Dam Water Level: ಮಳೆಗೆ ಕೆಆರ್‌ಎಸ್, ಹಾರಂಗಿ, ಕಬಿನಿ ಡ್ಯಾಂಗಳ ಒಳಹರಿವು ಹೆಚ್ಚಳ, 5000 ಕ್ಯೂಸೆಕ್ ರಿಲೀಸ್
ಬೆಂಗಳೂರು, ಜೂನ್ 07: ಕರ್ನಾಟಕದಾದ್ಯಂತ ವ್ಯಾಪಕ ಮಳೆ ಆರಂಭದ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಮಲೆನಾಡು, ಒಳನಾಡು ಹಾಗೂ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನಿರಂತರವಾಗಿ ಸುರಿದ ಉತ್ತಮ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪೂರ್ವ ಮುಂಗಾರು ಬಳಿಕ ಜೂನ್‌ನಿಂದ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಪರಿಣಾಮ ಈ ಕೆಳಗಿನ ಜಲಾಶಯಗಳಲ್ಲಿ ನೀರು ಹೆಚ್ಚಾಗುತ್ತಿದೆ.
ಹವಾಮಾನ ಇಲಾಖೆ ಪ್ರಕಾರ, ಕಳೆದೊಂದು ವಾರದಲ್ಲಿ ಕರಾವಳಿ ಹಾಗೂ ಕೆಲವು ಒಳನಾಡು ಜಿಲ್ಲೆಗಳನ್ನು ಬಿಟ್ಟರೆ ಕೊಡಗು, ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಗುದಿಂದ ಜೋರು ಮಳೆ ಆಗುತ್ತಲೇ ಇದೆ. ಇದರಿಂದ ಕೃಷ್ಣ ರಾಜ ಸಾಗರ (KRS Dam), ಹಾರಂಗಿ, ಹೇಮಾವತಿ ಸೇರಿದಂತೆ ಇನ್ನಿತರ ಅಣೆಕಟ್ಟುಗಳಲ್ಲಿ ಒಳಹರಿವು ಹೆಚ್ಚಳವಾಗಿದೆ. ಹೀಗಾಗಿ ನೀರಾವರಿ ಬಳಕೆಗಾಗಿ ಕಾಲುವೆ ಹಾಗೂ ನದಿಗೆ ಒಂದಷ್ಟು ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಹೊರಹರಿವು ಇದ್ದಾಗ ಡ್ಯಾಂ ಕೆಳಭಾಗದ ಜನರಿಗೆ ಪ್ರವಾಹ ಎಚ್ಚರಿಕೆ ಸಹ ನೀಡಲಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
* ಕಬಿನಿ ಅಣೆಕಟ್ಟಿನ ನೀರು ಸಂಗ್ರಹ ವಿವರ
ಒಟ್ಟು ನೀರಿನ ಸಾಮರ್ಥ್ಯ ಎಷ್ಟಿದೆ: 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ: 16.92 ಟಿಎಂಸಿ
ಒಳಹರಿವು: 2717 ಕ್ಯೂಸೆಕ್
ಹೊರಹರಿವು: 5000 ಕ್ಯೂಸೆಕ್
* ಹೇಮಾವತಿ ಜಲಾಶಯದ ಮಾಹಿತಿ
ಅಣೆಕಟ್ಟಿನ ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರು ಸಂಗ್ರಹ: 24.231 ಟಿಎಂಸಿ
ಒಳಹರಿವು ಮಟ್ಟ: 1658 ಕ್ಯೂಸೆಕ್
ಹೊರಹರಿವು ಮಟ್ಟ: 350 ಕ್ಯೂಸೆಕ್
* ಹಾರಂಗಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ
ಒಟ್ಟು ನೀರು ಶೇಖರಣಾ ಸಾಮರ್ಥ್ಯ: 8.5 ಟಿಎಂಸಿ
ಇಂದಿನ ನೀರಿನ ಸಂಗ್ರಹಣೆ : 6.25 ಟಿಎಂಸಿ
ಇಂದಿನ ಒಳಹರಿವು : 1344 ಕ್ಯೂಸೆಕ್ಸ್
ಇಂದಿನ ಹೊರಹರಿವು: 1320 ಕ್ಯೂಸೆಕ್ಸ್
* ಕೃಷ್ಣ ರಾಜ ಸಾಗರ (KRS) ಅಣೆಕಟ್ಟು
ಒಟ್ಟು ನೀರು ಶೇಖರಣಾ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರಿನ ಮಟ್ಟ: 29.737 ಟಿಎಂಸಿ
ಒಳಹರಿವು ಮಟ್ಟ: 4335 ಕ್ಯೂಸೆಕ್ಸ್
ಹೊರಹರಿವು ವಿವರ: ನದಿ : 864 ಕ್ಯೂಸೆಕ್
ಭಾರೀ ಮಳೆ ಮುಂದುವರಿಕೆ: ಡ್ಯಾಂ ಒಳಹರಿವು ಏರಿಕೆ
ಕರ್ನಾಟಕದಾದ್ಯಂತ ಮತ್ತೆ ಭಾರೀ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಜೂನ್ 12ರಿಂದ ಮೂರು ದಿನ ಕರಾವಳಿ ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆ (ಕನಿಷ್ಠ 110 ಮಿ.ಮೀ.) ಆಗಲಿದೆ ಎಂದು ಶನಿವಾರ ಭಾರತೀಯ ಹವಾಮಾನ ಇಲಾಖೆ ಅಪ್ಡೇಟ್ಸ್ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರಲ ಮಳೆ ಬರಲಿದೆ. ಈ ಸಂಬಂಧ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಸಹ ನೀಡಲಾಗಿದೆ. ಮುಂದಿನ ವಾರದ ರಾಜ್ಯ ಜಲಾಶಯಗಳಲ್ಲಿ ನೀರಿನ ಒಳ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications