Jowar Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ; ಇಲ್ಲಿದೆ ಜಿಲ್ಲಾವಾರು ಬೆಲೆ ಪಟ್ಟಿ

Jowar Price Today In Karnataka: ರಾಜ್ಯದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ ಮುಂದುವರಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಜೋಳದ ಬೆಳೆಯಲ್ಲಿ ರೈತರು ಈ ವರ್ಷ ಉತ್ತಮ ಇಳುವರಿ ಕಂಡಿದ್ದಾರೆ. ಉತ್ತಮ ಹಿಂಗಾರು ಮಳೆ, ಚಳಿಗಾಲದ ಸಂಪದ್ಭರಿತ ತೇವಾಂಶ ಕಾರಣದಿಂದ ನಿರೀಕ್ಷಿತ ಫಸಲು ಕೈಗೆ ಸಿಕ್ಕಿದೆ. ಆದರೆ ನಿರೀಕ್ಷಿತ ಬೆಲೆ ಕೆಲವೆಡೆ ದೊರೆತಿಲ್ಲ ಎನ್ನಲಾಗಿದೆ.

ಗದಗ, ಹುಬ್ಬಳ್ಳಿ-ಧಾರವಾಡ, ರಾಯಚೂರು, ದಾವಣಗೆರೆ, ಕಲಬುರಗಿ, ಬೀದರ್, ಕೊಪ್ಪಳ, ಬೆಳಗಾವಿ ಸೇರಿ ವಿವಿಧ ಭಾಗಗಳಲ್ಲಿ ಜೋಳ ಹೆಚ್ಚಾಗಿ ಬೆಳೆಯಲಾಗುತ್ತದೆ. ಜೊಳದ ಇಂದಿನ ದರ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 1205 ರಿಂದ ಗರಿಷ್ಠ 4500 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಒಂದೊಂದು ಮಾರುಕಟ್ಟೆಗಳಲ್ಲಿ ಒಂದೊಂದು ರೀತಿಯ ದರವಿದೆ. ಅದರ ಪಟ್ಟಿ ಮುಂದೆ ಕೊಡಲಾಗಿದೆ.

Karnataka Jowar Prices

ಕಳೆದ ವರ್ಷ ಎಷ್ಟಿತ್ತು ಜೋಳದ ಬೆಲೆ?

ಹಿಂಗಾರು ಬೆಳೆ (ರಾಬಿ) ಜೋಳದ ಬಿತ್ತನೆ ಈ ವರ್ಷ ಕಡಿಮೆ ಆಗಿದೆ. ಆದರೆ ಇಳುವರಿ ಉತ್ತಮವಾಗಿದೆ. ಹೀಗಿದ್ದರೂ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಗಳಲ್ಲಿ ಬೆಲೆ ಹೆಚ್ಚಿಲ್ಲ. ಕಳೆದ ವರ್ಷ 2025ರಲ್ಲಿ ಕನಿಷ್ಠ 2200 ರೂ.ನಿಂದ 5,500 ರೂ.ವರೆಗೆ ಪ್ರತಿ ಕ್ವಿಂಟಾಲ್ ಜೋಳ ಮಾರಾಟವಾಗಿತ್ತು. ಇನ್ನೂ 2025ರ ಏಪ್ರಿಲ್ ತಿಂಗಳಿನಲ್ಲಿ 2100 ರೂ.ನಿಂದ 3100 ರೂಪಾಯಿ ಇತ್ತು.

ಈ ವರ್ಷ 2026 ಏಪ್ರಿಲ್‌ನಲ್ಲಿ ಕೊಂಚ ಉತ್ತಮ ಬೆಲೆ ಇದೆಯಾದರೂ ಉತ್ತಮ ಫಸಲಿಲಿಗೆ ತಕ್ಕ ಬೆಲೆ ಇಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇನ್ನಷ್ಟು ಬೆಲೆ ಸಿಗಬಹುದೆಂದು ಕೆಲವು ರೈತರು ಕೈಗೆ ಬಂದ ಜೋಳವನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಮತ್ತೆ ಕೆಲವರು ಇಡಿಯಾಗಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡದೇ ಸಂತೆಗಳಲ್ಲಿ ಪ್ರತ್ಯೇಕ ಚೀಲ, ಒಂದು ಕ್ವಿಂಟಾಲ್ ಅಥವಾ ಸೇರುಗಳ ಲೆಕ್ಕದಲ್ಲಿ ಬಿಡಿಯಾಗಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಕೊಂಚ ಲಾಭವನ್ನು ಅವರು ಕಾಣುತ್ತಿದ್ದಾರೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 1 ಕ್ವಿಂಟಾಲ್ ಜೋಳದ ದರ ಎಷ್ಟಿದೆ?

* ಹುಬ್ಬಳ್ಳಿಯ ಅಮರಗೋಳ ಮಾರುಕಟ್ಟೆಯಲ್ಲಿ ಜೋಳದ ಬೆಲೆ ಕನಿಷ್ಠ 1205 ರೂ. ಮತ್ತು ಗರಿಷ್ಠ ದರ 4141ರೂ. ಇದೆ.

* ವಿಜಯಪುರದ ತಾಳಿಕೋಟೆಯಲ್ಲಿ ಕನಿಷ್ಠ ದರ 2629 ರೂ. ಮತ್ತು ಗರಿಷ್ಠ ದರ 2659 ರೂ. ಇದೆ

* ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಕನಿಷ್ಠ ದರ 2300 ರೂ. ಮತ್ತು ಗರಿಷ್ಠ 4500 ರೂ. ದರವಿದೆ.

* ಗದಗ ಮಾರುಕಟ್ಟೆಯಲ್ಲಿ ಕನಿಷ್ಠ ದರ 1312 ರೂ. ಮತ್ತು ಗರಿಷ್ಠ 5165 ರೂಪಾಯಿ ಇದೆ.

* ರಾಯಚೂರು ಮಾರುಕಟ್ಟೆಯಲ್ಲಿ ಕನಿಷ್ಠ 1900 ರೂ. ಮತ್ತು ಗರಿಷ್ಠ ದರ 2800 ರೂ. ಇದೆ.

* ಬೆಳಗಾವಿ ಮಾರುಕಟ್ಟೆಯಲ್ಲಿ ಕನಿಷ್ಠ ದರ 2900 ರೂ. ಮತ್ತು 3100 ಗರಿಷ್ಠ ದರವಿದೆ.

* ಹಾವೇರಿಯ ರಾಣೆಬೆನ್ನೂರಿನಲ್ಲಿ ಕನಿಷ್ಠ 2850 ರೂ. ಮತ್ತು ಗರಿಷ್ಠ 2850 ರೂ.ಇದೆ.

* ಕಲಬುರಗಿ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆ 3000 ರೂ. ಮತ್ತು ಗರಿಷ್ಠ 4500 ರೂಪಾಯಿ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+