವರು, ಉದ್ದಿಮೆದಾರರು ಸಹಿತ ಎಲ್ಲಾ ವರ್ಗದವರಿಗೂ ಕೊಡುಗೆಯಾಗಿ ನೀಡಿರುವ ಈ ಪ್ಯಾಕೇಜನ್ನು ಸ್ವಾಗತಿಸುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಪ್ರಧಾನಿ ಪ್ರಕಟಿಸಿರುವ ಈ ಪ್ಯಾಕೇಜ್ ಆರ್ಥಿಕ ವಿಷಯದಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ಭಾರತ ಜಾಗತಿಕವಾಗಿ ದೊಡ್ಡ ಪಾತ್ರವನ್ನು ವಹಿಸಲು ಕಾರಣೀಭೂತವಾಗುತ್ತದೆ ಎಂದು ಸಚಿವ ಸಿ.ಟಿ.ರವಿ ವಿಶ್ಲೇಷಣೆ ಮಾಡಿದರು.

English summary
Karnataka Tourism Minister C T Ravi on Wednesday hinted at the government permitting opening of gyms, fitness centres and golf courses after May 17 when the third phase of the COVID-19 induced lockdown comes to an end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X