3 ಶಾಸಕರು ಅನರ್ಹ, ಬಿಎಸ್ವೈ ಸಿಎಂ, ಸದನದ ಬಲಾಬಲ?
ಬೆಂಗಳೂರು, ಜುಲೈ, 26: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಜ್ಯಾಧ್ಯಕ್ಷ, ಶಿಕಾರಿಪುರದ ಶಾಸಕ ಬಿ.ಎಸ್ ಯಡಿಯೂರಪ್ಪ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ಸಂಜೆ 6 ಗಂಟೆ ನಂತರ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದಾರೆ.
ಸರ್ಕಾರ ರಚನೆ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲ ವಜುಭಾಯಿ ವಾಲ ಅವರ ಅನುಮತಿಯನ್ನು ಯಡಿಯೂರಪ್ಪ ಪಡೆದುಕೊಂಡಿದ್ದಾರೆ. ಆದರೆ, ಈ ನಡುವೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ, ಸರ್ಕಾರ ಉಳಿಸಿಕೊಳ್ಳಲು ಅಗತ್ಯ ಸಂಖ್ಯಾಬಲವನ್ನು ವಿಧಾನಸಭೆಯಲ್ಲಿ ಹೊಂದಿದೆಯೇ?
ನಿನ್ನೆ ದಿನ ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ ಬಳಿಕ, ಸದನದ ಸಂಖ್ಯಾಬಲದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ, ರಾಜ್ಯ ರಾಜಕೀಯದಲ್ಲಿ ಅತೃಪ್ತ ಶಾಸಕರು, ಯಡಿಯೂರಪ್ಪ ಹಾಗೂ ಸ್ಪೀಕರ್ ಮುಂದಿನ ನಡೆ ಕುತೂಹಲಕಾರಿಯಾಗಲಿದೆ.

10 ಕಾಂಗ್ರೆಸ್, 3 ಜೆಡಿಎಸ್ ಹಾಗೂ 2 ಪಕ್ಷೇತರ ಶಾಸಕರ ರಾಜೀನಾಮೆಯಿಂದ 225 ಸಂಖ್ಯಾಬಲದ 15ನೇ ವಿಧಾನಸಭೆಯ ಸಂಖ್ಯಾಬಲವು ಕುಸಿದಿತ್ತು. ಜುಲೈ 25ರಂದು ರಾತ್ರಿ ಸ್ಪೀಕರ್ ರಮೇಶ್ ಕುಮಾರ್ ಅವರು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್ ಶಂಕರ್ ಅವರನ್ನು 15ನೇ ವಿಧಾನಸಭೆ ಅವಧಿ(2023) ಮುಗಿಯುವ ತನಕ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು.
ಜುಲೈ 26ರಂದು
ವಿಧಾನಸಭೆ ಬಲಾಬಲ 222
ಮ್ಯಾಜಿಕ್ ನಂಬರ್: 112
ಬಿಜೆಪಿ : 105+1 (ಎಚ್ ನಾಗೇಶ್ ಬೆಂಬಲ)
ಬಿಎಸ್ಪಿ : 1 ತಟಸ್ಥ
ಕಾಂಗ್ರೆಸ್: 76
ಜೆಡಿಎಸ್ : 37
ಮೈತ್ರಿ : 112
ಅನರ್ಹ :3
ಬಿಜೆಪಿ ಬಹುಮತ ಸಾಬೀತುಪಡಿಸಲು 5 ಶಾಸಕರ ಕೊರತೆ ಎದುರಿಸಲಿದೆ. ಸ್ಪೀಕರ್ ರಮೇಶ್ ಅವರು ಆತುರವಾಗಿ ರಾಜೀನಾಮೆ ನೀಡಿದ ಉಳಿದ 14 ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ನಿರ್ಧಾರ ಕೈಗೊಂಡರೆ ಮತ್ತೊಮ್ಮೆ ಸಂಖ್ಯಾಬಲ ವ್ಯತ್ಯಾಸವಾಗಲಿದೆ.
ಅಥವಾ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಿದ ಜುಲೈ 23(ಮಂಗಳವಾರ)ದಂದೆ ಅಧಿವೇಶನಕ್ಕೆ 20 ಮಂದಿ ಶಾಸಕರು ಗೈರಾದರೆ, 208 ಸದಸ್ಯರ ಸಂಖ್ಯಾಬಲದಲ್ಲಿ 103 ಮ್ಯಾಜಿಕ್ ನಂಬರ್ ದಾಟುವುದು 105 ಬಲ ಹೊಂದಿರುವ ಬಿಜೆಪಿಗೆ ಕಷ್ಟವಾಗದು, ರಾಜೀನಾಮೆ ನೀಡಿರುವ 14 ಮಂದಿ ಶಾಸಕರನ್ನು ಮುಂಬೈನಲ್ಲೇ ಉಳಿಯುವಂತೆ ನೋಡಿಕೊಂಡರೂ, ಯಡಿಯೂರಪ್ಪಗೆ ವಿಶ್ವಾಸಮತ ಗೆಲ್ಲಲು ಸಾಧ್ಯವಾಗಲಿದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications